September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸರಕಾರಿ ಅರಣ್ಯ ಭೂಮಿಯನ್ನು ಅತಿ ಕ್ರಮಿಸಿ ಕೃಷಿ ಮಾಡಿದ ಪ್ರಕರಣ : ಹೈಕೋರ್ಟ್ ಸೂಚನೆ ಮೇರೆಗೆ ಅರಣ್ಯ ಇಲಾಖೆಯಿಂದ ತೆರವು

ಶಿಬಾಜೆ: ಸರಕಾರಿ ಅರಣ್ಯ ಭೂಮಿಯನ್ನು ಅತಿ ಕ್ರಮಿಸಿ ಕೃಷಿ ಮಾಡಿದ ಪ್ರಕರಣದಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ದಾಳಿ ನಡೆಸಿ ಆಕ್ರಮಿತ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿದೆ.

ಕೊಕ್ಕಡ ಹೋಬಳಿಯ ಶಿಬಾಜೆ ಗ್ರಾಮದ ಅರಣ್ಯದ ವಿಸ್ತರಿತ ಬ್ಲಾಕ್, 1963ರ ಅರಣ್ಯ ಪ್ರದೇಶದ ಅರಂಪಾದೆ ಎಂಬಲ್ಲಿ 1.9 ಎಕರೆ ಸರಕಾರಿ ಭೂಮಿಯಲ್ಲಿ ವ್ಯಕ್ತಿಯೊಬ್ಬರು ಕಟ್ಟಡ ಮತ್ತು ರಬ್ಬರ್ ತೋಟ ನಿರ್ಮಿಸಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ನಿವಾಸಿ ಅಶೋಕ್ ಆಚಾರ್ಯ ಸಾರ್ವಜನಿಕ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದರು. ಸರಕಾರಿ ಭೂಮಿಯನ್ನು ಅಕ್ರಮ ವಶದಲ್ಲಿ ಇರಿಸಿದ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿ ನಲ್ಲಿ ತಿಳಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ ಅವರು, ತಕ್ಷಣ ಅತಿಕ್ರಮಿತ ಜಾಗವನ್ನು ಸ್ವಾಧೀನಕ್ಕೆ ಪಡೆದುಕೊಳ್ಳ ಬೇಕು ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿತ್ತು.

ಹೈಕೋರ್ಟ್ ಸೂಚನೆ ಬೆನ್ನಲ್ಲೇ ಅ.3 ರಂದು ಆಕ್ರಮಿತ ಸರಕಾರಿ ಭೂಮಿಯಲ್ಲಿದ್ದ ರಬ್ಬರ್ ತೋಟವನ್ನು ತೆರವುಗೊಳಿಸಿ ಜಾಗವನ್ನು ಸ್ವಾಧೀನಕ್ಕೆ ಪಡೆಯುವ ಕಾರ್ಯಾಚರಣೆ ನಡೆಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ಉಪವಲಯ ಅರಣ್ಯಾಧಿಕಾರಿ ರಾಜೇಶ್, ಶಿವಾನಂದ ಆಚಾರ್ಯ, ಅರಣ್ಯ ಪಾಲಕ ಸುನಿಲ್ ನಾಯ್ಕ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದಾರೆ.

ಕಾನೂನು ಪಾಲಿಸಿ ಕ್ರಮ ಕೈಗೊಳ್ಳಲಾಗಿದೆ ಎಸಿಎಫ್: ಸುಬ್ಬಯ್ಯ ನಾಯಕ್ ‌ ಎಸಿಎಫ್.

ಕಾನೂನು ಪ್ರಕಾರ ಎಲ್ಲ ಕ್ರಮಗಳನ್ನು ಕೈಗೊಂಡು ಶಿಬಾಜೆ ಗ್ರಾಮದಲ್ಲಿ ಅರಣ್ಯ ಒತ್ತುವರಿಯನ್ನು ತೆರವು ಮಾಡಲಾಗಿದೆ. ಸರ್ವೆ ನಂಬರ್ 184 ರಲ್ಲಿ ಅರಣ್ಯ ಜಾಗದಲ್ಲಿ ಅಕ್ರಮ ಮಾಡಿರುವುದು ಕಂಡು ಬಂದಿದೆ. 1.95 ಎಕ್ರೆ ಅರಣ್ಯ ಭೂಮಿಯ ಅಕ್ರಮಣವಾಗಿದ್ದು ಇದರಲ್ಲಿ 1.36ಎಕ್ರೆ ತೆರವುಗೊಳಿಸಲಾಗಿದೆ. ಉಳಿದ 56 ಸೆನ್ಸ್ ಜಾಗದಲ್ಲಿ ಮನೆ ಸೇರಿದಂತೆ ಕೃಷಿ ಇದೆ ಮುಂದಿನ ದಿನಗಳಲ್ಲಿ ಇದನ್ನು ತೆರವು ಗೊಳಿಸಲಾಗುವುದು.

Related posts

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಫೋಟೋಶಾಪ್ ಮತ್ತು ಲೈಟ್ ರೂಮ್ ಬಗ್ಗೆ ಕಾರ್ಯಗಾರ

Suddi Udaya

ಪಡ್ಯಾರಬೆಟ್ಟು ಕ್ಷೇತ್ರದ ಅನುವಂಶೀಕ ಆಡಳಿತ ಮೊಕ್ತೇಸರ ಜೀವಂಧರ್ ಕುಮಾರ್ ರವರಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವೇಣೂರು ಇದರ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮರೋಡಿ: ಉಪನ್ಯಾಸಕ ಜಿನೇಂದ್ರ ಬಲ್ಲಾಳ್ ನಿಧನ

Suddi Udaya

ಉಜಿರೆ ದುರ್ಗಾ ಮೊಬೈಲ್ಸ್ ಸೇಲ್ಸ್ & ಸರ್ವೀಸ್ ನವೀಕೃತಗೊಂಡು ಶುಭಾರಂಭ

Suddi Udaya

ನಾಲ್ಕೂರು: ಅಸೌಖ್ಯದಿಂದ ಯೈಕುರಿ ವಸಂತಿ ನಿಧನ

Suddi Udaya

ಕನ್ಯಾಡಿ 1: ಪ್ರಗತಿಪರ ಕೃಷಿಕ ನಾರಾಯಣ ಗೌಡ ನಿಧನ

Suddi Udaya
error: Content is protected !!