March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯ ನ್ಯಾಯಾಲಯ ಮತ್ತು ವಕೀಲರ ಸಂಘಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್ ಭೇಟಿ

ಬೆಳ್ತಂಗಡಿ: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ್ ರವರು ಬೆಳ್ತಂಗಡಿಯ ನ್ಯಾಯಾಲಯ ಮತ್ತು ವಕೀಲರ ಸಂಘಕ್ಕೆ ಜು. 2 ರಂದು ಭೇಟಿ ನೀಡಿದರು.

ಈ ಸಂಧರ್ಭದಲ್ಲಿ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಸರ್ಕಾರದಿಂದ ಮಂಜೂರಾಗಿರುವ ಅನುದಾನದ ವಿಚಾರದಲ್ಲಿ ಬೆಳ್ತಂಗಡಿಯ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ರವರು ನೂತನ ನ್ಯಾಯಾಲಯದ ಸಂಕೀರ್ಣವನ್ನು ಈಗ ಇರುವ 60 ವರ್ಷ ಹಳೆಯದಾದ ಕಟ್ಟಡ ಇರುವ ಜಾಗದಲ್ಲಿಯೇ ನಿರ್ಮಿಸುವರೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿ ಆ ಬಗ್ಗೆ ಸಂಘದ ಪರವಾಗಿ ಮನವಿ ಸಲ್ಲಿಸಿದರು.

ಜಿಲ್ಲಾ ನ್ಯಾಯಾಧೀಶರಾದ ಬಸವರಾಜ್ ರವರು ಮಾತನಾಡುತ್ತಾ ವಕೀಲರ ಸಂಘದ ಮನವಿಯಂತೆ ಹೈಕೋರ್ಟ್ ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿ ಜು. 12 ರಂದು ನಡೆಯುವ ಲೋಕ ಅದಾಲತ್ ನಲ್ಲಿ ಹೆಚ್ಚು ಹೆಚ್ಚು ಪ್ರಕರಣಗಳನ್ನು ರಾಜಿ ಪಂಚಾಯತಿಕೆ ಮೂಲಕ ಇತ್ಯರ್ಥಪಡಿಸುವಂತೆ ಅವರು ವಕೀಲರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ, ಪ್ರಧಾನ ಹಿರಿಯ ಸಿವಿಲ್ ಮತ್ತು
ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಮನು ಬಿ. ಕೆ, ಪ್ರಧಾನ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಸಂದೇಶ್,
ಹೆಚ್ಚುವರಿ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ವಿಜಯೇಂದ್ರ ಟಿ ಎಚ್, ಹಿರಿಯ ವಕೀಲರ ಸಮಿತಿ ಚೇರ್ಮನ್ ಅಲೋಶಿಯಸ್ ಲೋಬೋ ಉಪಸ್ಥಿತರಿದ್ದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ ಸ್ವಾಗತಿಸಿ, ಹೆಚ್ಚುವರಿ ಸರ್ಕಾರಿ ವಕೀಲರಾದ ಮನೋಹರ ಕುಮಾರ್, ಎ ವಂದಿಸಿದರು.

Related posts

ಇತ್ತೀಚೆಗೆ ನಿಧನರಾದ ವೆಂಕಪ್ಪ ಗೌಡರವರ ಮನೆಗೆ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಭೇಟಿ

Suddi Udaya

ಕಳೆಂಜ: ಬಿಜೆಪಿ ಪ್ರಮುಖರು ಕಾಂಗ್ರೆಸ್ ಸೇರ್ಪಡೆ

Suddi Udaya

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಲಾಯಿಲ ಸೋಮವತಿ ಸೇತುವೆಯಲ್ಲಿ ಸಿಲುಕಿಕೊಂಡ ಮರಗಳ ತೆರವು ಕಾರ್ಯಾಚರಣೆ

Suddi Udaya

ಸೇವಾಭಾರತಿಗೆ 21ರ ಸಂಭ್ರಮ: ಡಿ.4 ನೂತನ ಕಾರ್ಯಾಲಯ ಸೇವಾನಿಕೇತನ ಉದ್ಘಾಟನಾ ಸಮಾರಂಭ

Suddi Udaya

ಬೆಳ್ತಂಗಡಿ : ದಾಖಲೆಗಳಿಲ್ಲದೆ ಕಬ್ಬಿಣದ ಗುಜರಿ ವಸ್ತು ಸಾಗಾಟ: ಲಾರಿ ವಶಕ್ಕೆ ಪಡೆದು ದಂಡ ವಿಧಿಸಿದ ವಾಣಿಜ್ಯ ತೆರಿಗೆ ಇಲಾಖೆ

Suddi Udaya

ಹೊಸಂಗಡಿ: ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಂದ ಉದ್ಘಾಟನೆ

Suddi Udaya
error: Content is protected !!