37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾರ್ಮಾಡಿ ಕತ್ತರಿಗುಡ್ಡೆ ರಸ್ತೆ ಕಾಂಕ್ರಿಟೀಕರಣಗೊಳಿಸಿ ಅಭಿವೃದ್ಧಿಗೊಳಿಸಲು ಆಗ್ರಹಿಸಿ ಎಸ್ ಡಿ ಪಿ ಐ ಮನವಿ

ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಕತ್ತರಿಗುಡ್ಡೆ’ಗೆ ಹೋಗುವ ರಸ್ತೆಯು ಸುಮಾರು 3-4 ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಇಷ್ಟರವರೆಗೆ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಈ ರಸ್ತೆಯು ತೀರಾ ಹದಗೆಟ್ಟಿದ್ದು, ಪ್ರಸ್ತುತ ಈ ರಸ್ತೆಯಲ್ಲಿ ಪ್ರಯಾಣಿಸಲು ತುಂಬಾ ಕಷ್ಟದಾಯಕವಾಗಿದೆ. ಮಳೆಗಾಲದಲ್ಲಿ ಜನರು ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ರಸ್ತೆ ಹಲವಾರು ವಿದ್ಯಾರ್ಥಿಗಳು, ದಿನ ಕೂಲಿ-ಕಾರ್ಮಿಕರು ನಿತ್ಯ ಸಂಚರಿಸುವ ರಸ್ತೆಯಾಗಿರುತ್ತದೆ. ಜೊತೆಗೆ ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಕಾಲನಿಗೆ ಹಾದು ಹೋಗುವ ರಸ್ತೆಯಾಗಿದೆ.
ಆದಷ್ಟು ಶೀಘ್ರವಾಗಿ ಈ ರಸ್ತೆಯನ್ನು ಕಾಂಕ್ರಿಟೀಕರಣಗೊಳಸಿ ಅಭಿವೃದ್ಧಿ ರಸ್ತೆಯನ್ನಾಗಿ ಮಾಡಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಾರ್ಮಾಡಿ ಗ್ರಾಮ ಸಮಿತಿ ವತಿಯಿಂದ ಚಾರ್ಮಾಡಿ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಎಸ್‌.ಡಿ.ಪಿ.ಐ ಚಾರ್ಮಾಡಿ ಗ್ರಾಮ ಸಮಿತಿ ಅಧ್ಯಕ್ಷ ಸಫ್ವಾನ್ ಕಕ್ಕಿಂಜೆ, ಉಜಿರೆ ಬ್ಲಾಕ್ ಸಮಿತಿ ಸದಸ್ಯರು ಅಶ್ರಫ್ ಚಾರ್ಮಾಡಿ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ವಕೀಲರ ಭವನಕ್ಕೆ ಕರ್ನಾಟಕ ಲೋಕಾಯುಕ್ತ ರಿಜಿಸ್ಟರ್ ಶ್ರೀಮತಿ ಉಷಾರಾಣಿ ಭೇಟಿ

Suddi Udaya

ತೋಟತ್ತಾಡಿ ಪರಿಸರದಲ್ಲಿ ಚಿರತೆ ಓಡಾಟ, ಭಯಭೀತರಾದ ಗ್ರಾಮಸ್ಥರು: ಚಿರತೆ ಸೆರೆಹಿಡಿಯಲು ಸ್ಥಳೀಯರ ಸಹಕಾರದಲ್ಲಿ ಇಲಾಖೆ ವತಿಯಿಂದ ಬೋನು ಅಳವಡಿಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರೋಟರಿ ಕ್ಲಬ್ ಮಡಂತ್ಯಾರು ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ

Suddi Udaya

ಕಲ್ಮಂಜ: ನಿಡಿಗಲ್ ಸಮೀಪ ಪಾದಾಚಾರಿಗೆ ಬಸ್ ಡಿಕ್ಕಿ : ಪಾದಾಚಾರಿ ಗಂಭೀರ ಗಾಯ

Suddi Udaya

ಮಾಸ್ತಿಕಲ್ಲು ಮಜಲು ಶ್ರೀ ಪಿಲಿಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವ: ದೈವದ ಪಾತ್ರಿ ಸೇವೆಯಿಂದ ನಿವೃತ್ತಿ ಹೊಂದಿದ್ದ ಪೂವಾಜೆ ರುಕ್ಮಯ್ಯ ಗೌಡರಿಗೆ ಸನ್ಮಾನ

Suddi Udaya

ತೋಟತ್ತಾಡಿ ನಿವಾಸಿ ಜಯರಾಮ ರವರ ಚಿಕಿತ್ಸೆಗೆ ನೆರವಾಗಿ

Suddi Udaya
error: Content is protected !!