25.7 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿವರದಿ

ಮಲವಂತಿಗೆ ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮ

ಮಲವಂತಿಗೆ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಆ. 10 ರಂದು ನಡೆದ ಮಲವಂತಿಗೆ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಸಭೆ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತರಾದ ಕೆಮ್ಮಟೆ ವಸಂತ ಗೌಡ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮಂಡಲ ಕೋಶಾಧಿಕಾರಿ ಜಯಂತ ಗೌಡ ಗುರಿಪಳ್ಳ ಉದ್ಘಾಟನಾ ಭಾಷಣ ಮಾಡಿದರು. ಶಾಸಕ ಹರೀಶ್ ಪೂಂಜರವರು ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಯುವ ವಕೀಲರಾದ ಯತೀಶ್ ಪಣೆಕ್ಕರ, ರೈತಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ಗೌಡ ನಾವೂರು, ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಲಾಯಿಲ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಅರವಿಂದ್ ಲಾಯಿಲ ಬೈಠಕ್ ನೀಡಿದರು. ಲಾಯಿಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಕಾಶ್ ಜೈನ್ ಎಳನೀರು, ಮಲವಂತಿಗೆ ಪ್ರಭಾರಿ ಆನಂದ ಅಡೀಲ್, ಮಲವಂತಿಗೆ ಶಕ್ತಿ ಕೇಂದ್ರ ಅಧ್ಯಕ್ಷ ಮಧುಸೂಧನ್ ಮಲ್ಲ, ಪಂಚಾಯತ್ ಉಪಾಧ್ಯಕ್ಷ ರೋಹಿಣಿ ಜಯವರ್ಮ, ಬೂತ್ ಸಮಿತಿಯ ಅಧ್ಯಕ್ಷರುಗಳಾದ ಗಣೇಶ್ ಗೌಡ, ರಾಧಾಕೃಷ್ಣ ನಡುಮಜಲು, ಅಶೋಕ್ ಕಡ್ತಿಕುಮೇರು, ಕಾರ್ಯದರ್ಶಿಗಳಾದ ಸತೀಶ್ ಮ್. ಕೆ, ಪುರಂದರ ನಂದಿಕಾಡು, ವಿನಯ ಚಂದ್ರ ಕಾಂಜಾನು, ಜನಪ್ರತಿನಿಧಿಗಳು ಹಾಗೂ ಅನ್ಯನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಜಯಂತ ಹೆಗ್ಡೆ ಬಿಜೆಪಿ ಗೀತೆ ಹಾಡುವ ಮೂಲಕ ಕಾರ್ಯಕ್ರಮ ಆರಂಭಗೊಂಡು, ಉಮೇಶ್ ಮಾಲೂರು ಸ್ವಾಗತಿಸಿ ನಿರ್ವಹಿಸಿದರು.

Related posts

ಬೆಳ್ತಂಗಡಿ : ಸಿಎಎ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Suddi Udaya

ಮಹಾಶಿವರಾತ್ರಿ: ಧಮ೯ಸ್ಥಳಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಪಾದಯಾತ್ರಿಗಳು

Suddi Udaya

ಕಂಪನಿ ಸೆಕ್ರೆಟರಿ ಪ್ರವೇಶ ಪರೀಕ್ಷೆಯಲ್ಲಿ ಉಜಿರೆ ಶ್ರೀ ಧ.ಮಂ. ಪ.ಪೂ ಕಾಲೇಜಿನ ಏಳು ವಿದ್ಯಾರ್ಥಿಗಳು ತೇರ್ಗಡೆ

Suddi Udaya

ಚಾರ್ಮಾಡಿಯಲ್ಲಿ ಕಾಡುಪ್ರಾಣಿ ಬೇಟೆ ಪ್ರಕರಣ: ಇಬ್ಬರು ಆರೋಪಿಗಳ ಮೇಲೆ ಪ್ರಕರಣ ದಾಖಲು

Suddi Udaya

ಸುಲ್ಕೇರಿ ಗ್ರಾ.ಪಂ. ನಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ

Suddi Udaya

ಗುಂಡು ಎಸೆತ ಸ್ಪರ್ಧೆ : ಲಾಯಿಲ ದೀಪಾಲ್ ಕೆ.ಆರ್., ಪ್ರಥಮ ಸ್ಥಾನ

Suddi Udaya
error: Content is protected !!