ತಾಲೂಕು ಸುದ್ದಿವರದಿ

ಉಜಿರೆ ಅನುಗ್ರಹ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ಉಜಿರೆ: ಅನುಗ್ರಹ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ದ ಉದ್ಘಾಟನೆಯು ಜು. 12 ರಂದು ಕಾಲೇಜಿನ ಆಡಿಟೋರಿಯಂನಲ್ಲಿ ಜರಗಿತು.

ಸಂಸ್ಥೆಯ ಸಂಚಾಲಕರಾದ ವಂದನೀಯ. ಫಾ. ಅಬೆಲ್ ಲೋಬೊ ಉದ್ಘಾಟಿಸಿ ನೂತನ ವಿದ್ಯಾರ್ಥಿ ಸಂಘಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ವಾಣಿ ಪದವಿ ಕಾಲೇಜಿನ ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಧಿರ್ ಕೆ.ಎನ್ ಮಾತನಾಡಿ ನಾಯಕನಾದವನು ತಪ್ಪುಗಳನ್ನು ತನ್ನಮೇಲೆ ಹೊತ್ತುಕೊಂಡು ಶ್ರೇಯಸ್ಸನ್ನು ಎಲ್ಲರಿಗೂ ಕೊಡುತ್ತಾನೆ ಎಂದು ಹೇಳಿ, ವಿದ್ಯಾರ್ಥಿಗಳಿಗೆ ನಾಯಕತ್ವದ ಉಪಯೋಗ ಹಾಗೂ ವ್ಯಕ್ತಿತ್ವ ವಿಕಾಸನದ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ ವಿಜಯ್ ಲೋಬೊ ನೂತನ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ವಿದ್ಯಾರ್ಥಿ ಸೆಬಾಸ್ಟಿನ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನಾಯಕಿ ಹೆಝಲ್ ಜಿ಼ಷಾ ಪಿಂಟೋ ಧನ್ಯವಾದ ನೀಡಿದರು. ವಿಶ್ವಾಸ್ ವೇಗಸ್ ಕಾರ್ಯಕ್ರಮ ನಿರೂಪಿಸಿದರು.

Related posts

ವಿ.ಹಿಂ.ಪ. ಬಜರಂಗದಳ ಮಾತೃಮಂಡಳಿ ದುರ್ಗವಾಹಿನಿ ಹಾಗೂ ಮುಂಡಾಜೆ ಮಂಜುಶ್ರೀ ಭಜನಾಮಂಡಳಿಯಿಂದ ಧನಸಹಾಯ ಹಾಗೂ ದಿನಸಿ ಸಾಮಾಗ್ರಿ ವಿತರಣೆ

Suddi Udaya

ನಾವೂರು ಮತ್ತು ಕುತ್ಲೂರು ಗ್ರಾಮಗಳ ವಿದ್ಯುತ್ ಸಂಪರ್ಕಕ್ಕಾಗಿ ವನ್ಯಜೀವಿ ಮಂಡಳಿ ಅನುಮೋದನೆ: ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ಶೇಖರ್ ಎಲ್.ಹೇಳಿಕೆ

Suddi Udaya

ಚಾರ್ಮಾಡಿ ಘಾಟಿ: ಅರಣ್ಯ ಇಲಾಖೆ ಗಸ್ತು

Suddi Udaya

ಆಟೋರಿಕ್ಷಾ ಕಾರ್ಮಿಕರ ಬದುಕು ಉಳಿಸಲು ದರ ಪರಿಷ್ಕರಣೆ ಅನಿವಾರ್ಯ: ಬಿ.ಎಂ.ಎಸ್

Suddi Udaya

ಕೊಕ್ಕಡ: ಕಾಡಾನೆಗಳ ಹಾವಳಿ : ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬೀದಿ ಬದಿಯ ಅಂಗಡಿಗಳ ತೆರವು ಕಾರ್ಯ

Suddi Udaya

ಶೈಕ್ಷಣಿಕ ಸವಾಲುಗಳಿಗೆ ತಂತ್ರಜ್ಞಾನದ ಪರಿಹಾರ ಹುಡುಕುವ ಹ್ಯಾಕಥಾನ್

Suddi Udaya
error: Content is protected !!