March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಲವಂತಿಗೆ ಗ್ರಾ.ಪಂ. ಮತ್ತು ಕೆನರಾ ಬ್ಯಾಂಕ್ ವತಿಯಿಂದ ಜನ ಸುರಕ್ಷಾ ಸಂಪೂರ್ಣತಾ ಅಭಿಯಾನ

ಮಲವಂತಿಗೆ ಗ್ರಾಮ ಪಂಚಾಯತ್ ಮತ್ತು ಕೆನರಾ ಬ್ಯಾಂಕ್ ವತಿಯಿಂದ ಕಿಲ್ಲೂರಿನ ಗುರುನಾರಾಯಣ ಸಭಾ ಭವನದಲ್ಲಿ ಜನ ಸುರಕ್ಷಾ ಸಂಪೂರ್ಣತಾ ಅಭಿಯಾನ ಕಾರ್ಯಕ್ರಮ ನಡೆಯಿತು.

ಕೆನರಾ ಬ್ಯಾಂಕಿನ ವೃತ್ತ ಕಚೇರಿಯ ಎ. ಜಿ. ಎಂ. ನರೇಂದ್ರ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ದ. ಕ. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಕವಿತಾ ಶೆಟ್ಟಿ ಮಾತನಾಡಿ, ಮಲವಂತಿಗೆ ಗ್ರಾಮದಲ್ಲಿ 100% ಸರ್ಕಾರದ ವಿಮೆ ನೋಂದಣಿ ಆಗಬೇಕಾದರೆ ಜನರ ಸಹಕಾರಬೇಕು ಎಂದು ಹೇಳಿದರು. ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಉಷಾ ವಿ ನಾಯಕ್ ಅವರು ಪ್ರಧಾನ ಮಂತ್ರಿ ಜೀವನ ಸುರಕ್ಷಾ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ , ಅಟಲ್ ಪಿಂಚಣಿ ಯೋಜನೆ ಕೆನರಾ ಏಂಜೆಲ್ ಖಾತೆ, ಪೇ ರೋಲ್ ಖಾತೆ, ಮುದ್ರಾ ಸಾಲ ಇ ಕೆ ವೈ ಸಿ ಇತ್ಯಾದಿ ಬಗ್ಗೆ ವಿವರಣೆ ನೀಡಿದರು.

ಪುತ್ತೂರು ಪ್ರಾದೇಶಿಕ ಕಚೇರಿಯ ಡಿ.ಎಂ. ಅಜಿತ್ ಕುಮಾರ್ ಅವರು ಶುಭ ಹಾರೈಸಿದರು. ಮಲವಂತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಮಹಮದ್ ಕಾಜೂರು ಬ್ಯಾಂಕ್ ಸಮಸ್ಯೆಗಳನ್ನು ತಿಳಿಸಿದರು. ಬ್ಯಾಂಕ್ ಅಧಿಕಾರಿಗಳು ಸಮಸ್ಯೆಗಳನ್ನು ಸರಿ ಮಾಡಿ ಕೊಡುತ್ತೇವೆ ಎಂದು ತಿಳಿಸಿದರು. ಗ್ರಾಮ ಪಂಚಾಯತ್ ಪಿ. ಡಿ. ಓ. ರಶ್ಮಿ ಅವರು ಸ್ವಾಗತ ಕೋರಿದರು. ನಂತರ ಸರ್ಕಾರದ ವಿಮೆ ನೋಂದಣಿ ಮಾಡಲಾಯಿತು

Related posts

ಮಚ್ಚಿನ: ಬಂಗೇರಕಟ್ಟೆ ಕಲ್ಲಗುಡ್ಡೆಯಲ್ಲಿ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ಮನೆಯಿಂದ ಪೇಟೆಗೆ ಹೋಗುತ್ತೇನೆಂದು ‌ಹೇಳಿ ಹೋದ‌ ತೋಟತ್ತಾಡಿಯ ವ್ಯಕ್ತಿಯ ಶವ ಉಜಿರೆ ರಸ್ತೆ ಬದಿಯಲ್ಲಿ ಪತ್ತೆ

Suddi Udaya

ಲಾಯಿಲ: ಸುಧೀರ್ ರವರ ಕೋಳಿ ಶೆಡ್ ಗೆ ಮರ ಬಿದ್ದು ಹಾನಿ

Suddi Udaya

ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಶ್ರಮದಾನ

Suddi Udaya

ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಎಂ.ಎಸ್.

Suddi Udaya

ಕಡಿರುದ್ಯಾವರ ಕಾನರ್ಪ ಪೆಲತ್ತಡಿ ನಿವಾಸಿ ನೀಲಯ್ಯ ಗೌಡ ನಿಧನ

Suddi Udaya
error: Content is protected !!