September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿನಿಧನ

ಮನೆಯಿಂದ ಪೇಟೆಗೆ ಹೋಗುತ್ತೇನೆಂದು ‌ಹೇಳಿ ಹೋದ‌ ತೋಟತ್ತಾಡಿಯ ವ್ಯಕ್ತಿಯ ಶವ ಉಜಿರೆ ರಸ್ತೆ ಬದಿಯಲ್ಲಿ ಪತ್ತೆ

ಉಜಿರೆ : ‌ಮನೆಯಿಂದ ಪೇಟೆಗೆ ಹೋಗುತ್ತೇನೆಂದು ‌ಹೇಳಿ ಹೋದ‌ ವ್ಯಕ್ತಿಯೋರ್ವರು ರಸ್ತೆ ಬದಿಯಲ್ಲಿ ಮೃತ ಪಟ್ಟ ಘಟನೆ ‌ಮೇ 8ರಂದು‌ ಉಜಿರೆಯಲ್ಲಿ ನಡೆದಿದೆ.
‌ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ಮನೆ ರಾಮ ಮುಗೇರ (50ವ.) ಮೃತ ಪಟ್ಟವರಾಗಿದ್ದಾರೆ .

ರಾಮ ಮುಗೇರವರು ಈ ದಿನ ಬೆಳಿಗ್ಗೆ 8ಕ್ಕೆ ಪೇಟೆಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಉಜಿರೆ ಗ್ರಾಮದ ಅನುಗ್ರಹ ಶಾಲೆಯ ಬಳಿ ಅವರ ಶವ ‌ಪತ್ತೆಯಾಗಿದೆ. ಅಮಲು ಪದಾರ್ಥ ಸೇವಿಸುವ ಅಭ್ಯಾಸವನ್ನು ಹೊಂದಿರುವ ಅವರು ಅನುಗ್ರಹ ಶಾಲಾ ಬಳಿ ಬಸ್ಸಿನಿಂದ ಇಳಿದು ರಸ್ತೆ ಬದಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ಸಮಯ ಬಾಯಾರಿಕೆಗೆ ಕುಡಿಯಲು ನೀರು ಸಿಗದೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಮೃತರ ಪತ್ನಿ ಶ್ರೀಮತಿ ಗುಲಾಬಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಕಳೆಂಜ: ಮನೆ ಪಂಚಾಂಗ ದೂಡಿ ಹಾಕಿದ ಪ್ರಕರಣ: ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲು

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಪಡ್ಪು ಶಾಖಾ ಕಟ್ಟಡ ಶುಭಾರಂಭ

Suddi Udaya

ಮುಂಡಾಜೆ: ಮದಿಮಾಲ್ ಕಟ್ಟೆ ಜಾನಕಿ ರವರ ಮನೆಯಲ್ಲಿ ಪಾದಾಯಾತ್ರಿಗಳಿಗೆ ಉಚಿತ ಊಟದ ವ್ಯವಸ್ಥೆ

Suddi Udaya

ಕಾಯರ್ತಡ್ಕ ಶ್ರೀ ಕೃಷ್ಣ ಹೆಲ್ತ್ ಸೆಂಟರ್ ನಲ್ಲಿ “ಸ್ವರ್ಣ ಬಿಂದು ಪ್ರಾಶನ” ಶಿಬಿರ

Suddi Udaya

ಮುಂಡಾಜೆಯ ಇಷ್ಠ ದೇಶಭಕ್ತಿ ಗೀತೆಯಲ್ಲಿ ದ್ವಿತೀಯ ಸ್ಥಾನ

Suddi Udaya

ಬೆಳ್ತಂಗಡಿ: ಭುಡ್ಣಾರು ಶಕುಂತಲಾ ಶೆಟ್ಟಿ ನಿಧನ

Suddi Udaya
error: Content is protected !!