March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಕೂಟ ಮಹಾ ಜಗತ್ತು ಮಹಿಳಾ ವೇದಿಕೆಯ ನೇತೃತ್ವದಲ್ಲಿ ಆಟಿ ಕೂಟ

ಬೆಳ್ತಂಗಡಿ : ಕೂಟ ಮಹಾಜಗತ್ತು ಬೆಳ್ತಂಗಡಿ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಆಟಿ ಕೂಟದ ಕಾರ್ಯಕ್ರಮ ಜು.27 ರಂದು ಉಜಿರೆಯ ಅರಿಪ್ಪಾಡಿ ಮಠದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಕೂಟ ಮಹಾಜಗತ್ತು ಬೆಳ್ತಂಗಡಿಯ ಅಂಗಸಂಸ್ಥೆಯ ಅಧ್ಯಕ್ಷ ವಾಸುದೇವ ಸೋಮಯಾಜಿ ಹಾಗೂ ನೂತನ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗೀತಾ ವಿಶ್ವಾಸ ರಾವ್ ಉದ್ಘಾಟಿಸಿದರು. ವೇದಿಕೆಯಲ್ಲಿ ನಳಿನಿ ಹೊಳ್ಳ, ಪ್ರಕಾಶ್ ನಾರಾಯಣ ಚಾರ್ಮಾಡಿ, ಶರತ್ ಕುಮಾರ್ ಹಾಗೂ ಅಕ್ಷತಾ ಅಡೂರ್ ಉಪಸ್ಥಿತರಿದ್ದರು. ಆಟಿ ಮಾಸದ ವಿಶೇಷತೆ ಹಾಗೂ ಆಚರಣೆಯ ಕುರಿತು ವಾಸುದೇವ ಸೋಮಯಾಜಿ ಮಾಹಿತಿ ನೀಡಿದರು.

ವಿದ್ಯಾಶ್ರೀ ಅಡೂರ್ ಸ್ವಾಗತಿಸಿದರು. ಅಂಗಸಂಸ್ಥೆಯ ಮಹಿಳೆಯರಿಗೆ, ಪುರುಷರಿಗೆ, ಹಾಗೂ ಮಕ್ಕಳಿಗೆ ವಿವಿಧ ವಿನೋದಾವಳಿ ಆಟಗಳನ್ನು ಶ್ರೀಮತಿ ಆಶಾ ಅಡೂರ್ ನಿರ್ವಹಿಸಿದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಹಿಳಾ ವೇದಿಕೆಯ ನೂತನ ಕಾರ್ಯದರ್ಶಿ ಸಂತೋಷಿಣಿ ಕಾರಂತ್ ಕಾರ್ಯಕ್ರಮವನ್ನು ನಿರೂಪಿಸಿ, ಮೇಘನಾ ಪ್ರಶಾಂತ್ ಹೊಳ್ಳ ವಂದಿಸಿದರು. ಲಾವಣ್ಯ ಹೊಳ್ಳ ಹಾಗೂ ಮಾಲತಿ ರಾವ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಹಿಳೆಯರು ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಆಟಿಯ ವಿಶೇಷ ಖಾದ್ಯಗಳನ್ನು ತಂದು ಎಲ್ಲರಿಗೂ ಉಣಬಡಿಸಿದರು. ಖಾದ್ಯಗಳನ್ನು ತಯಾರಿಸಿದ ಮಹಿಳೆಯರಿಗೆ ಸಭೆಯಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಕೂಟ ಮಹಾಜಗತ್ತು ಅಂಗಸಂಸ್ಥೆಯ ಸದಸ್ಯರು, ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ವೇಣೂರು ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಮಲ್ಲಿಕಾ ಕಾಶಿನಾಥ್ ಹೆಗ್ಡೆ ಉಪಾಧ್ಯಕ್ಷರಾಗಿ ಉಮೇಶ್ ಎನ್.

Suddi Udaya

ಕರು ಕೊಂದ ಚಿರತೆಯ ಸೆರೆ ಕಾರ್ಯ ಆರಂಭಿಸಿದ ಅರಣ್ಯ ಇಲಾಖೆ

Suddi Udaya

ಜೂ.24: ಜನಸಂಪರ್ಕ ಸಭೆ

Suddi Udaya

ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ಆತ್ಮಹತ್ಯಾ ತಡೆ ದಿನದ ಅಂಗವಾಗಿ “ಭವಿಷ್ಯ ಕಾದಿದೆ ಆತ್ಮಹತ್ಯೆ ಬೇಡ” ಎಂಬ ಕಾರ್ಯಕ್ರಮ

Suddi Udaya

ವೇಣೂರು: ಕೊರಗಜ್ಜ ಕಟ್ಟೆ ವಿವಾದ ಪ್ರಕರಣ: ದ.ಕ.ಜಿಲ್ಲಾಧಿಕಾರಿ ಹಾಗೂ ಎಸ್ಪಿ ತಂಡದಿಂದ ಸ್ಥಳ ಪರಿಶೀಲನೆ

Suddi Udaya

ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 16ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ

Suddi Udaya
error: Content is protected !!