37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಕಂಪ್ಯೂಟರ್ ಡಿ.ಟಿ.ಪಿ ಮತ್ತು ಮಹಿಳಾ ಟೈಲರಿಂಗ್ ತರಬೇತಿಯ ಸಮಾರೋಪ

ಉಜಿರೆ : ನಾವು ಕೈಗೊಳ್ಳುವ ವೃತ್ತಿಯಲ್ಲಿ ಶಿಸ್ತು ಬಹುಮುಖ್ಯ. ನೀವು ಮಾಡುವ ಕೆಲಸದಲ್ಲಿ ಕಾರ್ಯಕ್ಷಮತೆ ಅನ್ನುವುದನ್ನು ಅಳವಡಿಸಿಕೊಂಡು ಆತ್ಮವಿಶ್ವಾಸ ಬೆಳೆಸಿಕೊಂಡು ಮುಂದುವರೆಯಬೇಕು. ವಿಶೇಷವಾಗಿ ಮಹಿಳೆಯರು ಸಮತೋಲನೆಯೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಸಮಯ ನಿರ್ವಹಣೆ ಮಾಡಿಕೊಳ್ಳಿ. ಗ್ರಾಹಕರ ಜೊತೆಗೆ ಉತ್ತಮ ಸಂವಹನ ಮಾಡಿ. ಉತ್ತಮವಾದ ಮನೋಭಾವ ಬೆಳಸಿಕೊಳ್ಳಿ. ಸರಕಾರದ ಮತ್ತು ಬ್ಯಾಂಕಿನ ಆರ್ಥೀಕ ಸಹಕಾರ ಪಡೆದುಕೊಂಡು ಮುಂದುವರೆಯಿರಿ. ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಇಂತಹ ಒಂದು ಉತ್ತಮವಾದ ಅವಕಾಶ ಕಲ್ಪಸಿಕೊಟ್ಟಿದ್ದಾರೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ವಿಭಾಗ ಡೀನ್ ಡಾ. ಸೌಮ್ಯ ಬಿ.ಪಿ ಅಭಿಪ್ರಾಯ ಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 45 ದಿನಗಳ ಕಾಲ ನಡೆದ ಕಂಪ್ಯೂಟರ್ ಡಿ.ಟಿ.ಪಿ ಮತ್ತ 30 ದಿನಗಳ ಕಾಲ ನಡೆದ ಮಹಿಳಾ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ಕಾರ್ಯಕ್ರಮದಲ್ಲಿ ಅತಿಥಿ ಉಪ್ಯಾಸಕಿಯಾದ ಶ್ರೀಮತಿ ವೀಣಾ ಉಪಸ್ಥಿತರಿದ್ದರು. ಕುಮಾರಿ ವಿಧ್ರಾತ್ರಿ ಪ್ರಾರ್ಥನೆ ಮಾಡಿದರು. ಶಿಬಿರಾರ್ಥೀಗಳಾದ ಬಸವರಾಜ್, ಶೃಜನ್ಯ, ದಿವ್ಯಾ, ವಿಧಾತ್ರಿ ತಮ್ಮ ತರಬೇತಿಯ ಅನುಭವ ಹಂಚಿಕೊಂಡರು.

Related posts

ಬಂದಾರು ಸ.ಹಿ. ಪ್ರಾ. ಶಾಲೆಯಲ್ಲಿ ಬೂತ್ ಸಂಖ್ಯೆ 217ರಲ್ಲಿ ತ್ರಾಂತಿಕ ದೋಷದಿಂದ ಮತದಾನ ಸ್ಥಗಿತ

Suddi Udaya

ಮುಂಡಾಜೆ : ಸುಷ್ಮಾ ಪಟವರ್ಧನ್ ನಿಧನ

Suddi Udaya

ಜಿಲ್ಲಾ ಮಟ್ಟದ ಕ್ಲೇ ಮಾಡೆಲಿಂಗ್ ಸ್ಪರ್ಧೆ : ಅಂಡಿಂಜೆ ಸ.ಉ. ಪ್ರಾ.ಶಾಲೆ ವಿದ್ಯಾರ್ಥಿ ಹಾಷಿಕ್ ಪ್ರಥಮ ಸ್ಥಾನ

Suddi Udaya

ಬಂದಾರು: ಬೈಹುಲ್ಲು ಸಾಗಾಟದ ಲಾರಿಗೆ ಬೆಂಕಿ

Suddi Udaya

ಶಿರ್ಲಾಲು ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಲಾಯಿಲ ಬಿಜೆಪಿ ಬೆಂಬಲಿತ ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya
error: Content is protected !!