ಅಳದಂಗಡಿ: ಅಳದಂಗಡಿಯ ಪ್ರತಿಷ್ಠಿತ ನೊಚ್ಚ ಮನೆತನದ ಕುವರಿ ನಿಯತಿ ಇವರು ಅಮೇರಿಕಾದ ನಾರ್ತ್ಕೆರೋಲಿನಾದ ರ‍್ಯಾಲಿಯಲ್ಲಿ ನಡೆದ ಆಲ್ ಅಮೇರಿಕಾ ತುಳು ಕೂಟದ ಸಿರಿಪರ್ಬ ಕಾರ್ಯಕ್ರಮದಲ್ಲಿ ನಿರೂಪಣೆ, ಶಾಸ್ತಿçÃಯ ಸಂಗೀತ ಮತ್ತು ಯಕ್ಷಗಾನ ನಾಟ್ಯವನ್ನು ಪ್ರದರ್ಶಿಸಿ ಎಲ್ಲರಿಂದ ಪ್ರಶಂಸೆಯನ್ನು ಪಡೆದಿದ್ದಾರೆ.
ಬಾಲ್ಯದಿಂದಲೇ ಕಲೆ, ಸಾಹಿತ್ಯ, ನಾಟ್ಯ, ನಿರೂಪಣೆ, ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಕುಟುಂಬದಿAದ ಕೂಡ ಉತ್ತಮ ಪ್ರೋತ್ಸಾಹ ದೊರತಿದೆ. ಇವರು ಅಳದಂಗಡಿ ನೊಚ್ಚ ಮನೆಯ ಉದಯ ಕುಮಾರ್ ಶೆಟ್ಟಿ ಮತ್ತು ಶ್ರೀಲತಾ ಶೆಟ್ಟಿ ಇವರ ಪುತ್ರಿಯಾಗಿದ್ದು, ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.











