ಉಜಿರೆ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದ ಆಶ್ರಯದಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆಯು ಆ. 8 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಳೆಂಜ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ಅಧ್ಯಕ್ಷ ಡಾ.ಎಂ.ಎಂ. ದಯಾಕರ್, ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ವಿಷ್ಣು ಮರಾಠೆ , ಪದ್ಮನಾಭ ಶೆಟ್ಟಿಗಾರ್ ಹಿಂದೂ ಮುಖಂಡರು ಉಜಿರೆ, ರಮೇಶ್ ಧರ್ಮಸ್ಥಳ ಕಾರ್ಯದರ್ಶಿ ವಿ.ಹಿಂಪ. ಬೆಳ್ತಂಗಡಿ ಪ್ರಖಂಡ, ಬೆಳ್ತಂಗಡಿ ಪ್ರಖಂಡ ವಿ.ಹಿಂ.ಪ ಗೋರಕ್ಷಾ ಪ್ರಮುಖ್ ಸಂತೋಷ್ ಅತ್ತಾಜೆ , ವಿ.ಹಿಂ.ಪ ಸೇವಾ ಪ್ರಮುಖ್ ಮೋಹನ್ ಬೆಳ್ತಂಗಡಿ , ವಿ.ಹಿಂ.ಪ ಬಜರಂಗದಳ ಬೆಳ್ತಂಗಡಿ ಪ್ರಖಂಡ ಪ್ರಚಾರ ಪ್ರಸಾರ ಪ್ರಮುಖ್ ನಾಗೇಶ್ ಕಲ್ಮಂಜ , ಉಜಿರೆ ಬೆಳ್ತಂಗಡಿ ಪ್ರಖಂಡ ವಿ.ಹಿಂ.ಪ ಬಜರಂಗದಳ ಬಲೋಪಾಸನಾ ಪ್ರಮುಖ್ ಮನೀಷ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.











