38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ: ಶಾಲಾ ಮಕ್ಕಳು, ದ್ವಿಚಕ್ರ ವಾಹನ ಸವಾರರಿಗೆ ತಂದೊಡ್ಡಿದ ಸಂಕಷ್ಟ

ಗುರುವಾಯನಕೆರೆ: ಇಲ್ಲಿಯ ಗುರುವಾಯನಕೆರೆ ಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರವಾಗಿದ್ದು, ವಾಹನ ಚಾಲಕರಿಗೆ, ಶಾಲಾ ಕಾಲೇಜುಗಳಿಗೆ ನಡೆದುಕೊಂಡು ಹೋಗುವ ಮಕ್ಕಳಿಗೆ ಹಾಗೂ ಪಾದಾಚಾರಿಗಳಿಗೆ ಸಂಕಷ್ಟ ಎದುರಾಗಿದೆ.

ಗುರುವಾಯನಕೆರೆ ಬಸ್‌ನಿಲ್ದಾಣ ಪರಿಸರದಲ್ಲಿ ಗುಂಪಾಗಿ ನಾಯಿಗಳು ಓಡಾಡುತ್ತಿದೆ. ವಾಹನಗಳು ಬಂದಾಗ ಅಡ್ಡಾದಿಡ್ಡಿ ಓಡುವುದರಿಂದ ದ್ವಿಚಕ್ರ ಸವಾರರಿಗೆ ಬಹಳಷ್ಟು ಅಪಾಯವನ್ನು ತಂದೊಡ್ಡಿದೆ. ರಸ್ತೆಯಲ್ಲಿ ಶಾಲೆಗಳಿಗೆ ನಡೆದುಕೊಂಡು ಹೋಗುವ ಪುಟ್ಟ ಮಕ್ಕಳ ಮೇಲೆರೆಗಳು ನಾಯಿಗಳು ಬರುತ್ತಿದೆ. ಗುಂಪಾಗಿ ಎಂಟರಿಂದ ಹತ್ತು ನಾಯಿಗಳ ಹಿಂಡು ಗುರುವಾಯನಕೆರೆ ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ಕಂಡು ಬರುತ್ತಿದೆ. ವಾಹನಗಳು ಬರುವಾಗ ನಾಯಿಗಳ ಹಿಂಡು ಆ ಕಡೆ, ಈ ಕಡೆ ಓಡಾಟ ನಡೆಸುವುದರಿಂದ ವಾಹನ ಅಪಘಾತಗಳು ನಡೆಯುವ ಸಾಧ್ಯತೆಯೂ ಇದೆ. ಯಾವುದೇ ಅಪಾಯ ಆಗುವ ಮೊದಲು ಇದರ ಬಗ್ಗೆ ಸಂಬಂಧಪಟ್ಟವರು ಶೀಘ್ರ ಕ್ರಮಗಳನ್ನು ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

Related posts

ವೇಣೂರು ಶ್ರೀಗು.ಸ್ವಾ.ಸೇ. ಸಂಘ, ಯುವವಾಹಿನಿ ವೇಣೂರು ಘಟಕ ಹಾಗೂ ಬಂಗೇರ ಅಭಿಮಾನಿ ಬಳಗ ವತಿಯಿಂದ ಮಾಜಿ ಶಾಸಕ ಕೆ ವಸಂತ ಬಂಗೇರಿಗೆ ನುಡಿನಮನ

Suddi Udaya

ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ್ ಅಜಿಲರಿಂದ ಹನುಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಸ್ವಾಮೀಜಿಗಳ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ

Suddi Udaya

ಕೊಕ್ಕಡ: ಕಾಡಾನೆಗಳ ಹಾವಳಿ : ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬೀದಿ ಬದಿಯ ಅಂಗಡಿಗಳ ತೆರವು ಕಾರ್ಯ

Suddi Udaya

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ರವರಿಗೆ ಅಂತಾರಾಷ್ಟ್ರೀಯ “ಏಷಿಯಾ ಪೆಸಿಫಿಕ್ ಐಕಾನ್ ಅವಾರ್ಡ್ಸ್”

Suddi Udaya

ವಿಧಾನ ಪರಿಷತ್ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya
error: Content is protected !!