37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪುದುವೆಟ್ಟು ಶ್ರೀಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಇಂಗ್ಲೀಷ್ ಇಟಾಲಿಕ್ ಬರವಣಿಗೆಯ ತರಬೇತಿ

ಪುದುವೆಟ್ಟು: ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಇಟಾಲಿಕ್ ಬರವಣಿಗೆಯ ತರಬೇತಿ ಜು.22 ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ , ಕಾಂಚನ ಇಲ್ಲಿನ ನಿವೃತ್ತ ಮುಖ್ಯ ಮುಖ್ಯೋಪಾಧ್ಯಾಯ ಹರ್ಷ ಕುಮಾರ್ ಕೆ ಎನ್ ಉಜಿರೆ ಆಗಮಿಸಿ ವಿದ್ಯಾರ್ಥಿಗಳಿಗೆ ಅಂದವಾದ ಬರವಣಿಗೆಯ ಮಹತ್ವವನ್ನು ವಿವಿಧ ಚಟುವಟಿಕೆಗಳ ಮೂಲಕ ವಿವರಿಸಿ ಇಂಗ್ಲೀಷ್ ಇಟಾಲಿಕ್ ಬರವಣಿಗೆಯ ಪ್ರಾಯೋಗಿಕ ತರಬೇತಿಯನ್ನು ಅತ್ಯುತ್ತಮವಾಗಿ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯ ಶೀನಪ್ಪ ಗೌಡ ತರಬೇತಿಯಲ್ಲಿ‌ ಉಪಸ್ಥಿತರಿದ್ದು ಪ್ರಾಸ್ತಾವಿಕವಾದ ಮಾತುಗಳನ್ನಾಡಿದರು. ಶಿಕ್ಷಕ ಪವನ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.ಶಿಕ್ಷಕಿ ಕುಮಾರಿ ಜಿತೀಕ್ಷ ವಂದಿಸಿದರು. ನಿವೃತ್ತ ಶಿಕ್ಷಕಿ ಶ್ರೀಮತಿ ವಾರಿಜಾ ಹರ್ಷಕುಮಾರ್ ಹಾಗೂ ಶಾಲಾ ಶಿಕ್ಷಕ ವೃಂದದವರು ತರಬೇತಿಯಲ್ಲಿ ಉಪಸ್ಥಿತರಿದ್ದರು.

Related posts

ಸೊಂಟದ ಬಾಲ್ಸ್ ಸಮಸ್ಯೆಯಿಂದ ಬಳಲುತ್ತಿರುವ ಬಂದಾರು ಕುಂಟಾಲಪಲ್ಕೆ ಕಲ್ಲಿಮಾರು ನಿವಾಸಿ ಹರಿಶ್ಚಂದ್ರ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಕೊರಿಂಜ: ಯೋಗ ತರಬೇತಿ ಶಿಬಿರದ ಪೂರ್ವಭಾವಿ ಸಭೆ

Suddi Udaya

ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ

Suddi Udaya

ಸೌಜನ್ಯ ತಾಯಿ ಕುಸುಮಾವತಿ ವಿರುದ್ಧ ಎಸ್‌ಐಟಿಗೆ ದೂರು

Suddi Udaya

ವೇಣೂರು ಶ್ರೀಗು.ಸ್ವಾ.ಸೇ. ಸಂಘ, ಯುವವಾಹಿನಿ ವೇಣೂರು ಘಟಕ ಹಾಗೂ ಬಂಗೇರ ಅಭಿಮಾನಿ ಬಳಗ ವತಿಯಿಂದ ಮಾಜಿ ಶಾಸಕ ಕೆ ವಸಂತ ಬಂಗೇರಿಗೆ ನುಡಿನಮನ

Suddi Udaya

ಧರ್ಮಸ್ಥಳ ಮತದಾನ ಕೇಂದ್ರಕ್ಕೆ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಭೇಟಿ

Suddi Udaya
error: Content is protected !!