37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಸಂಜೀವಿನಿ ಲೋಕೋಸ್ ತರಬೇತಿ

ಬೆಳ್ತಂಗಡಿ: ಸಂಜೀವಿನಿ – ಎನ್.ಆರ್.ಎಲ್.ಎಮ್ ತಾಲೂಕು ಅಭಿಯಾನ ನಿರ್ವಹಣಾ ಘಟಕ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಎಲ್.ಸಿ.ಆರ್.ಪಿ) ಸ್ವಸಹಾಯ ಸಂಘಗಳ ವಹಿವಾಟುಗಳನ್ನು ಲೋಕೋಸ್ ತಂತ್ರಾಂಶದಲ್ಲಿ ದಾಖಲಿಸುವ ಕುರಿತು ತರಬೇತಿ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜು. 14 ರಿಂದ 17 ವರೆಗೆ ನಡೆಯಿತು.

ಬೆಳ್ತಂಗಡಿ ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಟಿ.ಎಮ್.ಐ.ಎಸ್ ವಿನೋದ್ ಪ್ರಸಾದ್ ಕಲ್ಲಾಜೆ ಲೋಕೋಸ್ ತಂತ್ರಾಂಶದ ಬಳಕೆ, ವಹಿವಾಟುಗಳ ದಾಖಲೀಕರಣ ಕುರಿತು ತರಬೇತಿ ನೀಡಿದರು. ಬೆಳ್ತಂಗಡಿ ತಾಲೂಕಿನ 48 ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ 98 ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು 49 ಜನರ ಎರಡು ತಂಡವಾಗಿ ತಲಾ 02 ದಿನದಂತೆ 04 ದಿನಗಳಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬೆಳ್ತಂಗಡಿ ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ರಾಷ್ಟ್ರೀಯ ಶ್ರೀಮತಿ ಪ್ರತಿಮಾ, ತಾಲೂಕು ವ್ಯವಸ್ಥಾಪಕರು ಕೃಷಿಯೇತರ ನಿತೀಶ್, ವಲಯ ಮೇಲ್ವಿಚಾರರಾದ ಜಯಾನಂದ್, ಸ್ವಸ್ತಿಕ್, ಶ್ರೀಮತಿ ವೀಣಾಶ್ರೀ ಕೆ.ಕೆ, ಬಿ.ಆರ್.ಪಿ ಶ್ರೀಮತಿ ಶ್ರೀಕಲಾ ತರಬೇತಿಯ ಯಶಸ್ಸಿಗೆ ಸಹಕರಿಸಿದರು.

Related posts

ಕೊಯ್ಯೂರಿನ ಮಾವಿನಕಟ್ಟೆಯಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಬಜಿರೆ: ಚಿರತೆ ಹಾವಳಿಗೆ ಬೋನ್ ಇರಿಸಿದ ಅರಣ್ಯ ಇಲಾಖೆ

Suddi Udaya

ನಿಡ್ಲೆ: ಪಾರ್ಪಿಕಲ್ ಸಮೀಪ ಕಾರು ಮತ್ತು ಬೈಕ್ ಅಪಘಾತ

Suddi Udaya

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಜಾತ್ರೋತ್ಸವ ಸಂಪನ್ನ

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ಪ.ಪೂ. ವಿಭಾಗದ ವಿದ್ಯಾರ್ಥಿ‌‌ ಸಂಘದ ಉದ್ಘಾಟನೆ ಹಾಗೂ ಸ್ವಾಗತ ಕಾರ್ಯಕ್ರಮ

Suddi Udaya

ಮುಳಿಯದಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಭ್ರಮ

Suddi Udaya
error: Content is protected !!