37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿತಾಲೂಕು ಸುದ್ದಿ

ಪೆರಿಯಶಾಂತಿ-ಕುದ್ರಾಯ: ಅನಧಿಕೃತ ಗೂಡಂಗಡಿಗಳ ತೆರವಿಗೆ ಅರಣ್ಯ ಇಲಾಖೆ ಸೂಚನೆ

ನೆಲ್ಯಾಡಿ: ಪೆರಿಯಶಾಂತಿ-ಕುದ್ರಾಯವರೆಗಿನ ಮೀಸಲು ಅರಣ್ಯದ ಪಕ್ಕದ ರಸ್ತೆಯಲ್ಲಿ ಅನಧಿಕೃತವಾಗಿ ಇರುವ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಉಪ್ಪಿನಂಗಡಿ ವಲಯ ಪ್ರೊಫೆಷನಲ್ ಅರಣ್ಯಾಧಿಕಾರಿ ಹಸ್ತ ಶೆಟ್ಟಿ ಮತ್ತು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಖಡಕ್ ಸೂಚನೆ ನೀಡಿದ್ದಾರೆ.

ಪ್ರಜಾಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ದಾಖಲಾಗಿರುವ ದೂರುಗಳ ಹಿನ್ನೆಲೆ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದಿಂದ ಬಂದಿರುವ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪೆರಿಯಶಾಂತಿಯಿಂದ ಕುದ್ರಾಯವರೆಗಿನ ಮೀಸಲು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವರಿಗೆ ಮೌಖಿಕ ಆದೇಶ ನೀಡಲಾಗಿತ್ತು. ಈ ವ್ಯಾಪಾರಸ್ಥರು ಜುಲೈ 15ರೊಳಗೆ ಗೂಡಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವ ಭರವಸೆ ನೀಡಿದ್ದರೂ ಈಗಾಗಲೇ ನಿಗದಿತ ಅವಧಿ ಕಳೆದರೂ ಇವುಗಳಲ್ಲಿ ಬಹುಪಾಲು ಇನ್ನೂ ತೆರವುಗೊಳ್ಳಿಲ್ಲ ಎಂದು ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ ಅರಣ್ಯ ಪ್ರದೇಶದ ಶಾಂತತೆಯನ್ನು ಹದಗೆಡಿಸುವ ಸಂದರ್ಭ ಉಂಟಾಗಿದ್ದು, ಇದರ ಬೆನ್ನಲ್ಲೇ ವ್ಯಾಪಾರಿಗಳು ರಸ್ತೆ ಬದಿ ಇಡುತ್ತಿರುವ ಹಲಸಿನ ಹಣ್ಣು, ಅನನಾಸು ಮುಂತಾದ ಹಣ್ಣುಗಳ ವಾಸನೆಗೆ ಆಕರ್ಷಿತರಾಗಿ ಆನೆಗಳು ಗೂಡಂಗಡಿ ಕಡೆಗೆ ಬರಲಾರಂಭಿಸಿದೆ. ಪರಿಣಾಮವಾಗಿ ಆನೆಗಳ ಚಲನವಲನಕ್ಕೆ ತೊಂದರೆ ಉಂಟಾಗುತ್ತಿದೆ. ಈಗಾಗಲೇ ಈ ಭಾಗದಲ್ಲಿ ಆನೆ ದಾಳಿ ವರದಿಯಾಗಿರುವ ಹಿನ್ನೆಲೆ, ಜೈವಿಕ ಜೀವವೈವಿಧ್ಯ ಹಾಗೂ ಸಾರ್ವಜನಿಕರ ರಕ್ಷಣೆಯ ದೃಷ್ಟಿಯಿಂದ ಅನಧಿಕೃತ ವ್ಯಾಪಾರ ತಕ್ಷಣವೇ ನಿಲ್ಲಿಸಬೇಕಾಗಿದೆ ಎಂದು ಅರಣ್ಯಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

“ಅನಧಿಕೃತವಾಗಿ ಗೂಡಂಗಡಿ ನಡೆಸಿ ಆನೆ ಅಥವಾ ಇತರ ಕಾಡುಪ್ರಾಣಿಗಳಿಂದ ಸಾರ್ವಜನಿಕರಿಗೆ ಏನೇನಾದರೂ ಅನಾಹುತ ಸಂಭವಿಸಿದರೆ, ಅದರ ಹೊಣೆಗಾರರು ನಾವಲ್ಲ. ಕಾನೂನು ಕ್ರಮ ತಪ್ಪದೇ ಜರುಗಲಿದೆ,” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ವ್ಯಾಪಾರಸ್ಥರು ತಮ್ಮ ಗೂಡಂಗಡಿಗಳನ್ನು ತೆರವುಗೊಳಿಸದಿದ್ದರೆ, ಪೊಲೀಸ್ ಭದ್ರತೆ ಜೊತೆಗಿಸಿಕೊಂಡು ಅರಣ್ಯ ಇಲಾಖೆ ನೇರವಾಗಿ ಕಾರ್ಯಾಚರಣೆಗೆ ಇಳಿಯುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ.

Related posts

ಹಾಸನದ ಆಟೋಚಾಲಕನ ಕೊಲೆ ಮಾಡಿ ಶಿರಾಡಿ ಘಾಟ್ ನಲ್ಲಿ ಶವ ಬಿಸಾಕಿದ ಹಂತಕರು: ಧರ್ಮಸ್ಥಳ ನೇತ್ರಾವತಿ‌ ನದಿಯಲ್ಲಿ ಬಟ್ಟೆಗಳನ್ನು ಎಸೆದು ಪರಾರಿ

Suddi Udaya

ಲಾಯಿಲ ಶ್ರೀ ವಿಶ್ವಕರ್ಮಾಭ್ಯುದಯ ಸಭಾ ಹಾಗೂ ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದಿಂದ ನೂತನ ಸಂಸದ ಕ್ಯಾ| ಬ್ರಿಜೇಶ್ ಚೌಟ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಸರಕಾರಿ ಅರಣ್ಯ ಭೂಮಿಯನ್ನು ಅತಿ ಕ್ರಮಿಸಿ ಕೃಷಿ ಮಾಡಿದ ಪ್ರಕರಣ : ಹೈಕೋರ್ಟ್ ಸೂಚನೆ ಮೇರೆಗೆ ಅರಣ್ಯ ಇಲಾಖೆಯಿಂದ ತೆರವು

Suddi Udaya

ಕುವೆಟ್ಟು ಗ್ರಾ.ಪಂ ಮಾಜಿ ಸದಸ್ಯ ಭಾಜಪ ದ ನಿಷ್ಠಾವಂತ ಕಾರ್ಯಕರ್ತ ನಾರಾಯಣ ಆಚಾರ್ಯ ಗುರುವಾಯನಕೆರೆ ನಿಧನ

Suddi Udaya

ಸಿರಿ ಸಂಸ್ಥೆಯ ನೂತನ ಉತ್ಪಾದನಾ ಸಂಕೀರ್ಣದ ಪೂಜಾ ಸಮಾರಂಭ: ಡಾ.ಹೆಗ್ಗಡೆ ಕುಟುಂಬಸ್ಥರು, ಸಿರಿ ಸಂಸ್ಥೆಯ ನಿರ್ದೇಶಕರುಗಳು ಭಾಗಿ

Suddi Udaya

ಮಡಂತ್ಯಾರು: ಚರಂಡಿಗೆ ಜಾರಿದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು

Suddi Udaya
error: Content is protected !!