38.6 C
ಪುತ್ತೂರು, ಬೆಳ್ತಂಗಡಿ
March 6, 2026
ವರದಿಶಾಲಾ ಕಾಲೇಜು

ಬೆದ್ರಬೆಟ್ಟು: ಮರಿಯಾoಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಇಂದಬೆಟ್ಟು: ಮರಿಯಾoಬಿಕಾ ಆಂಗ್ಲ ಮಾಧ್ಯಮ ಶಾಲೆ ಬೆದ್ರಬೆಟ್ಟು ಇಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾಲತಾ ನೆರವೇರಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಆಂಟೋನಿ ಟಿ.ಜೆ, ಶಾಲಾ ಸಂಚಾಲಕರಾದ ವಂದನೀಯ ಫಾದರ್ ಸೆಬಾಸ್ಟಿಯನ್, ಟ್ರಸ್ಟಿ ಕಮಿಟಿಯ ಸದಸ್ಯರಾಗಿರುವ ಜೋಸ್ ಇಂಜಿ ಪರಂಬಿಲ್, ಶಾಲಾ ಪ್ರಾಂಶುಪಾಲರಾದ ವಂದನೀಯ ಮ್ಯಾತ್ಯು, ಶಾಲಾ ಪೋಷಕರು, ಹಳೆ ವಿದ್ಯಾರ್ಥಿಗಳು, ಶಾಲಾಭಿಮಾನಿಗಳು, ಭೋದಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಧ್ವಜಾರೋಹಣವನ್ನು ನೆರವೇರಿಸಿದ ಶ್ರೀಮತಿ ಆಶಾಲತಾ ಇವರು ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭ ಹಾರೈಕೆಯನ್ನು ನೀಡಿದರು. ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವು ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನೃತ್ಯ ರೂಪಕವನ್ನು ಪ್ರದರ್ಶಿಸಿ ಎಲ್ಲರ ಕಣ್ಮನ ಸೆಳೆದರು. ಶಾಲೆಯ ಅನೇಕ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಸಾರುವ ಹಾಡು ಭಾಷಣ, ನಾಟಕ, ನೃತ್ಯ ಮುಂತಾದ ಸಾಂಸ್ಕೃತಿಕ ಪ್ರದರ್ಶನವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಡಾ.ಆಂಟೋನಿ ಟಿ. ಜೆ ಅವರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಈ ದೇಶದ ಸತ್ಪ್ರಜೆಗಳನ್ನಾಗಿ ಮಾಡಬೇಕು ಎಂಬ ಸಂದೇಶವನ್ನು ಹೇಳಿದರು.

ಕಾರ್ಯಕ್ರಮ ಕ್ಕೆ ಆಗಮಿಸಿದ ಗಣ್ಯರಿಗೆ ಪ್ರೀತಿಯ ದ್ಯೋತಕವಾಗಿ ಶಾಲಾ ಸಂಚಾಲಕರು ಸ್ಮರಣಿಕೆ ನೀಡಿ ಗೌರವಿಸಿದರು. ಶಾಲಾ ಸಂಚಾಲಕರು ಸ್ವಾತಂತ್ರೋತ್ಸವದ ಶುಭ ಸಂದೇಶವನ್ನು ಸಾರಿದರು. ಪೋಷಕರು ಸಿಹಿ ತಿಂಡಿಯನ್ನು ನೀಡಿ ಸಹಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಎಂಟನೇ ತರಗತಿ ವಿದ್ಯಾರ್ಥಿಗಳಾದ ಕುಮಾರಿ ಶ್ರೇಯ ಮತ್ತು ಕುಮಾರಿ ರಿಯಾ ಇವರು ನೆರವೇರಿಸಿದರು ಬಂದಂತಹ ಎಲ್ಲರನ್ನು ಶಾಲಾ ನಾಯಕ ತರುಣ್ ಸ್ವಾಗತಿಸಿ ಶಾಲಾ ವಿದ್ಯಾರ್ಥಿನಿ ಕುಮಾರಿ ಪ್ರೇಕ್ಷ ಇವರು ವಂದಿಸಿದರು.

Related posts

ಉಜಿರೆ ಎಸ್.ಡಿ.ಎಂ. ಮಹಿಳಾ ಐಟಿಐ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಹೃದಯ-ಶ್ವಾಸ ಪುನಶ್ಚೇತನ ಕುರಿತು ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya

ಕಣಿಯೂರು: ಕುಡುವಂತಿ ನಿವಾಸಿ ಪುತ್ತು ನಾಯ್ಕ ನಿಧನ

Suddi Udaya

ವೇಣೂರು ಪಚ್ಚೇರಿ ಬಳಿ ಚಿರತೆ ಹಾವಳಿ: ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Suddi Udaya

ಮಲವಂತಿಗೆ: ತೋಟಕ್ಕೆ ನುಗ್ಗಿದ ಕಾಡಾನೆ; ಅಪಾರ ಕೃಷಿ ಹಾನಿ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನಕ್ಕೆ ದೈವದ ಆಸನ(ಮುಕ್ಕಾರ್) ಸಮಪ೯ಣೆ: ವಾಸ್ತು ಶಿಲ್ಪಿ ಸುಂದರ ಆಚಾರ್ಯ ಮಡೆಂಜಿಮಾರುರವರಿಗೆ ಕ್ಷೇತ್ರದಿಂದ ಗೌರವಾರ್ಪಣೆ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ; ರೂ.4.81 ಕೋಟಿ ಲಾಭ, ಸದಸ್ಯರಿಗೆ ಶೇ. 18 ಡಿವಿಡೆಂಟ್

Suddi Udaya
error: Content is protected !!