September 6, 2026
ಪ್ರಮುಖ ಸುದ್ದಿ

ತಣ್ಣೀರುಪಂತ ಪ್ಯಾಕ್ಸ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ

ತಣ್ಣೀರುಪಂತ: ತಣ್ಣೀರುಪಂತ ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ಆ.4 ರಂದು ತಣ್ಣೀರುಪಂತ ಪ್ಯಾಕ್ಸ್ ನ ಕನಸು ರೈತ ಸಭಾಭವನದಲ್ಲಿ ನಡೆಯಿತು.

ಶಾಸಕ ಹರೀಶ್ ಪೂಂಜ ಮಾತನಾಡಿ ಅನೇಕ ವರ್ಷಗಳ ಬಳಿಕ ಸಹಕಾರ ಭಾರತಿ ತಣ್ಣೀರುಪಂತ ಪ್ಯಾಕ್ಸ್ ನ ಅಧಿಕಾರದ ಚುಕ್ಕಾಣಿ ಹಿಡಿದು ಇತಿಹಾಸ ಸೃಷ್ಟಿಸಿದೆ. ಚುನಾವಣೆಯಲ್ಲಿ ೧೨ ಅಭ್ಯರ್ಥಿಗಳು ಜಯ ಗಳಿಸಲು ಹಿರಿಯ ಕಾರ್ಯಕರ್ತರ ಬದ್ದತೆ ಹಾಗೂ ಯುವ ಕಾರ್ಯಕರ್ತರು ಅವಿರತ ಪರಿಶ್ರಮಕ್ಕೆ‌ ಅಭಿವಂದನೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕಣಿಯೂರು ಮಹಾ ಶಕ್ತಿಕೇಂದ್ರ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ, ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್ ಜೆಂಕ್ಯಾರ್ , ಉಪಾಧ್ಯಕ್ಷ ಸುನಿಲ್ ಅಣವು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಬಾರ್ಯ ಪ್ಯಾಕ್ಸ್ ಅಧ್ಯಕ್ಷ ಚುನಾವಣಾ ಪ್ರಭಾರಿ ಪ್ರವೀಣ್ ರೈ, ತಣ್ಣೀರುಪಂತ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಿಯಾ,
ನಿರ್ದೇಶಕರಾದ ಕೃಷ್ಣಪ್ಪ ಗೌಡ, ರೋಹಿತ್ ಶೆಟ್ಟಿ, ಸಾಮ್ರಾಟ್, ಪ್ರಭಾಕರ್ ಪೊಸೊದೊಂಡಿ, ಜಯಂತಿ ಪಾಲೇದು, ಸರೋಜಿನಿ, ರಜನಿನಾಥ್ ಮುಂದಿಲ, ಸುರೇಶ್ ಹಾಗೂ ಶ್ರೀನಿವಾಸ್, ಶಕ್ತಿ ಕೇಂದ್ರದ ಪ್ರಮುಖರು ಉಪಸ್ಥಿತರಿದ್ದರು.
ಬೊಮ್ಮಯ್ಯ ವಂದೇ ಮಾತರಂ ಗೀತೆಯನ್ನು ಹಾಡಿದರು.
ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು. ನೂತನ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರನ್ನು ಕೇಸರಿ ಶಾಲು ಹೊದಿಸಿ ಅಭಿನಂದಿಸಲಾಯಿತು.

Related posts

ಗುರುವಾಯನಕೆರೆ ಪೊಟ್ಟುಕೆರೆ ನಿಷೇಧಿತ ಮಾದಕ ವಸ್ತು ಸೇವಿಸಿದ ವ್ಯಕ್ತಿ ಮೇಲೆ ಪ್ರಕರಣ ದಾಖಲು

Suddi Udaya

ಶಾಸಕ ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ಅಕ್ರಮ – ಸಕ್ರಮ ಸಮಿತಿ ಸಭೆ; ಅರ್ಹ 28  ಮಂದಿ  ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ  ವಿತರಣೆ

Suddi Udaya

ಧರ್ಮಸ್ಥಳ ಬುರುಡೆ ಪ್ರಕರಣ: ಚಿನ್ನಯ್ಯನಿಗೆ ಜೀವ ಬೆದರಿಕೆ ಹಿನ್ನೆಲೆ ರಕ್ಷಣೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ

Suddi Udaya

ಅಳದಂಗಡಿ ಶ್ರೀ ಸತ್ಯ ದೇವತೆ ಕಲ್ಲುರ್ಟಿ ದೇವಸ್ಥಾನಕ್ಕೆ ನಟ ವಿಜಯರಾಘವೇಂದ್ರ ಭೇಟಿ

Suddi Udaya

ಧರ್ಮಸ್ಥಳ ಡಾ. ವಿಘ್ನರಾಜ್ ಎಸ್.ಆರ್. ರವರಿಗೆ ಶಂಕರ ಸಾಹಿತ್ಯ ಪ್ರಶಸ್ತಿ

Suddi Udaya

ಯಾತ್ರಾರ್ಥಿಯಾಗಿ ಬಂದಿದ್ದ ವೃದ್ಧೆಗೆ ಜ್ಯೂಸ್ ನೀಡಿ ಚಿನ್ನಾಭರಣ ಎಗರಿಸಿದ ಅಪರಿಚಿತ

Suddi Udaya
error: Content is protected !!