38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಮುಂಡೂರು ಅಕ್ಷಯ ಬಂಟರ ಗ್ರಾಮ ಸಮಿತಿ ವತಿಯಿಂದ ‘ಆಟಿದ ನೆನಪು’ ಕಾರ್ಯಕ್ರಮ

ಮುಂಡೂರು : ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ, ಅಕ್ಷಯ ಬಂಟರ ಗ್ರಾಮ ಸಮಿತಿ , ಮುಂಡೂರು ಇದರ ವತಿಯಿಂದ ಆಟಿದ ನೆನಪು ಕಾರ್ಯಕ್ರಮವು ಕಲ್ಲಂಡ ಶ್ರೀಮತಿ ಪುಷ್ಪ ವಸಂತ ಶೆಟ್ಟಿಯವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ನಿರ್ದೇಶಕ ನಾರಾಯಣ ಶೆಟ್ಟಿ ಯವರು ದೀಪ ಬೆಳಗಿಸಿ, ಚೆನ್ನೆ ಮಣೆ ಆಡುವುದರೊಂದಿಗೆ ಉದ್ಘಾಟಿಸಿ, ಕಳೆದ 19 ವರ್ಷಗಳಿಂದ ಕೇವಲ 16 ಬಂಟ ಸಮುದಾಯ ಮನೆ ಹೊಂದಿರುವ ಈ ಕಾರ್ಯಕ್ರಮ ಮಾಡಿರುವುದು ಬಹಳ ವಿಶೇಷವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು, ಅಕ್ಷಯ ಬಂಟರ ಸಂಘದ ಅಧ್ಯಕ್ಷ ಕೇಶವ ಶೆಟ್ಟಿ ವಹಿಸಿದ್ದರು. ಅಕ್ಷಯ ಬಂಟರ ಸಂಘದ ಮಾಜಿ ಅಧ್ಯಕ್ಷ ಸೀತರಾಮ ಶೆಟ್ಟಿ ಮಾತನಾಡುತ್ತ, ಹಿಂದಿನ ಕಾಲದಲ್ಲಿ, ಸೊಪ್ಪು , ತರಕಾರಿ, ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದೆವು, ಇಂದಿನ ಮಕ್ಕಳು ಇದನ್ನು ಸದ್ಭಳಕೆ ಮಾಡಿದಲ್ಲಿ, ಆರೋಗ್ಯಕರವಾದ ಜೀವನ ನಡೆಸಲು ಸಾಧ‍್ಯ ಎಂದರು,

ವೇದಿಕೆಯಲ್ಲಿ, ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಸದಸ್ಯರಾದ ಶ್ರೀಮತಿ ಪುಷ್ಪ ಶೆಟ್ಟಿ, ಕೋಶಾಧಿಕಾರಿ ಸುಧಾಮಣಿ ಉಪಸ್ಥಿತರಿದ್ದರು. ಸುಮಾರು 30 ವಿಧದ , ಎಲ್ಲಾ ಮನೆಗಳಿಂದ ತಂದ ಹಳೇಯ ಕಾಲದಲ್ಲಿ ಬಳಕೆ ಮಾಡುತ್ತಿದ್ದ, ಆಹಾರ ವಸ್ತುಗಳ ಪ್ರದರ್ಶಿಸಲಾಯಿತು. ಶ್ರೀಮತಿ ಸುಷ್ಮಾ, ಹಾಗೂ, ಶ್ರೀಮತಿ ದೀಪ್ತಿ ಪ್ರಾರ್ಥಿಸಿದರು., ಕು. ವೀಕ್ಷಾರವರು ಆಟಿಯ ಹಿನ್ನಲೆಯನ್ನು ತಿಳಿಸಿದರು. ಶ್ರೀಮತಿ ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಉಜಿರೆಯ ಸಭ್ಯಾ ಹೆಬ್ಬಾರ್ ಗೆ ಪಿಎಚ್ ಡಿ ಪದವಿ

Suddi Udaya

ನಿಡ್ಲೆ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

Suddi Udaya

ಸುಲ್ಕೇರಿಮೊಗ್ರು ಸ.ಹಿ.ಪ್ರಾ. ಶಾಲೆಯಲ್ಲಿ ಪೋಷಕರ ಸಭೆ: ನೂತನ ಸಮಿತಿ ರಚನೆ

Suddi Udaya

ಗೆಜ್ಜೆಗಿರಿ ಕ್ಷೇತ್ರದಲ್ಲಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ರವರಿಗೆ ಗೌರವ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಅಳದಂಗಡಿ ಮಹಾಶಕ್ತಿಕೇಂದ್ರದ ಸಭೆ

Suddi Udaya

ಅರಸಿನಮಕ್ಕಿ: “ಶ್ರೀನಿಧಿ ಜನಸೇವಾ ಕೇಂದ್ರ”ದಲ್ಲಿ ಬ್ಯಾಂಕ್ ಆಫ್ ಬರೋಡಾದ ವ್ಯವಹಾರ ಸೌಲಭ್ಯ ಉದ್ಘಾಟನೆ

Suddi Udaya
error: Content is protected !!