September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಬೆಳ್ತಂಗಡಿ

ಬಾರ್ಯ ಪ್ಯಾಕ್ಸ್ ಚುನಾವಣೆ: 12 ಸ್ಥಾನಗಳಿಗೆ ಅಂತಿಮ ಕಣದಲ್ಲಿ24 ಮಂದಿ ಅಭ್ಯರ್ಥಿಗಳು: ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಪೈಪೋಟಿ

ಬಾರ್ಯ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ 12 ಸ್ಥಾನಗಳಿಗೆ ಚುನಾವಣೆ ಸಿದ್ದಗೊಂಡಿದ್ದು 24ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಬಾರ್ಯ ಪರಿಸರದಲ್ಲಿ ಚುನಾವಣೆಯ ಕಾವು ಈಗಾಗಲೇ ಪಸರಿಸಿದ್ದು 1322 ಮಂದಿ ಮತದಾರರಿದ್ದು ನ.೫ರಂದು ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಬಾರ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮತದಾನ ನಡೆಯಲಿದೆ.

ಅ.25ರಂದು ನಾಮಪತ್ರ ಸಲ್ಲಿಕೆಯಾಗಿ, ಅ.29ರಂದು ಪರಿಶೀಲನೆಗೊಂಡು ಅ.30ರಂದು ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದ್ದು ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ 12 ಮಂದಿ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ 12 ಮಂದಿ ಅಭ್ಯರ್ಥಿಗಳು ನಡುವೆ ಪೈಪೋಟಿ ನಡೆಯಲಿದೆ.

ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಸಾಮಾನ್ಯ ಸ್ಥಾನದಿಂದ 6 ಮಂದಿ, ಅನುಸೂಚಿತ ಜಾತಿ ಹಾಗೂ ಪಂಗಡ ಮೀಸಲುವಿನಿಂದ, ಹಿಂದುಳಿದ ವರ್ಗ “ಎ” ಹಾಗೂ “ಬಿ” ಮೀಸಲು ಸ್ಥಾನದಿಂದ ತಲಾ ಒಂದರಂತೆ ಹಾಗೂ ಮಹಿಳಾ ಮೀಸಲು ಎರಡು ಸ್ಥಾನಗಳಿಗೆ ಸ್ಪರ್ಧೆ ಏರ್ಪಟ್ಟಿದೆ.

ಸಾಮಾನ್ಯ ಸ್ಥಾನದಿಂದ ಆಶ್ರಫ್, ಪಿ.ಕೆ. ಉಸ್ಮಾನ್, ಗುರುಪ್ರಸಾದ್, ಚಂದ್ರಶೇಖರ್ ಕುಂಡಡ್ಕ, ಚಂದ್ರಶೇಖರ ಪೊರ್ಕಳ, ಪ್ರವೀಣ್ ರೈ, ಪ್ರಸನ್ನ ಗೌಡ, ಪ್ರಶಾಂತ್ ಪೈ ಎ, ಬಾಲಕೃಷ್ಣ ಶೆಟ್ಟಿ, ಶಿವಪ್ರಸಾದ್, ಮೋಹನ್ ಗೌಡ, ಹರ್ಷಿತ್ ಕೆ, ಹಿಂದುಳಿದ ವರ್ಗ “ಎ”ನಿಂದ ಶೀಧರ್ ಎನ್ ಮತ್ತು ಶೇಷಪ್ಪ ಸಾಲಿಯಾನ್, ಹಿಂದುಳಿದ ವರ್ಗ “ಬಿ”ನಿಂದ ಕಾಂತಪ್ಪ ಗೌಡ ಮತ್ತು ರಾಜೇಶ್ ರೈ, ಪರಿಶಿಷ್ಟ ಪಂಗಡದಿಂದ ಪುಷ್ಪಾ ಮತ್ತು ಶಿವಾರಮ್, ಪರಿಶಿಷ್ಟ ಜಾತಿಯಿಂದ ಜಯಂತಿ ಮತ್ತು ಸುರೇಶ ಸುಣ್ಣಾಜೆ ಮಹಿಳಾ ಮೀಸಲು ಕ್ಷೇತ್ರದಿಂದ ಉಷಾ, ಸರೋಜಿನಿ, ಸವಿತಾ ಹಾಗೂ ಹೇಮಾವತಿ ಅವರುಗಳ ನಡುವೆ ಪೈಪೋಟಿ ನಡೆಯಲಿದೆ.

Related posts

ರಂಝಾನ್ ಪ್ರಯುಕ್ತ ಮದ್ದಡ್ಕದಲ್ಲಿ ವಿಶಿಷ್ಟ ಕಾರ್ಯಕ್ರಮ: 50 ಕುಟುಂಬಕ್ಕೆ ರಂಝಾನ್ ಕಿಟ್ , 25 ಕುಟುಂಬಕ್ಕೆ “ಝಕಾತ್ ದಾನ ನಿಧಿ”, ಶೈಕ್ಷಣಿಕ ನಿಧಿ‌ ಹಸ್ತಾಂತರ

Suddi Udaya

ಇಲಂತಿಲ: ಮರದಿಂದ ಬಿದ್ದಿದ್ದ ನಾರಾಯಣ ಪೂಜಾರಿರವರು ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಕುವೆಟ್ಟು; ವಿಕಲಚೇತನರ ಸಮನ್ವಯ ಗ್ರಾಮಸಭೆ : ವಿಕಲಚೇತನರಿಗೆ ರೂ.2.15 ಲಕ್ಷ ನೆರವಿನ ಚೆಕ್ ವಿತರಣೆ

Suddi Udaya

ಕಳೆಂಜ: ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ ಹಾಗೂ ಮರ: ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಗ್ರಾಮಸ್ಥರಿಂದ ತೆರವು ಕಾರ್ಯ

Suddi Udaya

ಏ.9: ನಾವರದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿಯಿಂದ “ನಾಗರತಿ” ಯಕ್ಷಗಾನ

Suddi Udaya

ಎಸ್.ಡಿ.ಎಂ ವಸತಿ ಪಪೂ ಕಾಲೇಜಿನ ಪ್ರವೇಶೋತ್ಸವ ಸಮಾರಂಭ

Suddi Udaya
error: Content is protected !!