September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರಿನ ಧೀಮಹಿಯಲ್ಲಿ ಭರತನಾಟ್ಯ ತರಗತಿಗಳ ಉದ್ಘಾಟನೆ

ವೇಣೂರು: ಧೀಮಹಿ ಸನಾತನ ಪ್ರತಿಷ್ಠಾನ ಮಹಾವೀರ ನಗರ ವೇಣೂರು ರಾಷ್ಟ್ರದೇವೋಭವ ಧೀಮಹಿ ನಾಟ್ಯ ವೃಂದ ವೇಣೂರು  ಭರತನಾಟ್ಯ ತರಗತಿಗಳ ಉದ್ಘಾಟನಾ ಸಮಾರಂಭವು ಶ್ರೀಮತಿ ಗೌರಮ್ಮ ನರಸಿಂಹ ಭಟ್,  ಉಪಸ್ಥಿತಿಯಲ್ಲಿ ಜೂ. 28ರಂದು  ನೆರವೇರಿತು.

ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆಯನ್ನು ನೆರವೇರಿಸಿದ ಕರ್ನಾಟಕ ಕಲಾ ಶ್ರೀ ಪ್ರಶಸ್ತಿ ಪುರಸ್ಕೃತ ವಿದುಷಿ ಶ್ರೀಮತಿ ಶಾರದಾ ಮಣಿ ಶೇಖರ್ ಸನಾತನ ನಾಟ್ಯಲಯ ಮಂಗಳೂರು ಇವರು ಮಾತನಾಡುತ್ತ ಭಾರತೀಯ ನಾಟ್ಯ ಪರಂಪರೆಗಳಲ್ಲಿ ಭರತನಾಟ್ಯಕ್ಕೆ ಅಗ್ರಸ್ಥಾನ ಇದನ್ನು ಅಭ್ಯಾಸೀಸಬೇಕಾದರೆ ಅತಿಯಾದ ತಾಳ್ಮೆ ಸುದೀರ್ಘ ಅಭ್ಯಾಸ ಅತ್ಯಗತ್ಯ. ತನ್ನ ಗರಡಿಯಲ್ಲಿ ಪಳಗಿದ ಅನೇಕ ಭರತನಾಟ್ಯ ವಿದುಷಿಯರನ್ನು ಸ್ಮರಿಸುತ್ತಾ ಬಾಲ ಪ್ರತಿಭೆಗಳ ಉಜ್ವಲ ಭವಿಷ್ಯಕ್ಕೆ ಆಶೀರ್ವದಿಸಿದರು.  

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರಂಗಭೂಮಿ ಕಲಾವಿದರಾಗಿರುವ ನೇಮಯ್ಯ ಕುಲಾಲ್ ಮಾತನಾಡುತ್ತ ವೇಣೂರು ಪರಿಸರದ ಬಾಲ ಪ್ರತಿಭೆಗಳ ಅನಾವರಣದ ಮೂಲಕ  ಸನಾತನ ಧರ್ಮದ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಧೀಮಹಿ ಪ್ರತಿಷ್ಠಾನ ಶ್ರಮಿಸುತ್ತಿದೆ ಎಂದರು.

ಭರತನಾಟ್ಯ ತರಗತಿಯನ್ನು ನಡೆಸಿಕೊಡುವ ನಾಟ್ಯ ಗುರು ವಿದುಷಿ ಶ್ರವಣಕುಮಾರಿ ಹಲ್ಲನ್ ದೋಣಿ ಇವರು ಮಾತನಾಡುತ್ತ ವಿದ್ಯಾರ್ಥಿಗಳು ಭರತನಾಟ್ಯ ಅಭ್ಯಾಸವನ್ನು ತುಂಬಾ ಶ್ರದ್ಧೆಯಿಂದ ತಾಳ್ಮೆಯಿಂದ ವಿಧೇಯತೆಯಿಂದ ಕಲಿತು ಕರಗತಗೊಳಿಸಬೇಕೆಂದು ನುಡಿದರು.


ಭರತನಾಟ್ಯ ಶಿಶಿಕ್ಷುಗಳು  ನಾಟ್ಯ ಗುರುಗಳಾದ ವಿದುಷಿ, ಶ್ರೀಮತಿ ಶಾರದಾ ಮಣಿ ಶೇಖರ್ ಹಾಗೂ ಶ್ರವಣಕುಮಾರಿ ಇವರಿಂದ ನಾಟ್ಯ ದೀಕ್ಷೆಯನ್ನು  ಪಡೆದರು. ಕುಮಾರ ಸಿದ್ಧಿವಿನಾಯಕ ಭಟ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಧೀಮಹಿ ಪ್ರತಿಷ್ಠಾನದ ಸಂಸ್ಥಾಪಕ ಯಜ್ಞನಾರಾಯಣ ಭಟ್ ಪ್ರಾಸ್ತಾವಿಕದೊಂದಿಗೆ   ಸ್ವಾಗತಿಸಿದರು. ಜಗನ್ನಾಥ್ ದೇವಾಡಿಗರು ನಿರೂಪಿಸಿದ ಕಾರ್ಯಕ್ರಮವನ್ನು ಶ್ರೀಮತಿ ಪ್ರಮೀಳಾ ದಿನೇಶ್ ಬೆಂಗಳೂರು ವಂದಿಸಿದರು.

Related posts

ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ನಾರಾಯಣ ಪೂಜಾರಿ , ಕೆ.ಶ್ರೀಧರ್ ರಾವ್ ಆಯ್ಕೆ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಪ್ತ ಸಹಾಯಕನಿಗೆ ಸನ್ಮಾನ

Suddi Udaya

ಪಿಯುಸಿ ಫಲಿತಾಂಶ: ಪುತ್ತೂರಿನ ವಿವೇಕಾನಂದ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ: ಡಾ. ಡಿ ವೀರೇಂದ್ರ ಹೆಗ್ಗಡೆಯರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಿತ್ತಬಾಗಿಲು: ಮನೆಯ ಒಳಗೆ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟ ಉರಗ ತಜ್ಞ ಸ್ನೇಕ್ ಜಾಯ್

Suddi Udaya
error: Content is protected !!