25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಶಿಶು ವೈದ್ಯೆ ಡಾ.ಶಿಲ್ಪಾ ಹೆಗ್ಡೆ ನೇತೃತ್ವದ ಮಕ್ಕಳ ಸ್ನೇಹಿ‌ ಕಲರವ ಸೆಂಟರ್ ಬೆಳ್ತಂಗಡಿಯಲ್ಲಿ ಪ್ರಾರಂಭ

ಬೆಳ್ತಂಗಡಿ: ಶಿಶು ವೈದ್ಯೆ ಡಾ.ಶಿಲ್ಪಾ ಹೆಗ್ಡೆ ನೇತೃತ್ವದ ಮಕ್ಕಳ ಬೆಳವಣಿಗೆಯ ಸಮಸ್ಯೆಗಳನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತ ಥೆರಪಿ ಹಾಗೂ ಕೌನ್ಸಿಲಿಂಗ್ ಸೇವೆ ನೀಡುವ ಮಕ್ಕಳ ಸ್ನೇಹಿ‌ ಕಲರವ ಸೆಂಟರ್ ಬೆಳ್ತಂಗಡಿಯ ಸುವರ್ಣ ಆರ್ಕೇಡ್ ಮೊದಲ ಮಹಡಿಯಲ್ಲಿ ಜು. 27ರಂದು ಪ್ರಾರಂಭಗೊಂಡಿದೆ.

ಬೆಳ್ತಂಗಡಿ ತಾಲೂಕಿನ ಹಿರಿಯ ವೈದ್ಯರಾದ ಡಾ.ಶ್ರೀನಿವಾಸ್ ಡೋಂಗ್ರೆ ನೂತನ ಕಲರವ ಸಂಟರನ್ನು ಉದ್ಘಾಟಿಸಿ ಶುಭ ಕೋರಿದರು.ಕಲರವ ಪೌಂಢೇಶನ್ ಸ್ಥಾಪಕರಾದ ಡಾ.ಶಿಲ್ಪಾ ಹೆಗ್ಡೆ ಮಾತನಾಡಿ ಮಕ್ಕಳಿಗೆ ಸಮಗ್ರವಾದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ಏಳು ವರ್ಷಗಳ ಹಿಂದೆ ಕಲರವ ಸೆಂಟರನ್ನು ಪ್ರಾರಂಭಿಸಲಾಗಿದೆ.

ಮಕ್ಕಳಲ್ಲಿ ಅಡಕಗೊಂಡಿರುವ ಎಲ್ಲಾ ರೀತಿಯ ಬೆಳವಣಿಗೆಯ ಸಮಸ್ಯೆಗಳನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತ ಥೆರಪಿ ಹಾಗೂ ಕೌನ್ಸಿಲಿಂಗ್ ಮೂಲಕ ಸೂಕ್ತ ಚಿಕಿತ್ಸೆ ನೀಡಿ ಮಕ್ಕಳಿಗೆ ಅರಿವು ಮತ್ತು ಬೆಂಬಲವನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.ವಾರದ ಎಲ್ಲಾ ದಿನವೂ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಕಲರವ ಸೆಂಟರ್ ತೆರೆದಿರುತ್ತದೆ. ಕಲರಸ ಸೆಂಟರ್ ಮಂಗಳೂರು,ಉಡುಪಿ, ಬೆಳ್ತಂಗಡಿಯಲ್ಲಿ ಕಾರ್ಯಚರಿಸುತ್ತದೆ.

ಬೆಳ್ತಂಗಡಿಯ ಪ್ರಸಿದ್ಧ ಎಲುಬು ತಜ್ಞ ಡಾ.ಶಶಿಕಾಂತ್ ಡೋಂಗ್ರೆ,ಗಜಾನನ ಹೆಗ್ಡೆ ಹುಬ್ಬಳ್ಳಿ, ಜಯಲಕ್ಷ್ಮಿ ಹೆಗ್ಡೆ ಹುಬ್ಬಳ್ಳಿ, ಡಾ.ಶಶಿಧರ ಡೋಂಗ್ರೆ,ಡಾ.ಸುಷ್ಮಾ ಡೋಂಗ್ರೆ, ಡಾ.ರಂಜನ್ ಕುಮಾರ್‌,ನರೇಂದ್ರ ತುಳಪುಳೆ,ಯಶವಂತ ಪಟವರ್ಧನ್,ಪ್ರಕಾಶ್ ಅಭ್ಯಾಂಕರ್,ಕಾಜುಮುಗೇರು ಸಂತೋಷ್ ಹೆಬ್ಬಾರ್,ಸಚಿನ್ ಭಿಡೆ ಮುಂಡಾಜೆ,ಮನೋಜ್ ಲೋಂಡೆ ಮುಂಡಾಜೆ,ಇನ್ನಿತರರು ಉಪಸ್ಥಿತರಿದ್ದರು.

ಅಳದಂಗಡಿಯ ಪ್ರಸಿದ್ಧ ವೈದ್ಯರಾದ ಡಾ.ಎನ್.ಎಮ್ ತುಳಪುಳೆ-ಶ್ರೀಮತಿ ಗೀತಾ ತುಳಪುಳೆ, ಇ.ಎನ್.ಟಿ ಸ್ಪೆಷಲಿಸ್ಟ್ ಡಾ.ಹರ್ಷ ತುಳಪುಳೆ ಅವರು ಆಗಮಿಸಿದ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ,ಸತ್ಕರಿಸಿದರು.

Related posts

ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ “ಪೆರ್ಲ ಬೈಪಾಡಿ ಊರುದ ಭಕ್ತಿದ ಎಸಲ್” ತುಳು ಆಡಿಯೋ & ವಿಡಿಯೋ ಆಲ್ಬಮ್ ಬಿಡುಗಡೆ

Suddi Udaya

ಧರ್ಮಸ್ಥಳ ಕ್ಷೇತ್ರದ ವತಿಯಿಂದ ಕುತ್ಲೂರು ನೇಸರ ಗುಂಪಿನ ಸದಸ್ಯ ಧರ್ಣಪ್ಪ ರವರಿಗೆ ಕ್ರಿಟಿಕಲ್ ಫಂಡ್ ವಿತರಣೆ

Suddi Udaya

ಧರ್ಮಸ್ಥಳ: ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

Suddi Udaya

ಗುಂಡೂರಿ ಶ್ರೀ ಸತ್ಯನಾರಾಯಣ ಪೂಜಾ ಮಂದಿರ ನಿರ್ಮಾಣಕ್ಕೆ ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ರೂ.2 ಲಕ್ಷ ದೇಣಿಗೆ ಹಸ್ತಾಂತರ

Suddi Udaya

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಾಂಸ್ಕೃತಿಕ ವೈಭವ

Suddi Udaya

ಬೆಳ್ತಂಗಡಿ ಎಸ್.ಕೆಎಸ್.ಎಸ್.ಎಫ್ ನಿಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

Suddi Udaya
error: Content is protected !!