31.2 C
ಪುತ್ತೂರು, ಬೆಳ್ತಂಗಡಿ
September 30, 2026
ವರದಿ

ಬೆಳ್ತಂಗಡಿ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೋಕುಲೆನ ಆಟಿ ದಿನ ಕಾರ್ಯಕ್ರಮ

ಬೆಳ್ತಂಗಡಿ; ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೋಕುಲೆನ ಆಟಿ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಪ್ರಾಪ್ತಿ 10ನೇ , ಅತಿಥಿ ಸ್ಥಾನವನ್ನು ವಿನೀತ್ ಹತ್ತನೇ ಮತ್ತು ಮುಖ್ಯ ಅತಿಥಿ ಸ್ಥಾನವನ್ನು ಸಂಜನ 9ನೇ ತರಗತಿ ಇವರು ವಹಿಸಿಕೊಂಡರು.

ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್, ಅಧ್ಯಕ್ಷರು ಮತ್ತು ಅತಿಥಿಗಳು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚೆನ್ನೆಮಣೆ ಆಟವನ್ನು ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ತುಳುನಾಡಿನ ವೈಶಿಷ್ಟ್ಯತೆಗಳನ್ನು ಬಹಳ ಸವಿಸ್ತಾರವಾಗಿ ಎಲ್ಲರ ಮನಮುಟ್ಟುವಂತೆ ಮುಖ್ಯ ಅತಿಥಿಗಳು ತಮ್ಮ ಭಾಷಣದ ಮೂಲಕ ವ್ಯಕ್ತಪಡಿಸಿದರು. ಅತಿಥಿಗಳು ಮತ್ತು ಅಧ್ಯಕ್ಷರು ತಮ್ಮ ಭಾಷಣದ ಮೂಲಕ ಆಟಿಗೆ ಸಂಬಂಧಿಸಿದ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಯಶ್ವಿತಾ, ಸ್ವಾಗತ ಭಾಷಣವನ್ನು ಪ್ರಶ್ಯ ಮತ್ತು ವಂದನಾರ್ಪಣೆಯನ್ನು ಸ್ಪಂದನ್ ಇವರು ನೆರವೇರಿಸಿದರು.

ಶಾಲಾ ಮಕ್ಕಳಿಂದ ತುಳು ನಾಡಿನ ಸಂಸ್ಕೃತಿಗಳನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ಪರಿಚಯಿಸಿ ಹಂಚಲಾಯಿತು. ಆಟಿಗೆ ಸಂಬಂಧಿಸಿದ ವಿವಿಧ ರೀತಿಯ ಬಿತ್ತಿ ಪತ್ರಿಕೆಗಳನ್ನು ಮಕ್ಕಳಿಂದ ತಯಾರಿಸಲಾಯಿತು. ಚೆನ್ನೆ ಮಣೆ ಆಟವನ್ನು ಪರಿಚಯಿಸಿ ಮಕ್ಕಳಿಂದ ಆಡಿಸಲಾಯಿತು. ಶಾಲಾ ಎಲ್ಲಾ ಮಕ್ಕಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಡಾ. ಗೀತಾ ಬಿ. ಶೆಟ್ಟಿಯವರಿಗೆ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya

ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುತ್ತೇವೆ ಎಂಬ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ: ಅರಣ್ಯವಾಸಿಗಳ ಬದುಕನ್ನು ನಾಶಮಾಡುವ ಹುನ್ನಾರವಾಗಿದ್ದು , ತಕ್ಷಣ ರಾಜ್ಯ ಸರ್ಕಾರ ತನ್ನ ಜನವಿರೋಧಿ ನೀತಿಯನ್ನು ಬದಲಾವಣೆ ಮಾಡದಿದ್ದರೆ ಬೀದಿಗಿಳಿದು ಜನರ ಬದುಕುವ ಹಕ್ಕನ್ನು ಉಳಿಸಿಕೊಳ್ಳಬೇಕಾಗುತ್ತದೆ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಎಚ್ಚರಿಕೆ

Suddi Udaya

ಉಜ್ವಲ ಯೋಜನೆಯ ಮಹಿಳೆಯರ ಮೇಲೂ, “ಬೆಲೆ ಏರಿಕೆಯ ಬರೆ ಎಳೆದ” ಕೇಂದ್ರ ಸರ್ಕಾರ: ರಕ್ಷಿತ್ ಶಿವರಾಂ

Suddi Udaya

ಕಡಿರುದ್ಯಾವರ: ಅಕ್ರಮ ಮರಳುಗಾರಿಕೆ ವಿರುದ್ಧ ದೂರು ನೀಡಿದ ಪ್ರಕರಣ ಮನೆಗೆ ನುಗ್ಗಿ ಕೊಲೆ ಬೆದರಿಕೆ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕಾಂಗ್ರೆಸ್ ಸರ್ಕಾರ ಬಂದ ನಂತರ ಅಭಿವೃದ್ಧಿ ಶೂನ್ಯ : ಪ್ರತಾಪ್ ಸಿಂಹ ನಾಯಕ್

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅದಿತಿ ಮುಗೆರೋಡಿ ತೇರ್ಗಡೆ

Suddi Udaya
error: Content is protected !!