March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿವೃತ್ತಿಗೊಂಡ ಮುರಳಿ ಕೃಷ್ಣ ಆಚಾರ್ಯರಿಗೆ ಬಲ್ಮಠ ಸ.ಪ್ರ.ದ. ಮಹಿಳಾ ಕಾಲೇಜಿನಲ್ಲಿ ಸನ್ಮಾನ

ಬಲ್ಮಠ: ಖಾಸಗಿ ಅಥವಾ ಸರಕಾರಿ ಸೇವಾ ವಿಭಾಗಗಳಲ್ಲಿ ಸಾವಿರಾರು ಮಂದಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುತ್ತಾರೆ. ಅದೊಂದು ಸಹಜ ಪ್ರಕ್ರೀಯೆ. ಸರಕಾರ ನಿರ್ಧರಿಸಿದ ಪ್ರಾಯ ತಲಪಿದಾಗ ಅವರೆಲ್ಲರೂ ಅಧಿಕಾರವನ್ನು ಅಥವಾ ಹುದ್ದೆಯನ್ನು ಬಿಟ್ಟು ನಿವೃತ್ತಿ ಹೊಂದಿ ಇವರ ಪ್ರವೃತ್ತಿಗಳಲ್ಲಿ ತೊಡಗಿಕೊಳ್ತಾರೆ. ಸಹಸ್ರ ಸಹಸ್ರ ಸಂಖ್ಯೆಯ ಅಧ್ಯಾಪಕರೂ ವಿದ್ಯಾರ್ಥಿಗಳಿಗೆ ಗುರುಗಳೆನಿ ನಿವೃತ್ತರಾಗುತ್ತಾರೆ. ಆದರೆ ಕೃಷ್ಣ ಆಚಾರ್ಯರು ಅದಕ್ಕಿಂತ ಭಿನ್ನ. ನನ್ನಂತಹ 78 ವರ್ಷದ ಮುದುಕರಿಗೂ ಗುರುಗಳು. ಬಿ.ಎಡ್ ವಿದ್ಯಾರ್ಥಿಗಳಿಗೆ, ಡಿಗ್ರಿ ವಿದ್ಯಾರ್ಥಿಗಳಿಗೆ, ಪದವಿ ಪೂರ್ವದವರಿಗೆ, ಪ್ರೌಢ ಮತ್ತು ಪ್ರಾಥಮಿಕದವರಿಗೆ, ಶಿಕ್ಷಕ ವೃಂದಕ್ಕೆ, ಇತರ ಅನೇಕ ಇಲಾಖೆಗಳಿಗೆ, ಹೆತ್ತವರಿಗೆ, ಗ್ರಾಮಸ್ತರಿಗೆ, ನಾಗರಿಕರಿಗೆ, ಕಲಾವಿಧರಿಗೆ ಹೀಗೆ ಹೇಳುತ್ತಾ ಹೋದರೆ ಆಚಾರ್ಯರಿಂದ ಮಾರ್ಗದರ್ಶನ ಪಡೆಯದ ವರ್ಗವೇ ಇಲ್ಲ. ಆದ್ದರಿಂದ ಅವರು ನಿಜವಾಗಿಯೂ ಸಕಲರ ಗುರು. ಸಕಲರ ಆಚಾರ್ಯರು ಇಂತಹ ಸಾಮರ್ಥ್ಯ ಕೆಲವೇ ಕೆಲವರಿಗೆ ಮಾತ್ರ ಸಾಧ್ಯ” ಎಂದು ತಾನು ಆಚಾರ್ಯರಿಂದ ಸಂಸ್ಕೃತ ಕಲಿತ ಬಗ್ಗೆ ಪ್ರಸ್ತಾಪಿಸುತ್ತ ಶುಭ ವಿದಾಯದ ಮಾತುಗಳನ್ನು ಮೂಡಾದ ಮಾಜಿ ಅಧ್ಯಕ್ಷ, ಶಿಕ್ಷಣ ಪ್ರೇಮಿ, ರಾಷ್ಟ್ರಮಟ್ಟದ ಆಟಗಾರ, ಬಲ್ಮಠ ವಿದ್ಯಾಸಂಸ್ಥೆಗಳ ಕಾರ್ಯಾಧ್ಯಕ್ಷ ತೇಜೋಮಯ ಹೇಳಿದರು.

38 ವರ್ಷಗಳ ಸುಧೀರ್ಘ ಸೇವೆ ಪೂರೈಸಿ ಜೂ. 30 ಕ್ಕೆ ಸರಕಾರಿ ಸೇವೆಯಿಂದ ನಿವೃತ್ತರಾದ ಕೃಷ್ಣ ಆಚಾರ್ಯರ ಬೀಳ್ಕೊಡುಗೆ ಸಮಾರಂಭವನ್ನು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಮಂಗಳೂರು ಇಲ್ಲಿ ಉದ್ಘಾಟಿಸಿದ ತೇಜೋಮಯರು ಶಿಕ್ಷಕರ ವ್ಯಕ್ತಿತ್ವವನ್ನು ಕೊಂಡಾಡಿದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಜಗದೀಶ ಬಾಳ, ಪಿಯುಸಿ ಪ್ರಿಸ್ಸಿ ವನಿತಾ ದೇವಾಡಿಗ, ಮುಖ್ಯ ಶಿಕ್ಷಕ ಅಬ್ದುಲ್ ಖಾದರ್, ಶಿಕ್ಷಕರ ಸಂಘದ ಅಧ್ಯಕ್ಷ ವಾಸುದೇವ ರಾವ್, ಹರೀಶ್ ಕುಮಾರ್, ಆದಂ ಮಣಿನಾಲ್ಕೂರು, ಸುಮಾಭಟ್, ಚೆಲುವಮ್ಮ, ಶಶಿಕಲಾ ಮುಂತಾದವರು ನಿವೃತ್ತರ ಬದುಕಿಗೆ ಶುಭ ಹಾರೈಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಶೈಲಾಶ್ರೀ ಸಭಾ ಅಧ್ಯಕ್ಷತೆ ವಹಿಸಿ ಶುಭಕೋರಿದರು. ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ಶೆಟ್ಟಿ ಸ್ವಾಗತಿಸಿದರು. ಮರ್ಲಿನ್ ಮೇಬಲ್ ಮಸ್ಕರೇನ್ಹನ್ ಸನ್ಮಾನ ಪತ್ರ ವಾಚಿಸಿದರು. ಲವಿನಾ ಕುಟಿನ್ದೊ ಧನ್ಯವಾದವಿತ್ತರು. ಕವಿತಾ ಕಾರ್ಯಕ್ರಮ ನಿರೂಪಿಸಿದರು .


ಸನ್ಮಾನ ಸ್ವೀಕರಿಸಿದ ಮಾತನಾಡಿದ ಕೃಷ್ಣ ಆಚಾಯ೯ರು ” ಸೇವಾ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿ ಸಕಲೇಶಪುರ, ಹೊಳೆನರಸಿಪುರ, ಮಧ್ವ , ಕಕ್ಕೆಪದವು, ಮಣಿನಾಲ್ಕುರು, ಪುಂಜಾಲಕಟ್ಟೆ, BRC ಬೆಳ್ತಂಗಡಿ ಮತ್ತು ಬಲ್ಮಠ ಮುಂತಾದ ಕಡೆ ಕರ್ತವ್ಯದ ವಿಶೇಷತೆ ತಿಳಿಸಿದರು. ಎಲ್ಲರೂ ತಪ್ಪುಗಳನ್ನು ಮಾಡಿ ಹೆಚ್ಚು ಅನುಭವಗಳಿಸುತ್ತಾರೆ ಆದರೆ ಆ ಅನುಭವಗಳು ತಪ್ಪುಗಳು ಕಡಿಮೆ ಆಗುವಂತೆ ಮಾಡಿದಾಗಲೇ ಜೀವನ ಸಾರ್ಥಕ ಎಂದರು. ಪತ್ನಿ ಸುಗುಣ ಆಚಾರ್, ಮಗ ಸಮೃದ್ ಆಚಾರ್ ಮಗಳು ಸಮೀಕ್ಷಾ ಆಚಾರ್ ಉಪಸ್ಥಿತರಿದ್ದರು.

Related posts

ಎಂ ನಾರಾಯಣ ಬೇಗೂರ್ ರವರಿಗೆ ಶ್ರೀ ರಾಘವೇಂದ್ರ ಮಠದಲ್ಲಿ ಅಭಿನಂದನೆ

Suddi Udaya

ಕಳಿಯ : ಕೊರಂಜ ಶಾಲೆಯ ಬಾವಿ ಹಾಗೂ ಆವರಣ ಗೋಡೆ ಮೇಲೆ ಮರ ಬಿದ್ದು ಹಾನಿ

Suddi Udaya

ಬೆದ್ರಬೆಟ್ಟು ಮರಿಯಾಂಬಿಕಾ ಆಂ.ಮಾ. ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಬೆಳ್ತಂಗಡಿ: ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ವಾರ್ಷಿಕೋತ್ಸವ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಮಹಿಳಾ ದಿನಾಚರಣೆ

Suddi Udaya

ಹಿರಿಯರ ಆಶಯವನ್ನು ಎತ್ತಿ ಹಿಡಿಯಲು ಸ್ವಾತಂತ್ರೋತ್ಸವ ಪ್ರೇರಣೆಯಾಗಲಿ : ಬಿ.ಎಂ.ಭಟ್

Suddi Udaya
error: Content is protected !!