March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜು.13: ಮಡಂತ್ಯಾರು ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾಧಕ ರೈತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

ಮಡಂತ್ಯಾರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ಸಾಧಕ ರೈತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಸ್ತಾಂತರ ಹಾಗೂ ಬೃಹತ್ ಉಚಿತ ಆರೋಗ್ಯ ಹಾಗೂ ಮಹಿಳೆಯರ ಕ್ಯಾನ್ಸರ್ ತಪಾಸಣಾ ಶಿಬಿರವು ಜು.13 ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಯಲಿದೆ.


ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್ಸ ಅವರ ಅಧ್ಯಕ್ಷತೆಯಲ್ಲಿ ರೈತ ಸದಸ್ಯರಿಗೆ ಅನುಕೂಲವಾಗುವಂತೆ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸಂಘದ ಕಾರ್ಯಕ್ಷೇತ್ರವು ಮಾಲಾಡಿ, ಸೋಣಂದೂರು, ಪಾರೆಂಕಿ, ಕುಕ್ಕಳ ಈ ನಾಲ್ಕು ಗ್ರಾಮಗಳನ್ನು ಒಳಗೊಂಡಿದ್ದು ಸಂಘದ 55ನೇ ವಾರ್ಷಿಕ ಮಹಾಸಭೆ ನಡೆಯಲಿದೆ.


ಸಂಘವು ಆರ್ಥಿಕ ವರ್ಷಾಂತ್ಯದಲ್ಲಿ ರೂ. ೪೫೫.೭೯ ಕೋಟಿ ಉತ್ತಮ ವ್ಯವಹಾರ ನಡೆಸಿ, ಶೇ. 97 ಸಾಲ ವಸೂಲಾತಿಯನ್ನು ಮಾಡಿ ರೂ. ೧,೬೨,೫೫,೭೫೬.೮೪ ಲಾಭ ಗಳಿಸಿದೆ. ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್ಸ, ಉಪಾಧ್ಯಕ್ಷ ಕಾಂತಪ್ಪ ಗೌಡ, ನಿರ್ದೇಶಕರಾಗಿ ಕೆ.ಅರವಿಂದ ಜೈನ್, ಶ್ರೀಮತಿ ಧನಲಕ್ಷ್ಮೀ , ಶ್ರೀಮತಿ ಅಮಿತಾ ಪ್ರಿಯಾ ಲೋಬೋ, ಸುರೇಶ್ ಎಸ್, ಕುಮಾರ ನಾಯ್ಕ, ಮಹಾಬಲ ಕೆ, ಗಣೇಶ್ ಮೂಲ್ಯ, ಗೋಪಾಲಕೃಷ್ಣ ಕೆ, ಕಿಶೋರ್ ಕುಮಾರ್ ಶೆಟ್ಟಿ, ಬಿ. ಪದ್ಮನಾಭ ಸಾಲಿಯಾನ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೋಕಿಂ ಡಿಸೋಜ ಕಾರ್ಯನಿರ್ವಹಿಸುತ್ತಿದ್ದಾರೆ.


ಕೃಷಿಕರಿಗೆ ಸನ್ಮಾನ: ಮಡಂತ್ಯಾರು ಸಹಕಾರಿ ಸಂಘದ ಕಾರ್ಯ ವ್ಯಾಪ್ತಿಯ ಕೃಷಿಕರಿಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಅತೀ ಹೆಚ್ಚು ಭತ್ತದ ಕೃಷಿ, ಹೆಚ್ಚು ಹಾಲು ಉತ್ಪಾದಿಸುವ ರೈತರಿಗೆ ಜೇನು ಕೃಷಿ ಮಾಡುವ ರೈತ, ತರಕಾರಿ ಬೆಳೆಯುವ ಒಬ್ಬ ರೈತನಿಗೆ ಪ್ರಶಸ್ತಿ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ.


ಪ್ರತಿಭಾ ಪುರಸ್ಕಾರ: ಸಂಘದ ಸದಸ್ಯರ ಮಕ್ಕಳು 2024-25ನೇ ಸಾಲಿನಲ್ಲಿ ಎಸೆಸೆಲ್ಸಿ, ದ್ವಿತೀಯ ಪಿಯುಸಿ/ತತ್ಸಮಾನ ತಾಂತ್ರಿಕ ಪರೀಕ್ಷೆಯಲ್ಲಿ ಶೇ.90, 2023-24 ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ.೮೦ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶ್ರೇಣಿ(RANK), CET/JEE/NEET ಪರೀಕ್ಷೆಯಲ್ಲಿ ಶ್ರೇಣಿ ಪಡೆದ ಮತ್ತು ರಾಜ್ಯ/ರಾಷ್ಟç ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದ/ ಆಯ್ಕೆಯಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.


ವಿದ್ಯಾರ್ಥಿ ವೇತನ: ಸದಸ್ಯರ ಮಕ್ಕಳು ೨೦೨೪-೨೫ ನೇ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಾಗೂ ದ್ವಿತೀಯ ಪಿಯುಸಿ / ತತ್ಸಮಾನ ತಾಂತ್ರಿಕ ಪರೀಕ್ಷೆಯಲ್ಲಿ ಶೇ.೯೫ ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ.೮೫ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಅಇಖಿ/ಎಇಇ/ಓಇಇಖಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.


ಸಾಲ ಸೌಲಭ್ಯಗಳು: ಸಂಘದ ಸದಸ್ಯರಿಗೆ ವಿಶೇಷ ಚಿನ್ನಾಭರಣ ಸಾಲ ಯೋಜನೆ, ರೂ. 1000 ಸಾಲಕ್ಕೆ ದಿನದ ಬಡ್ಡಿ ಕೇವಲ 26 ಪೈಸೆ, ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲ, ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯ, ಮೂರು ತಿಂಗಳ ಅತೀ ತ್ವರಿತ, ಆರು ತಿಂಗಳ ತ್ವರಿತ ಹಾಗೂ ವಾರ್ಷಿಕ ವಾಯಿದೆಯ ಸಾಮಾನ್ಯ ಆಭರಣ ಈಡು ಸಾಲಗಳು ಲಭ್ಯ. ಸಂಘದಲ್ಲಿ ಬೆಳೆಸಾಲ ಪಡೆದ ರೈತರಿಗೆ ಶೇ.0.50 ಹೆಚ್ಚುವರಿ ಬಡ್ಡಿ ರಿಯಾಯಿತಿಯಿದೆ. ಹಿರಿಯ ನಾಗರಿಕರಿಗೆ, ಸಂಘ ಸಂಸ್ಥೆ ವಿಧವೆಯರಿಗೆ ಶೇ 0.50 ಹೆಚ್ಚಿಗೆ ಬಡ್ಡಿ ಸೌಲಭ್ಯವಿದೆ.


ಬೃಹತ್ ಉಚಿತ ಆರೋಗ್ಯ ಹಾಗೂ ಮಹಿಳೆಯರ ಕ್ಯಾನ್ಸರ್ ತಪಾಸಣಾ ಶಿಬಿರ:
ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ, ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ಫಾ| ಎಲ್.ಎಂ. ಪಿಂಟೋ ಆಸ್ಪತ್ರೆ, ಬದ್ಯಾರು ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಹಾಗೂ ರಾಷ್ಟಿçÃಯ ಸೇವಾ ಯೋಜನೆ ಮತ್ತು ಯೂತ್ ರೆಡ್ ಕ್ರಾಸ್ ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ಹಾಗೂ ಮಹಿಳೆಯರ ಕ್ಯಾನ್ಸರ್ ತಪಾಸಣಾ ಶಿಬಿರವು ವಾರ್ಷಿಕ ಮಹಾಸಭೆಯ ದಿನದಂದು ಬೆಳಿಗ್ಗೆ 9 ರಿಂದ ನಡೆಯಲಿದೆ.
ಶಾಸಕ ಹರೀಶ್ ಪೂಂಜ ಉದ್ಘಾಟನೆ ಮಾಡಲಿದ್ದಾರೆ, ಧರ್ಮಗುರುಗಳು ವಂ.ಸ್ವಾಮಿ ಡಾ.ಸ್ಟಾನಿ ಗೋವಿಯಸ್ ದೀಪ ಪ್ರಜ್ವಲಿಸಲಿದ್ದಾರೆ, ಸಂಸದ ಕ್ಯಾ.ಬ್ರಿಜೇಶ್ ಚೌಟ ಜಾಲತಾನ ಅನಾವರಗೊಳಿಸಲಿದ್ದಾರೆ. ಅತಿಥಿಗಳಾಗಿ ಎಂಎಲ್ಸಿ ಕೆ. ಪ್ರತಾಪಸಿಂಹ ನಾಯಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಕುಶಾಲಪ್ಪ ಗೌಡ ಪೂವಾಜೆ ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್ಸ ತಿಳಿಸಿದ್ದಾರೆ.

Related posts

ಮದ್ದಡ್ಕ: ಹೆದ್ದಾರಿಯ ಕೆಲಸ ಕಾಮಗಾರಿಯಲ್ಲಿ ಮಾರ್ಗವನ್ನು ಎತ್ತರವಾಗಿಸಿದ್ದರಿಂದ ಪರಿಸರದ ಜನರಿಗೆ ತೊoದರೆ: ಮಾರ್ಗವನ್ನು ತಗ್ಗಿಸಿ ಕಾಮಗಾರಿ ನಡೆಸುವoತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರವರಿಗೆ ಮನವಿ

Suddi Udaya

ಬೆಳ್ತಂಗಡಿ ಪಿ.ಎಂ. ಶ್ರೀ ಸರಕಾರಿ ಮಾ. ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳ ಮೆಟ್ರಿಕ್ ಮೇಳ – ವ್ಯವಹಾರಿಕ ಜ್ಞಾನಕ್ಕೆ ವೇದಿಕೆ

Suddi Udaya

ಬಾರ್ಯ ಪ್ಯಾಕ್ಸ್ ಚುನಾವಣೆ: 12 ಸ್ಥಾನಗಳಿಗೆ ಅಂತಿಮ ಕಣದಲ್ಲಿ24 ಮಂದಿ ಅಭ್ಯರ್ಥಿಗಳು: ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಪೈಪೋಟಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ಹಾಗೂ ಸಂಘದ ಸದಸ್ಯರ ಸಹಕಾರದಿಂದ ಪುದುವೆಟ್ಟು ಬಾಯಿತ್ತ್ಯಾರು ಎಂಬಲ್ಲಿ ನಿರ್ಮಿಸಿದ ನೂತನ ಗೃಹ ‘ಉನ್ನತಿ ನಿಲಯ ’ ಇದರ ಹಸ್ತಾಂತರ ಕಾರ್ಯಕ್ರಮ

Suddi Udaya

ದ.ಕ ಜಿಲ್ಲಾ ಮಟ್ಟದ ಕೆ.ಡಿ.ಪಿ ಸಮಿತಿ ಸದಸ್ಯರಾಗಿ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ ನೇಮಕ

Suddi Udaya
error: Content is protected !!