September 6, 2026
ಶಿಕ್ಷಣ ಸಂಸ್ಥೆ

ವೇಣೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸಂಘ ಮತ್ತು ಇತರ ಸಂಘಗಳ ಉದ್ಘಾಟನಾ ಸಮಾರಂಭ ಕಲಿತ ವಿದ್ಯಾಸಂಸ್ಥೆ ಹಾಗೂ ಗುರುಗಳನ್ನು ಮರೆಯಬಾರದು: ರಾಜೇಶ್ ಪೂಜಾರಿ

ವೇಣೂರು: ಸರಕಾರಿ ಪ್ರೌಢ ಶಾಲೆಯ 2025-26 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘ ಮತ್ತು ಇತರ ಸಂಘಗಳ ಉದ್ಘಾಟನಾ ಸಮಾರಂಭವು ಜು.19ರಂದು ನಡೆಯಿತು.

ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ ಕಾರ್ಯಕ್ರಮ ಉದ್ಘಾಟಿಸಿ ಗ್ರಾಮೀಣ ಪ್ರದೇಶದ ವೇಣೂರು ಪ್ರೌಢ ಶಾಲೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ತಾನು ಕಲಿತ ಶಾಲೆ ಮತ್ತು ಗುರುಗಳನ್ನು ವಿದ್ಯಾರ್ಥಿಗಳು ಮರೆಯದೆ ಒಳ್ಳೆಯ ಉದ್ಯೋಗ ಪಡೆದು ಸಮಾಜಕ್ಕೆ ಶಕ್ತಿಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪ ಪ್ರಾಂಶುಪಾಲ ವೆಂಕಟೇಶ್ ತುಳುಪುಳೆ ಅವರು ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಫಲ್ಗುಣಿ ಸಿದ್ಧಕಟ್ಟೆಯ ಅಧ್ಯಕ್ಷ ರೊ. ದುರ್ಗಾದಾಸ್ ಶೆಟ್ಟಿ, ಕಾರ್ಯದರ್ಶಿ ರೊ. ಟೀನಾ ಡಿಕೋಸ್, ಲಯನ್ಸ್‌ ಕ್ಲಬ್ ವೇಣೂರಿನ ಕಾರ್ಯದರ್ಶಿ ಲ. ಜಯರಾಮ ಹೆಗ್ಡೆ,ಹಿರಿಯ ಶಿಕ್ಷಕಿ ಸುಕನ್ಯ ಪ್ರಭು, ನೆಲ್ಸನ್ ಹೆರಾಲ್ಡ್ ಕ್ಯಾಸ್ಟಲಿನೊ,ವಿದ್ಯಾರ್ಥಿ ನಾಯಕಿ ಕುಮಾರಿ ಶಬರಿ, ಉಪನಾಯಕ ನರಸಿಂಹ ಕಾಮತ್,ವಿರೋಧ ಪಕ್ಷದ ನಾಯಕಿ ಧೃತಿ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಸಿದ್ದ ಕಟ್ಟೆ, ಲಯನ್ಸ್ ಕ್ಲಬ್ ವೇಣೂರು, ಎನ್.ಎಸ್.ಎಸ್ ಘಟಕ ಮತ್ತು ಮತದಾನ ಸಾಕ್ಷರತಾ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ನೆರವೇರಿತು. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ರವೀಂದ್ರ ಕೆ. ಸ್ವಾಗತಿಸಿದರು.ಶಿಕ್ಷಕಿ ಸುಶೀಲಾ ಜಿ. ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಿಕ್ಷಕಿ ಪ್ರೇಮ ಕೆ. ಧನ್ಯವಾದವಿತ್ತರು.

Related posts

ಕನ್ಯಾಡಿ II ಸ. ಉ. ಹಿ.ಪ್ರಾ. ಶಾಲೆಯಲ್ಲಿ ನೂತನ ಎಲ್‌ಕೆಜಿ ತರಗತಿ ಶುಭಾರಂಭ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳಾಲು ಶ್ರೀ ಧ.ಮಂ‌. ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ

Suddi Udaya

ಉಜಿರೆ: ಧ.ಮಂ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿ:  ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಆಟಿದ ಗಮ್ಮತ್ತ್’

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ, ಉಜಿರೆ ಎಸ್.ಡಿ.ಎಂ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಸ್ಥಾನ: ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಕೆ‌.ಮೋಹನ್ ಕುಮಾರ್ ಅವರಿಂದ ಅಭಿನಂದನೆ

Suddi Udaya
error: Content is protected !!