ಕೊಯ್ಯೂರು: ಇಲ್ಲಿನ ಕೊಯ್ಯರು ಗ್ರಾಮದ ಮಲೆಬೆಟ್ಟು ಇದಿಂಗಳ ನಿವಾಸಿ ರಮ್ಯಾ (28ವ)ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.12 ರಂದು ಮಧ್ಯಾಹ್ನ ನಡೆದಿದೆ.
ರಮ್ಯಾ ಅವರನ್ನು ಎರಡು ವರ್ಷದ ಹಿಂದೆ ಕೊಯ್ಯೂರು ಪಾದಡ್ಕ ಎಂಬಲ್ಲಿಗೆ ಮದುವೆ ಮಾಡಿ ಕೊಡಲಾಗಿತ್ತು. ಜು.11ರಂದು ಕಾರ್ಯಕ್ರಮ ಇದೆ ಎಂದು ಗಂಡನ ಮನೆಯಿಂದ ತಾಯಿ ಮನೆಗೆ ಆಕೆ ಬಂದಿದ್ದರು.
ಜು.12ರಂದು ಮನೆಯವರು ಕಾಯ೯ಕ್ರಮಕ್ಕೆ ಹೋಗಿದ್ದು, ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಬೆಳ್ತಂಗಡಿ ಆಸ್ಪತ್ರೆಗೆ ತರಲಾಗಿದೆ.
ಮೃತರು ಪತಿ ಲತೀಶ್, ತಂದೆ ದೇವಪಾಲ ಪೂಜಾರಿ, ತಾಯಿ ರಾಧಾ, ಸಹೋದರ ಬಾಲಚಂದ್ರ ಅವರನ್ನು ಅಗಲಿದ್ದಾರೆ.











