25.7 C
ಪುತ್ತೂರು, ಬೆಳ್ತಂಗಡಿ
March 7, 2026
ಧಾರ್ಮಿಕಪ್ರಮುಖ ಸುದ್ದಿರಾಜ್ಯ ಸುದ್ದಿ

ಉಜಿರೆಯಲ್ಲಿ ಅಖಂಡ ಭಾರತ ಸಂಕಲ್ಪ ದಿನ: ಪಂಜಿನ ಮೆರವಣಿಗೆ

ಉಜಿರೆ: ವಿಶ್ವಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡ, ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವು ಆ.14 ರಂದು ಉಜಿರೆ ಶಾರದಾ ಮಂಟಪದಲ್ಲಿ ಜರುಗಿತು.

ವಿಶ್ವಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಇದರ ಅಧ್ಯಕ್ಷ ವಿಷ್ಣು ಮರಾಟೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭಜರಂಗದಳ ಪ್ರಾಂತ ಬಲೋ ಪಾಸಾನ ಪ್ರಮುಖ್, ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತದ ನರೇಶ್ ರೆಡ್ಡಿ ದಿಕ್ಸೂಚಿ ಭಾಷಣವನ್ನು ನೆರವೇರಿಸಿದರು.

ವೇದಿಕೆಯಲ್ಲಿ ನಿವೃತ್ತ ಯೋಧ ಗೋಪಾಲಕೃಷ್ಣ ಕಾ0ಚೋಡು, ದಿನೇಶ್ ಚಾರ್ಮಾಡಿ ಭಜರಂಗದಳ ಸಹ ಸಂಯೋಜಕ್ ಪುತ್ತೂರು ಜಿಲ್ಲೆ, ಉದ್ಯಮಿ ಪದ್ಮನಾಭ ಶೆಟ್ಟಿ ಉಜಿರೆ, ಪ್ರಸಾದ್ ಗೌಡ ಉಜಿರೆ ವಿಶ್ವಹಿಂದೂ ಪರಿಷದ್ ಉಪಾಧ್ಯಕ್ಷರು ಗ್ರಾಮ ಸಮಿತಿ ಉಜಿರೆ, ಗೌರವ್ ಉಜಿರೆ ಭಜರಂಗದಳ ಸಹ ಸಂಯೋಜಕ್ ಬೆಳ್ತಂಗಡಿ ಪ್ರಖಂಡ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಸಂಘ ಚಾಲಕ ವಿನಯ್, ದಿನೇಶ್ ಚಾರ್ಮಾಡಿ ಭಜರಂಗದಳ ಸಹ ಸಂಯೋಜಕ್ ಪುತ್ತೂರು ಜಿಲ್ಲೆ, ಪ್ರಖಂಡ ಕಾರ್ಯದರ್ಶಿ ರಮೇಶ್ ಉಜಿರೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ದೇಶ ಭಕ್ತರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಉಜಿರೆ ಶಾರದಾ ಮಂಟಪದಿಂದ ಉಜಿರೆ ಪೇಟೆಯ ವರೆಗೆ ಪಂಜಿನ ಮೆರವಣಿಗೆ ನಡೆಯಿತು. ಸಂತೋಷ ಅತ್ತಾಜೆ ಗೊರಕ್ಷಾ ಪ್ರಮುಕ್, ಬೆಳ್ತಂಗಡಿ ಪ್ರಖಂಡ ಸ್ವಾಗತಿಸಿದರು. ಮೋಹನ್ ಬೆಳ್ತಂಗಡಿ ಸೇವಾ ಪ್ರಮುಖ್ ಬೆಳ್ತಂಗಡಿ ಪ್ರಖಂಡ ನಿರೂಪಿಸಿ ವಂದಿಸಿದರು.

Related posts

ಫೇಸ್‌ ಬುಕ್‌ ಆಪ್‌ ನಲ್ಲಿ ಲೋನ್ ಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ತೆಂಕಕಾರಂದೂರು ನಿವಾಸಿ ನೆಬಿಸಾರಿಗೆ ರೂ.96,743 ವಂಚನೆ

Suddi Udaya

ವಿ‌ ಹರೀಶ್ ನೆರಿಯ ರವರಿಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್” ಪ್ರದಾನ

Suddi Udaya

ದೇವನಗುಲ್‌ ಚಾರ್ಮಾಡಿ ಅಡ್ಡ ರಸ್ತೆಗೆ ಗೇಟ್‌ – ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

Suddi Udaya

ಕರಂಬಾರು: ಮಾನಸಿಕ ಖಿನ್ನತೆಗೆ ಒಳಗಾಗಿ ನಾಗೇಶ್ ನೇಣು ಬಿಗಿದು ಆತ್ಮಹತ್ಯೆ

Suddi Udaya

ಗುರುವಾಯನಕೆರೆಯ ಸುಬೇದಾರ್ ಏಕನಾಥ ಶೆಟ್ಟಿಯವರಿಗೆ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿ ಪ್ರದಾನ

Suddi Udaya

ಪುಣ್ಯಕೋಟಿ ನಾಡಿನಲ್ಲಿ ಮಾತು ಉಳಿಸಿಕೊಳ್ಳದ ಕಾಂಗ್ರೆಸ್ ಸರಕಾರ: ಕರ್ನಾಟಕಕ್ಕೆ ಭಾರವಾದ ಮುಂಗಡ ಪತ್ರ: ಶಾಸಕ ಹರೀಶ್ ಪೂಂಜ

Suddi Udaya
error: Content is protected !!