September 6, 2026
Uncategorized

ಧರ್ಮಸ್ಥಳ ಬೊಳಿಯಾರ್‌ನ 15ನೇ ಸ್ಥಳದಲ್ಲಿ ಪತ್ತೆಯಾಗದ ಶವದ ಅವಶೇಷಗಳು

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಎಸ್.ಐ.ಟಿ ತಂಡ ಆ.8 ರಂದು ಶುಕ್ರವಾರ ಧಮ೯ಸ್ಥಳ ಗ್ರಾಮದ ಬೊಳಿಯಾರ್ ಎಂಬಲ್ಲಿ 15 ನೇ ಸ್ಥಳದಲ್ಲಿ ಶವದ ಅವಶೇಷಗಳ ಶೋಧ ಕಾರ್ಯವನ್ನು ನಡೆಸಿದ್ದು, ಶವದ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಧರ್ಮಸ್ಥಳ ಗ್ರಾಮದ ಬೊಳಿಯಾರ್ ಸಮೀಪಕ್ಕೆ ಆ.8 ರಂದು ಅನಾಮಿಕ ದೂರುದಾರನೊಂದಿಗೆ ಎಸ್.ಐ.ಟಿ ತಂಡ ಆಗಮಿಸಿದೆ. ಕಳೆದ ಎರಡು ವಾರಗಳಿಂದ ನೇತ್ರಾವತಿ ಸ್ನಾನಘಟ್ಟದ ಸಮೀಪ ದೂರು ದಾರ ತೋರಿಸಿದ ಜಾಗದಲ್ಲಿ ಅಗೆಯುವ ಪ್ರಕ್ರಿಯೆ ನಡೆಸಲಾಗಿತ್ತು. ಆ.8ರಂದು ನೇತ್ರಾವತಿ ಸ್ನಾನ ಘಟ್ಟದ ಬಳಿ ಡ್ಯಾಮನ ಬಳಿಯ 13ನೇ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಸಬಹುದೆಂದು ನಿರೀಕ್ಷಿಸಲಾಗಿತ್ತು.
ಆದರೆ ಇಂದು ಬೆಳಿಗ್ಗೆ ದೂರುದಾರನ ಜೊತೆ ಎಸ್ ಐಟಿ ತಂಡ ಮಧ್ಯಾಹ್ನದ ಸಮಯ ಧರ್ಮಸ್ಥಳ ಬಳಿಯ ಬೋಳಿಯಾರ್ ಎಂಬಲ್ಲಿಗೆ ಬಂದಿದ್ದು, ಅಲ್ಲಿ ಕಾಡಿನೊಳಗೆ ದೂರುದಾರನ ಜೊತೆ ತೆರಳಿ ಅಲ್ಲಿ ಅನಾಮಿಕ ದೂರುದಾರ ಗುರುತಿಸಿದ ಸ್ಥಳದಲ್ಲಿ ಯಾವುದೇ ಶವದ ಕಳೆಬರಹಗಳು ಪತ್ತೆಯಾಗಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಎಸ್‌ಐಟಿ ತಂಡ ಕಾರ್ಯಾಚರಣೆಯನ್ನು ಕೊನೆಗೊಳಿಸಿ ಹಿಂದಿರುಗಿದೆ.

Related posts

ಉಜಿರೆ: ಶ್ರೀ ಧ. ಮಂ. ಆಂ. ಮಾ. ಶಾಲೆಯಲ್ಲಿ ಯೋಗ ಉದ್ಘಾಟನಾ ಕಾರ್ಯಕ್ರಮ

Suddi Udaya

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಭೆ. ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್ ನರಿಕೊಂಬು ಆಯ್ಕೆ

Suddi Udaya

ಉಜಿರೆಯಲ್ಲಿ ಸರಣಿ ಅಪಘಾತ: ಹಲವು ವಾಹನಗಳು ಜಖಂ

Suddi Udaya

ಮಚ್ಚಿನ : ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya

ಬೆಳ್ತಂಗಡಿ ವಿಷ್ಣು ಸೇಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ

Suddi Udaya

ಸುಹಾಸ್ ಶೆಟ್ಟಿ ಮನೆಗೆ ಹೋಗಿ ಪೋಷಕರಿಗೆ ಸಾಂತ್ವನ ಹೇಳಿದ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ

Suddi Udaya
error: Content is protected !!