September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಪ್ಪಿನಂಗಡಿ-ಕುಪ್ಪೆಟ್ಟಿ ಹೆದ್ದಾರಿಯಲ್ಲಿ ಮರಣ ಗುಂಡಿಗಳ ತಾಂಡವ: ದುಸ್ತರಗೊಂಡ ಸಂಚಾರ | ವಾಹನ ಸವಾರರಿಗೆ ತೀವ್ರ ಸಂಕಷ್ಟ: ಸುದ್ದಿ ಉದಯ ಜನಧ್ವನಿ

ಬೆಳ್ತಂಗಡಿ: ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಉಪ್ಪಿನಂಗಡಿ-ಕುಪ್ಪೆಟ್ಟಿ ಸಮೀಪದ ಪಿಲಿಗೂಡುವರೆಗಿನ ರಸ್ತೆಯ ಅನೇಕ ಕಡೆಗಳಲ್ಲಿ ದೊಡ್ಡ ದೊಡ್ಡ ಹೊಂಡ-ಗುಂಡಿಗಳು ಸೃಷ್ಟಿಯಾಗಿವೆ. ಕೃತಕ ಭಾವಿಯಂತೆ ಭಾರೀ ಪ್ರಮಾಣದ ಹೊಂಡಗಳು ತಾಂಡವಾಡುತ್ತಿದೆ. ಈ ಮರಣ ಗುಂಡಿಗಳು ಅವಘಡಕ್ಕೆ ಕಾರಣವಾಗುತ್ತಿದ್ದು, ವಾಹನ ಚಾಲಕರಿಗೆ, ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ.

ಆಳವಾಗಿರುವ ಹೊಂಡಗಳು: ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ತನಕದ 7 ಕಿಮೀ ವ್ಯಾಪ್ತಿಯ ಹೆದ್ದಾರಿಯ ನಾನಾ ಕಡೆಗಳಲ್ಲಿ ಉದ್ಭವಿಸಿರುವ ಹೊಂಡ ಗುಂಡಿಗಳಿಂದ ಸಂಚಾರ ಪ್ರಯಾಸವಾಗಿದೆ. ಹೊಂಡಗಳನ್ನು ಮುಚ್ಚುವ ಅಥವಾ ಮರು ಡಾಮರೀಕರಣ ಕಾಮಗಾರಿ ನಡೆದಿಲ್ಲ. ಈ 7 ಕಿಮೀ ವ್ಯಾಪ್ತಿಯಲ್ಲಿ ನೂರಾರು ಹೊಂಡಗಳಿದ್ದು ಅವುಗಳನ್ನು ತಪ್ಪಿಸಿ ವಾಹನ ಚಲಾಯಿಸುವುದು ಸವಾಲಾಗಿದೆ. ನೀರು ತುಂಬುವ ಈ ಹೊಂಡಗಳ ಆಳ ಅರಿವಾಗದೆ ಅವುಗಳಲ್ಲಿ ಎದ್ದು ಬಿದ್ದು ಸಾಗುವ ಅನೇಕ ವಾಹನಗಳು ಅಲ್ಲಲ್ಲಿ ಮುರಿದು ಬೀಳುತ್ತಿವೆ. ಇಲ್ಲಿ ದ್ವಿಚಕ್ರವಾಹನ ಸವಾರರಿಗೆ, ಪಾದಾಚಾರಿಗಳಿಗೆ ರಸ್ತೆ ಸಮೀಪದ ಅಂಗಡಿ, ಮನೆಗಳಿಗೆ ಕೆಸರಿನ ಸಿಂಚನ ಮಾಮೂಲಾಗಿದೆ.

ಸವಾರರ ಹರಸಾಹಸ : ಕರಾಯ ಮರಿಪಾದೆ ಗರಡಿ ಬಳಿ ಭಾರೀ ಪ್ರಮಾಣದ ಆಳವಾದ ಹೊಂಡಗಳು ಇದ್ದು ವಾಹನ ಸವಾರರು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗುಂಡಿಗಳ ನಡುವೆ ವಾಹನಗಳು ಎದ್ದುಬಿದ್ದು ಸಾಗುತ್ತಿದೆ. ಸಾಲು ಸಾಲಾಗಿ ಬಸ್, ಕಾರುಗಳ ಬಂಪರ್‌ಗಳು ಹಾನಿಯಾಗುತ್ತಿದೆ. ವಾಹನಗಳ ಅಡಿಭಾಗ ತಾಗಿ ನಿರ್ವಹಣೆಯ ವೆಚ್ಚ ದುಪ್ಪಟ್ಟಾಗಿದೆ. ಕುಪ್ಪೆಟ್ಟಿ ಪೇಟೆಯಲ್ಲಿ ಬೃಹತ್ ಗುಂಡಿಗಳು ಸೃಷ್ಟಿಯಾಗಿದ್ದು ಅದರಲ್ಲಿ ನೀರು ನಿಂತು ಗೋಚರಿಸದ್ದಂತೆ ಇದೆ, ಕುಪ್ಪೆಟ್ಟಿ ಮಸೀದಿ ಬಳಿ, ಕಲ್ಲೇರಿ ಪೇಟೆ, ಶಿವಗಿರಿ, ಕರಾಯ ಪೆಟ್ರೋಲ್ ಬಂಕ್ ಬಳಿ, ನೇಜಿಕಾರು, ಪೆದಮಲೆ ಹಾಗೂ ಕಡವಿನಬಾಗಿಲಿನ ಬಳಿ ಭಾರೀ ಪ್ರಮಾಣ ಆಳದಲ್ಲಿವೆ. ಪತ್ರಿಕೆಗಳು ವರದಿ ಪ್ರಕಟಿಸಿದರೆ ಇಲಾಖೆ ಒಮ್ಮೆಗೆ ಜಲ್ಲಿ ಹಾಕಿ ಮುಚ್ಚುತ್ತಾರೆ ಹೇಳಿ ಕೇಳಿ ಈಗಂತೂ ಮಳೆಗಾಲ ಒಂದೆರಡು ಮಳೆಗೆ ಅವುಗಳು ಎದ್ದುಹೋಗಿ ಹೊಂಡಗಳು ಯಥಾಸ್ಥಿತಿ ಕಾಯ್ದುಕೊಳ್ಳುತ್ತಿದೆ.


ಪುತ್ತೂರು, ಕಾರ್ಕಳ, ಸಹಿತ ನಾನಾ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದ್ದು ಉಪ್ಪಿನಗಂಡಿ ಹಾಗೂ ಗುರುವಾಯನಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬೆಸೆಯುತ್ತದೆ. ನಿತ್ಯ ಬಸ್, ಕಾರು ಬೈಕ್, ಘನ ವಾಹನದಂತಹ ನೂರಾರು ವಾಹನಗಳು ಸಂಚಾರಿಸುತ್ತಿದೆ. ಈ ರಸ್ತೆಯಲ್ಲಿ ಈ ಹಿಂದೆ ಲೋಕೋಪಯೋಗಿ ಇಲಾಖೆ ಸಚಿವರು ಪ್ರಯಾಣ ಬೆಳೆಸಿ ರಸ್ತೆ ಅಭಿವೃದ್ಧಿಗೆ ಭರವಸೆ ನೀಡಿದ್ದರು. ಆದರೆ ರಸ್ತೆಯ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳದಿರುವುದು ವಿಪರ್ಯಾಸವೇ ಸರಿ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆದ್ದಾರಿಯ ವಿಚಾರದಲ್ಲಿ ಸಮರ್ಪಕ ಯೋಜನೆ ರೂಪಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ರಸ್ತೆಯಲ್ಲಿ ಮರಣ ಬಾವಿ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಗುರುವಾಯನಕೆರೆಯಿಂದ ಪಿಲಿಗೂಡು ತನಕ ಮರು ಡಾಮರೀಕರಣ ನಡೆದಿರುವುದು ವಾಹನ ಸವಾರರಿಗೆ, ಚಾಲಕರಿಗೆ ಅನೂಕೂಲವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಮಾರ್ಗ ನಾನಾ ಭಾಗದಲ್ಲಿ ಪ್ರಸ್ತುತ ಇರುವ ಗುಂಡಿಗಳಿಗಿAತ ದೊಡ್ಡ ಗಾತ್ರದ ಗುಂಡಿಗಳು ರಚನೆಯಾಗುವುದಲ್ಲಿ ಸಂಶಯವಿಲ್ಲ. ಪ್ರಯಾಣಿಕರು ಹೊಂಡ ಗುಂಡಿಗಳ ರಸ್ತೆ ಮೇಲಿನ ಪ್ರಯಾಣದಿಂದಾಗಿ ಧಣಿಯುತ್ತಿದ್ದಾರೆ. ಅಜೀರ್ಣ ಹೊಟ್ಟೆಯುಬ್ಬರ, ಹೊಟ್ಟೆಯ ನೋವು ಮುಂತಾದ ಸಮಸ್ಯೆಗಳಿಗೆ ಪರಿಹಾರ ಈ ರಸ್ತೆಯಲ್ಲಿ ದೊರೆಯುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಾಸ್ಪದ ಸಂದೇಶಗಳು ವೈರಲ್ ಆಗುತ್ತಿದೆ. ಕೆಲವು ವಾಹನಗಳ ಚಾಲಕರು ಹೊಂಡ ತಪ್ಪಿಸುವ ಭರದಲ್ಲಿ ಹಾಗೂ ಗುಂಡಿಗಳು ಗೋಚರಿಸದೆ ಬಿದ್ದು ಆಸ್ಪತ್ರೆ ಸೇರಿಕೊಂಡವರು ಇದ್ದಾರೆ.

Related posts

ಅಂತರ್ ಕಾಲೇಜು ಚರ್ಚಾ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ -ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ತೃತೀಯ ಸ್ಥಾನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಕ್ಷೇತ್ರದ ವತಿಯಿಂದ ರಸ್ತೆಗೆ ಅಳವಡಿಸಿದ ಗೇಟು ತೆರವು

Suddi Udaya

ಧರ್ಮಸ್ಥಳ ಗ್ರಾಮವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಘೋಷಣೆ: ರಾಜ್ಯದ 5 ನಗರದಲ್ಲಿ, ಸುಮಾರು 6078 ಗ್ರಾ.ಪಂ ಗಳಲ್ಲಿ ಮೊದಲ ಗ್ರಾಮವಾಗಿ ಧರ್ಮಸ್ಥಳ ಗ್ರಾಮ ಆಯ್ಕೆ

Suddi Udaya

ಕೊಕ್ಕಡ: ಸೇಸಮ್ಮ ನಿಧನ

Suddi Udaya

ಪಶ್ಚಿಮಘಟ್ಟಗಳ ಸಾಲಿನ ಪ್ರವಾಸಿ ತಾಣಗಳು 6 ದಿನಗಳ ಕಾಲ ನಿರ್ಬಂಧ

Suddi Udaya

ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ

Suddi Udaya
error: Content is protected !!