ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ಪ್ರಕರಣ: ಸ್ಥಳ ಮಹಜರಿಗೆ ಬಂದ ಎಸ್.ಐ.ಟಿ ತಂಡ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಮೃತದೇಹ ಹೂತು ಹಾಕಿರುವೆ ಎಂದು ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳ ಮುಂದೆ ಹಾಜರಾಗಿರುವ ಸಾಕ್ಷಿ ವ್ಯಕ್ತಿ ಜತೆಗೆ ಇಂದು ಎಸ್.ಐ.ಟಿ. ಅಧಿಕಾರಿಗಳು ಧರ್ಮಸ್ಥಳದಲ್ಲಿ ಸ್ಥಳ ಮಹಜರು ನಡೆಸುತ್ತಿದ್ದಾರೆ.

ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಅನುಚೇತ್, ಮತ್ತು ಎಸ್ಪಿ ಸಿ.ಎ.ಸೈಮನ್ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಮುಂಜಾನೆಯೇ ಆಗಮಿಸಿದ್ದರು. ದೂರುದಾರ ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗಿದ್ದಾನೆ. ಕೆಲವು ತಾಸು ಮಾತುಕತೆ ನಡೆಸಿದ ಬಳಿಕ ದಾಖಲೆ ಪಡೆದು ದೂರುದಾರನ ಸಹಿ ಹಾಕಿ ಬಳಿಕ ಬಿಗಿ ಭದ್ರತೆಯಲ್ಲಿ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಆಗಮಿಸಿದರು.

ಅರಣ್ಯ ಇಲಾಖೆಯ ಜಾಗಕ್ಕೆ ಸೇರಿದ ಸ್ಥಳದಲ್ಲಿ ತಲೆ ಬರುಡೆ ಅಗೆದಿರುವ ಮಾಹಿತಿಯಿದ್ದು, ಅದೇ ಜಾಗದಲ್ಲಿ ಮಹಜರು ನಡೆಸಲಾಯಿತು. ಕಂದಾಯ ಇಲಾಖೆ, ಸರ್ವೇ ಇಲಾಖೆ, ಐ.ಎಸ್.ಡಿ. (ಅಂತರಿಕ ಭದ್ರತಾ ವಿಭಾಗ), ಎಫ್.ಎಸ್‌.ಎಲ್‌. ವಿಭಾಗದ ಸೋಕೋ ಸಿಬಂದಿ, ಅರಣ್ಯ ಇಲಾಖೆ ತಂಡ ಜತೆಗೆ ಸಹಕರಿಸಿದೆ.

Related posts

ತೆಂಕಕಾರಂದೂರಿನಲ್ಲಿ ಎಸ್‌ಡಿಪಿಐ ವತಿಯಿಂದ ಎಸ್.ಐ.ಆರ್ ಹೆಲ್ಪ್‌ಡೆಸ್ಕ್ ಸೇವೆ ಆರಂಭ

Suddi Udaya

ಚಿಬಿದ್ರೆ ನಿವಾಸಿ ಕಟ್ಟೆ ಅಬ್ದುಲ್ ರಝಾಕ್ ಎ.ಕೆ. ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ “ಮ್ಯಾನೇಜ್ಮೆಂಟ್ ಫೆಸ್ಟ್ “

Suddi Udaya

ಮಚ್ಚಿನ: ತೀರಾ ವಯೋಸಹಜದ ಲಿಲ್ಲಿ ಬಾಯಿಯವರಿಂದ ಮತದಾನ

Suddi Udaya

ಜೆ.ಇ.ಇ.(ಬಿ.ಆರ್ಕ್) ಫಲಿತಾಂಶ ಪ್ರಕಟ: ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ಮಚ್ಚಿನ : ಬಳ್ಳಮಂಜ ಗಣೇಶ್ ಬಾಳಿಗ ನಿಧನ

Suddi Udaya
error: Content is protected !!