September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ತರಬೇತಿ

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ-ಕಾಲೇಜಿನಲ್ಲಿ ಬರೀ ಶಿಕ್ಷಣಕ್ಕೆ ಮಾತ್ರ ಮಹತ್ವವನ್ನು ನೀಡುವುದಲ್ಲದೆ, ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದು, ಪ್ರತಿ ವಾರದಲ್ಲಿ ಒಂದು ದಿನ ಕರಾಟೆ, ಯೋಗಾಸನ, ಸಂಗೀತ, ಡ್ಯಾನ್ಸ್, ಯಕ್ಷಗಾನ ತರಬೇತಿಗಳನ್ನು ನುರಿತ ತರಬೇತುದಾರರಿಂದ ನೀಡಲಾಗುತ್ತಿದೆ.

ಅದೇ ರೀತಿ ಶಾಲಾ ಸಂಚಾಲಕ ಗಿರೀಶ್ ಕೆ.ಹೆಚ್. ಕಾರ್ಯನಿರ್ವಾಹಣಾಧಿಕಾರಿ ಅಶ್ವಿತ್ ಕುಲಾಲ್ ರವರ ಮಾರ್ಗದರ್ಶನದಲ್ಲಿ ವಿಜ್ಞಾನ, ಪರಿಸರ, ಸಾಂಸ್ಕೃತಿಕ, ಗಣಿತ, ಎನ್‌ ಸಿಸಿ, ಸೇವಾದಳ ಹಲವಾರು ವಿಭಾಗಗಳಾಗಿ ವಿಂಗಡಿಸಲಾಯಿತು. ಆಯಾಯ ವಿಭಾಗಗಳಿಗೆ ನಾಯಕರನ್ನುಆಯ್ಕೆಮಾಡಿ, ಗುಂಪಿನ ಹೆಸರನ್ನುಚಾರ್ಟಿನ ಮೂಲಕ ಎಲ್ಲಾ ವಿದ್ಯಾರ್ಥಿಗಳ ಸಹಕಾರದಿಂದ ಉದ್ಘಾಟಿಸಲಾಯಿತು.

ವಿಭಾಗವಾರು ಶಿಕ್ಷಕರಾದಂತಹ ಗಣಿತ – ಶ್ವೇತ ಮತ್ತುಸಂಧ್ಯಾ, ವಿಜ್ಞಾನ- ವಿನಯ್ ಮತ್ತು ಸ್ವಾತಿ, ಎನ್‌ ಸಿಸಿ – ಸಂಗೀತ ಮತ್ತು ಮಧು, ಸೇವಾದಳ – ಶುಭ ಮತ್ತು ಪವಿತ್ರ, ಪರಿಸರ- ಸ್ವರ್ಣಲತಾ ಮತ್ತು ರೂಪಲತಾ, ಸಾಂಸ್ಕೃತಿಕ- ಸಪ್ನಾಜ್ ಮತ್ತುವೀಣಾ ಇವರು ಮಕ್ಕಳಿಗೆ ಪ್ರೋತ್ಸಾಹಿಸಿದರು .

Related posts

ಕಾಜೂರು ಉರೂಸ್‌ ಸಮಾಪ್ತಿ : ಸಾವಿರಾರು ಮಂದಿಗೆ ಅನ್ನದಾನ

Suddi Udaya

ಮಲ್ಪೆ ಬಂದರಿನಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ , ಹಲ್ಲೆ ನಡೆಸಿರುವುದು ಅಮಾನವೀಯವಾದುದು: ಶೇಖರ್ ಲಾಯಿಲ

Suddi Udaya

ಬೆಳಾಲು ಸೊಸೈಟಿ ಹಗರಣ ಪ್ರಕರಣ : ಆರೋಪಿ ಪ್ರಶಾಂತ್ ಮೇಲೆ ವಿಘ್ನೇಶ್ ಗೌಡ ಹಲ್ಲೆ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಗೆ ನೂತನ ಸಂಸದ ಬ್ರಿಜೇಶ್ ಚೌಟ ಭೇಟಿ: ಮಂಡಲದ ವತಿಯಿಂದ ನೂತನ ಸಂಸದರಿಗೆ ಅಭಿನಂದನೆ

Suddi Udaya

ಸಂಜೀವಿನಿ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸರಕಾರದಿಂದ ಸಮ್ಮತಿ

Suddi Udaya

ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಜೂನಿಯರ್ ರೆಡ್ ಕ್ರಾಸ್ ವತಿಯಿಂದ ವಿನೂತನ ಕಾರ್ಯಕ್ರಮ ತುಡಿತ ಭಾಗ 4

Suddi Udaya
error: Content is protected !!