ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿವರದಿ

ಉಜಿರೆ ಗ್ರಾ.ಪಂ.ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕರ್ಬಾರಿ ರವರು ಭೇಟಿ ಗ್ರಾಮ ಪಂಚಾಯತ್ ಕಾರ್ಯ ವೈಖರಿಗೆ ಮೆಚ್ಚುಗೆ

ಉಜಿರೆ: ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಲ್ ಜೀವನ್ ಮಿಷನ್ ಯೋಜನೆಯ ವಿವಿಧ ಕಾಮಗಾರಿಗಳ ಭೌತಿಕ ಪರಿಶೀಲನೆಗಾಗಿ ಜು.21ರಂದು ಉಜಿರೆ ಗ್ರಾ.ಪಂ.ಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕರ್ಬಾರಿ ಐ.ಎ.ಎಸ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಲ್ ಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಿದ ನೀರಚಿಲುಮೆಯ ಕುಡಿಯುವ ನೀರಿನ ಸ್ಥಾವರವನ್ನು ಪರಿಶೀಲಿಸಿದರು. ಬಳಿಕ ಆದಿಪರಾಶಕ್ತಿ ಮಹಿಳಾ ಸ್ವಸಹಾಯ ಸಂಘದವರು ನಡೆಸುತ್ತಿರುವ ಅಕ್ಕ ಕೆಫೆ, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ನಡೆಸುತ್ತಿರುವ ಹಳ್ಳಿ ಸಂತೆಯನ್ನು, ಬಳಿಕ ಕೂಸಿನ ಮನೆ, ಡಿಜಿಟಲ್ ಅರಿವು ಕೇಂದ್ರ ಮತ್ತು ಪಂಚಾಯತ್ ಕಚೇರಿಗೆ ಭೇಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್, ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ, ಸ್ಥಳೀಯ ಸದಸ್ಯರು, ಪಂ. ಸಿಬ್ಬಂದಿಗಳು, ಪಂಪ್ ಆಪರೇಟರ್ ಗಳು ಉಪಸ್ಥಿತರಿದ್ದರು.

Related posts

ಬಳಂಜ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಪ್ಲೇಟ್ ಇಡುವ ಸ್ಟ್ಯಾಂಡ್ ಕೊಡುಗೆ

Suddi Udaya

ಚಂದು ಲಾಯಿಲ ಹಾಗೂ ಬಿ. ರಾಮಣ್ಣ ಶೆಟ್ಟಿ ಮಾಲಾಡಿ ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

Suddi Udaya

ವೇಣೂರು: ಪಲ್ಗುಣಿ ನದಿಯಿಂದ ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ: ಆರೋಪಿಗಳ ಸಹಿತ ಪಿಕಪ್‌ ವಾಹನ ವಶ

Suddi Udaya

ಸುಲ್ಕೇರಿ ಗ್ರಾ.ಪಂ. ಗ್ರಾಮ ಸಭೆ

Suddi Udaya

ಜು.13: ಉಜಿರೆಯಲ್ಲಿ ನ್ಯೂ ತ್ರಿಲೋಖ್ ನೃತ್ಯ ಸಂಸ್ಥೆ ಶುಭಾರಂಭ

Suddi Udaya

ಉಜಿರೆ ಮಾಚಾರು ಜಾತಿ ನಿಂದನೆ ಮಾಡಿ ಹಲ್ಲೆ ಆರೋಪ: ಯುವಕ ಆಸ್ಪತ್ರೆಗೆ ದಾಖಲು

Suddi Udaya
error: Content is protected !!