38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಆಟಿಡೊಂಜಿ ದಿನ’

ಉಜಿರೆ: ಆಚರಣೆಗಳ ವೈಜ್ಞಾನಿಕ ಕಾರಣ ತಿಳಿದುಕೊಂಡು ಸಂಸ್ಕೃತಿ ಉಳಿಸಬೇಕಿದೆ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ರಂಗ ನಿರ್ದೇಶಕ ಯಶವಂತ್ ಹೇಳಿದರು.
ಉಜಿರೆಯ ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತುಳು ಸಂಸ್ಕೃತಿ ಕುರಿತ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕೃಷಿ ಅವಲಂಬಿತ ತುಳುನಾಡಿನ ಎಲ್ಲಾ ಹಬ್ಬಗಳಿಗೂ ಕೃಷಿಯು ಮೂಲವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಹಲವಾರು ಆಚರಣೆಗಳು ಬೆಳೆದು ಬಂದಿವೆ. ಆಟಿ ತಿಂಗಳಿನಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಯದೇ ಪ್ರಕೃತಿಯನ್ನು ಆರಾಧಿಸುವ ವಿಶಿಷ್ಟ ಪದ್ಧತಿ ಇದೆ. ಎಲ್ಲ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂದರು.

ಮುಖ್ಯ ಶಿಕ್ಷಕಿ ವಿದ್ಯಾಲಕ್ಷ್ಮೀ ಅವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ವರ್ಧನ್ ಜೈನ್ ತುಳು ಗಾದೆಗಳ ವಾಚನ ಮಾಡಿದರು ಹಾಗೂ ವಿವಿಧ ತರಗತಿ ವಿದ್ಯಾರ್ಥಿಗಳು ತುಳುಗಾದೆಗಳು ಹಾಗೂ ಅರ್ಥಗಳನ್ನು ವಾಚಿಸಿದರು.

ವಿದ್ಯಾರ್ಥಿನಿ ತಸ್ಮಯಿ ಅವರು ಆಟಿ ತಿಂಗಳ ಆಚರಣೆಗಳ ಮಹತ್ವ ತಿಳಿಸಿದರು. ವಿದ್ಯಾರ್ಥಿನಿ ಪ್ರಣಮ್ಯ ಒಗಟುಗಳನ್ನು ಕೇಳಿದರು.

ವಿದ್ಯಾರ್ಥಿಗಳಿಂದ ತುಳು ಪಾಡ್ದನ, ಹಾಡು, ನೃತ್ಯಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಆಟಿಯ ವಿಶೇಷ ತಿಂಡಿ ತಿನಿಸುಗಳನ್ನು ತಂದು ಸಹಪಾಠಿಗಳಿಗೆ ಹಂಚಿದರು. ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.

ನಿರೀಕ್ಷಾ ಸ್ವಾಗತಿಸಿ, ನಿಹಾಲ್ ವಂದಿಸಿದರು. ಪಲ್ಲವಿ ಅತಿಥಿ ಪರಿಚಯ ನೀಡಿದರು. ದಿಶಾನ್ ಮತ್ತು ಜ್ಞಾನ್ ಕಾರ್ಯಕ್ರಮ ನಿರೂಪಿಸಿದರು.

Related posts

ಕುವೆಟ್ಟು: ಶಕ್ತಿನಗರದ ಬಳಿ ಪಾದಾಚಾರಿಗೆ ಬೈಕ್ ಡಿಕ್ಕಿ

Suddi Udaya

ಎರಡು ತಿಂಗಳ ಹಿಂದೆ ಮದುವೆಯಾಗಿ ಹನಿಮೂನಿಗೆ ಬಂದ ದಂಪತಿಗಳುಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಪತಿ ಜೈಲುಪಾಲು

Suddi Udaya

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ: ತ್ರೋಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕು ತಂಡ ಪ್ರಥಮ ಸ್ಥಾನ

Suddi Udaya

ಮದ್ದಡ್ಕ ಹೆಲ್ಪ್‌ಲೈನ್ ಎಂಡ್ ಚಾರಿಟೇಬಲ್ ಫೌಂಡೇಶನ್ ವಾರ್ಷಿಕ ಮಹಾಸಭೆ

Suddi Udaya

ರೆಖ್ಯ: ಜಿ.ಪಂ. ಮಾಜಿ ಸದಸ್ಯ ಟಿ.ಕೆ ಮಹೇಂದ್ರನ್ ನಿಧನ

Suddi Udaya

ಸಾವ್ಯ: ಆಕಸ್ಮಿಕವಾಗಿ ಕುಸಿದುಬಿದ್ದು ವ್ಯಕ್ತಿ ಸಾವು

Suddi Udaya
error: Content is protected !!