September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ


ಮಡಂತ್ಯಾರು: ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ , ಬೆಳ್ತಂಗಡಿ ಇವರ ಪ್ರಾಯೋಜಕತ್ವದಲ್ಲಿ ಆ. 5 ರಂದು ಸೇಕ್ರೆಡ್ ಹಾರ್ಟ್ ಒಳ ಕ್ರೀಡಾಂಗಣದಲ್ಲಿ ನಡೆಯಿತು.

ಪಂದ್ಯಾಟದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ14 ರ ವಯೋಮಾನದ ಪ್ರಾಥಮಿಕ ಹಂತದ ಬಾಲಕರ ವಿಭಾಗದಲ್ಲಿ 7 ನೇ ತರಗತಿಯ ವಿದ್ಯಾರ್ಥಿಗಳಾದ ಜೇವಿಸ್ ಡಿಕುನ್ಹಾ, ಜೀತನ್ ಸಿಕ್ವೇರಾ, ಜಿಯಾನ್ ಸಿಕ್ವೇರಾ, ಕೌಶಿಕ್ ಮತ್ತು 8ನೇ ತರಗತಿಯ ಸಿಂಚನ್ ಹಾಗೂ 17ರ ವಯೋಮಾನದ ಪ್ರೌಢ ಶಾಲಾ ಹಂತದ ಬಾಲಕರ ವಿಭಾಗದಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಾದ ಜೇಡನ್ ಕಿತ್ ಡಿಕುನ್ಹ , ಫ್ಲಾಯ್ಡ್ ಮಿಸ್ಕಿತ್, ರಿಶೋನ್ ಲೋಬೋ ಮತ್ತು 9 ನೇ ತರಗತಿಯ ಯಶ್ವಿಜ್ ಶೆಟ್ಟಿ ಹಾಗೂ 8 ನೇ ತರಗತಿಯ ಎಲ್ಟನ್ ಡಿಸೋಜ ರವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ. 10ನೇ ತರಗತಿಯ ಜೇಡನ್ ಕಿತ್ ಡಿಕುನ್ಹ , ಫ್ಲಾಯ್ಡ್ ಮಿಸ್ಕಿತ್, ರಿಶೋನ್ ಲೋಬೋ ಮತ್ತು ೮ನೇ ತರಗತಿಯ ಎಲ್ಟನ್ ಡಿಸೋಜ ಹಾಗೂ ೭ನೇ ತರಗತಿಯ ಜೇವಿಸ್ ಡಿಕುನ್ಹಾ, ಜೀತನ್ ಸಿಕ್ವೇರಾ, ಜಿಯಾನ್ ಸಿಕ್ವೇರಾ ರವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರಿಗೆ ಶಾಲಾ ದೈಹಿಕ ಶಿಕ್ಷಕ ವಲೇರಿಯನ್ ಡಿಸೋಜ ಮತ್ತು ಮಂಜುನಾಥರವರು ತರಬೇತಿಯನ್ನು ನೀಡಿರುತ್ತಾರೆ.

Related posts

ಹಾದಿಬೀದಿಯಲ್ಲಿ ಭಿಕ್ಷೆ ಬೇಡಿ ಕಾಲ ಕಳೆಯುತ್ತಿದ್ದ ವಯೋವೃದ್ಧೆ: ಅನಾಥೆಯಾದ ಅಜ್ಜಿಗೆ ಆಸರೆಯಾದ ಹೋಟೆಲ್ ಮಾಲಕ ರಮೇಶ್ ಕೋಟ್ಯಾನ್

Suddi Udaya

ಬಾರ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷರಾಗಿ ಪ್ರವೀಣ್ ರೈ, ಉಪಾಧ್ಯಕ್ಷರಾಗಿ ಶಿವರಾಮ ಅವಿರೋಧವಾಗಿ ಆಯ್ಕೆ

Suddi Udaya

ಪುದುವೆಟ್ಟು: ಡಿಸೇಲ್ ಪೈಪ್ ಲೈನ್ ಕೊರೆದು ರೂ. 9 ಲಕ್ಷ ಮೌಲ್ಯದ ಡಿಸೇಲ್ ಕಳ್ಳತನ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ: ಬಜರಂಗದಳ ಸಂಘಟನೆ ಹಾಗೂ ಶರಣ್ ಪಂಪುವೆಲ್ ರವರ ಮೇಲೆ ಅವಮಾನಕರ ಪೋಸ್ಟ್ ಮತ್ತು ವಿಡೀಯೋ ಹಾಕಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ

Suddi Udaya

ಕುಕ್ಕೇಡಿ ಶ್ರೀ ಶಾರದಾಂಭ ಭಜನಾ ಮಂಡಳಿ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮುಂಡಾಜೆ: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ಮಳೆಯ ನೀರು

Suddi Udaya
error: Content is protected !!