September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳಾಲು: ಕೊಲ್ಪಾಡಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

ಬೆಳಾಲು: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಕುಂಡಡ್ಕ ಅರಣ್ಯ ಸಮಿತಿ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಜು.23 ರಂದು ನಡೆಸಲಾಯಿತು.

ಹಲಸು, ಮಾವು, ಅಶ್ವಥ, ಹುಣಸೆ, ಕಾಡು ದಾಸವಾಳ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಗ್ರಾಮ ಅರಣ್ಯ ಸಮಿತಿಯ ಸದಸ್ಯರು ನಾಟಿ ಮಾಡಿದರು‌. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳಾದ ಜೆರಾಲ್ಡ್ ಡಿಸೋಜ, ಗಸ್ತು ಅರಣ್ಯ ಪಾಲಕರಾದ ಕೆ.ಎನ್.ಜಗದೀಶ್, ಅರಣ್ಯ ವೀಕ್ಷಕ ಸಂತೋಷ್, ಕುಂಡಡ್ಕ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ ಗಂಗಾಧರ ಗೌಡ ಸೇರಿದಂತೆ ಹೆಚ್ಚಿನ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್ ಸ್ವಾಗತಿಸಿದರು. ಶಿಕ್ಷಕರಾದ ದಿನೇಶ್,ಕೆ ಹಾಗೂ ಕರಿಯಣ್ಣ ಗೌಡ ಸಹಕರಿಸಿದರು.

Related posts

ಪುದುವೆಟ್ಟು ಶ್ರೀಧ.ಮಂ.ಅ.ಹಿ. ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

Suddi Udaya

ನಿಡ್ಲೆ: 90 ವರ್ಷದ ವಯೋವೃದ್ಧೆ ಸರಸ್ವತಿಯವರಿಂದ ಮತದಾನ

Suddi Udaya

ಎಸ್.ಐ.ಟಿ ತನಿಖೆಯ ತಡೆಯಾಜ್ಞೆ ತೆರವು ಮಾಡಿದ ಹೈಕೋರ್ಟ್

Suddi Udaya

ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಯೋಗಾಸನ ಕ್ರೀಡಾ ಛಾಂಪಿಯನ್ ಶಿಪ್ ನ್ನು ಉದ್ಘಾಟಿಸಿದ ಶ್ರೀ ಧ.ಮಂ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್

Suddi Udaya

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ: ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿಗೆಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಬಹುದು: ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಭವಾನಿ ಶಂಕರ್

Suddi Udaya

ಶಿಬಾಜೆಯಲ್ಲಿ ಸಿಮೆಂಟ್ ಶೀಟ್ ಕಟ್ಟಡ ಕೆಡವಿದ ಪ್ರಕರಣ: ಎಂಟು ಮಂದಿಯ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಕೇಸು ದಾಖಲು

Suddi Udaya
error: Content is protected !!