34.3 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಶಿಲ – ಬೈರಾಪುರ ರಸ್ತೆ ಅಭಿವೃದ್ಧಿ ಹಕ್ಕೊತ್ತಾಯ ಸಮಾವೇಶ ಸಮಿತಿಯಿಂದ ನ.2 ಅರಸಿನಮಕ್ಕಿಯಲ್ಲಿ ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಬೃಹತ್ ಹಕ್ಕೊತ್ತಾಯ ಸಮಾವೇಶ

ಬೆಳ್ತಂಗಡಿ: ಬಹಳಷ್ಟು ವರ್ಷಗಳ ಬೇಡಿಕೆಯಾದ ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿ ಹಕ್ಕೋತ್ತಾಯ ಸಮಿತಿ ಶಿಶಿಲ ಇದರ ವತಿಯಿಂದ ನ.2ರಂದು ಸೋಮವಾರ ಅರಸಿನಮಕ್ಕಿಯಲ್ಲಿ ಶಿಶಿಲ-ಬೈರಪುರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಬೃಹತ್ ಹಕ್ಕೋತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ, ಸಚಿವರು, ಸಂಸದರು, ಶಾಸಕರು ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಹಕ್ಕೋತ್ತಾಯ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್ ಹೇಳಿದರು.

ಅವರು ಅ.26ರಂದು ಬೆಳ್ತಂಗಡಿ ಎಸ್.ಡಿ.ಎಂ ಪಿನಾಕಿ ಹಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ಸಂಸದ ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ಕೆಪಿಸಿಸಿ ಜಿಲ್ಲಾ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಣ್ಣ ನಿಡ್ವಾಳೆ ಮೂಡಿಗೆರೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್, ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ ಭಟ್, ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ಎ.ಸಿ ಮ್ಯಾಥ್ಯು ಭಾಗವಹಿಸಿ ಮಾತನಾಡಲಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲು ಉಪಸ್ಥಿತರಿರಲಿದ್ದಾರೆ. ಸುಮಾರು 45ಕ್ಕೂ ಮಿಕ್ಕಿ ಸಂಘ-ಸಂಸ್ಥೆಗಳು ಕಾರ್ಯಕ್ರಮವನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು. ಅರಸಿನಮಕ್ಕಿ ಪರಿಸರದ ಏಳು ಗ್ರಾಮಗಳ ಗ್ರಾಮಸ್ಥರು ಅರಸಿನಮಕ್ಕಿ ಆಟದ ಮೈದಾನದಲ್ಲಿ ಸೇರಿ ಅಲ್ಲಿಂದ ವಾಹನ ಜಾಥಾದ ಮೂಲಕ ಸಮಾವೇಶದ ಸ್ಥಳಕ್ಕೆ ಬರಲಿದ್ದಾರೆ. ಸುಮಾರು 3 ಸಾವಿರಕ್ಕೂ ಮಿಕ್ಕಿ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


ಹಲವು ವರ್ಷಗಳ ಹೋರಾಟ:
ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಅನೇಕ ವರ್ಷಗಳಿಂದ ಹೋರಾಟಗಳು ನಡೆಯುತ್ತಿದ್ದರೂ ಈ ಯೋಜನೆ ಇನ್ನೂ ಕಾರ್ಯ ರೂಪಕ್ಕೆ ಬಂದಿರುವುದಿಲ್ಲ, ಆದ್ದುದರಿಂದ ಈ ರಸ್ತೆ ಅಭಿವೃದ್ಧಿ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಆಧ್ಯತೆಯ ನೆಲೆಯಲ್ಲಿ ಅಗತ್ಯ ಅನುಮತಿಗಳನ್ನು ನೀಡಿ ಶಿಶಿಲ ಹಾಗೂ ಸುತ್ತ ಮುತ್ತಲಿನ ಶಿಬಾಜಿ, ಆರಸಿನಮಕ್ಕಿ, ಹತ್ಯಡ್ಕ, ಕಳೆಂಜ, ರೆಖ್ಯ, ಕೌಕ್ರಾಡಿ, ಕೊಕ್ಕಡ ಹಾಗೂ ಬೈರಾಪುರ ಸುತ್ತ ಮುತ್ತಲಿನ ಊರುಬಗೆ, ಸತ್ತಿಗನ ಹಳ್ಳಿ, ದಾರದ ಹಳ್ಳಿ, ಗೌಡಳ್ಳಿ, ಕುಂಬಾರಡಿ, ದೊಡ್ಡಾರೆ, ಬೈದುವಳ್ಳಿ, ಹಳೇಕೆರೆ, ಹೆಚ್ಚುವಳ್ಲಿ, ಬಿಲ್ಲೂರು, ಹಾರೆಗುಡ್ಡ, ಕಿತ್ತಳೆಗುಂಡಿ, ಮಗ್ಗಲನಮಕ್ಕಿ ಮುಂತಾದ ಕುಗ್ರಾಮಗಳ ಸುಮಾರು 5೦,೦೦೦ಕ್ಕಿಂತಲೂ ಹೆಚ್ಚು ಜನರ ಶಿಕ್ಷಣ, ಆರೋಗ್ಯ, ವ್ಯಾಪಾರ ಸಂಪರ್ಕ, ಕೃಷಿ ಉತ್ಪನ್ನ ಮಾರಾಟ, ನಾಣ್ಯದ ಬೈರಾವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಶಿಶಿಲೇಶ್ವರ ದೇವಸ್ಥಾನಗಳ ಪ್ರವಾಸೋಧ್ಯಮ ಅಭಿವೃದ್ಧಿಗೂ ಇದು ಸಹಕಾರಿಯಾಗಲಿರುವುದರಿಂದ ಸರಕಾರ ಈ ಬಗ್ಗೆ ಕ್ರಮ ವಹಿಸುವಂತೆ, ಸರಕಾರದ ಗಮನ ಸೆಳೆಯಲು ಈ ಹಕ್ಕೊತ್ತಾಯ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಘವೇಂದ್ರ ನಾಯಕ್ ತಿಳಿಸಿದರು.


ಪ್ರ‍್ರಾಚೀನ ಕಾಲದಿಂದಲೂ ಸಂಪರ್ಕ ರಸ್ತೆ ಇತ್ತು:
ಹೋರಾಟ ಸಮಿತಿಯ ಸದಸ್ಯ ನರಸಿಂಹ ಗೌಡ ಅವರು ಮಾತನಾಡಿ, ಶಿಶಿಲ-ಬೈರಾಪುರ ಸಂಪರ್ಕಿಸುವ ರಸ್ತೆಯು ಶಿಶಿಲದ ಪೇರಿಕೆಯಿಂದ ನಾಯಿಹಳ್ಳ- ಉಳಿಯಮಲೆ ಖಾಸಗಿ ಎಸ್ಟೇಟ್ ಮೂಲಕ ಬೈರಾಪುರ ತಲುಪುತ್ತದೆ. ಇಲ್ಲಿ ಪ್ರಾಚೀನ ಕಾಲದಿಂದಲೂ- ಬೈರಾಪುರ ಹಾಗೂ ಶಿಶಿಲದ ಮೂಲಕ ನೆರೆಯ ಉಪ್ಪಿನಂಗಡಿಗೆ ವ್ಯಾಪಾರ ಸಂಪರ್ಕ ಇತ್ತು ಘಟ್ಟದ ಮೇಲಿನಿಂದ ಎತ್ತಿನ ಗಾಡಿಗಳ ಮೂಲಕ ಅಕ್ಕಿ ಬೇಳೆಕಾಳುಗಳು ಕರಾವಳಿಗೂ ಹಾಗೂ ಕರಾವಳಿಯಿಂದ ಉಪ್ಪು ಹಾಗೂ ಇನ್ನಿತರ ಸಾಮಾಗ್ರಿಗಳು ಘಟ್ಟ ಪ್ರದೇಶಕ್ಕೆ ಸಾಗಟ ಮಾಡಲು ಪ್ರಮುಖ ಹೆದ್ದಾರಿಯಾಗಿತ್ತು. ಇದಕ್ಕೆ ‘ಪೇರಾಟದ ದಾರಿ’ ಎಂದು ಹಿಂದಿನವರು ಕರೆಯುತ್ತಿದ್ದರು. ಅಲ್ಲದೆ ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೂ – ಬೈರಾಪುರದ ನಾಣ್ಯದ ಬೈರಾದೇಶ್ವರ ದೇವಸ್ಥಾನಕ್ಕೂ ಸಂಪರ್ಕವಿದ್ದು ಶಿಶಿಲೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ಎತ್ತಿನ ಭುಜದ ಗುಡ್ಡದ ಮೇಲೆ ಮೇಲೆ ಕಲ್ಲಿನ ಹಣತೆಯ ಮೇಲೆ ದೀಪ ಉರಿಸುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ನಾಣ್ಯದ ಭೈರವೇಶ್ವರ ದೇವಸ್ಥಾನದ ಸಮೀಪವೇ ಎತ್ತಿನಭುಜಕ್ಕೆ ಹೋಗುವ ರಸ್ತೆಯ ಪಕ್ಕ ‘ಶಿಶಿಲ ಕೊಡಿ’ ಎಂಬ ನಾಮಫಲಕ ಈಗಲೂ ಇದೆ ಎಂದು ತಿಳಿಸಿದರು.

ಕಾಲ ಕ್ರಮೇಣ ಎತ್ತಿನ ಗಾಡಿಗಳ ಬಳಕೆ ನಿಂತು ಹೋದ ನಂತರ 1970 ರ ಸುಮಾರಿಗೆ ಶಿಶಿಲದಿಂದ ಪೇರಿಕೆ ನಾಯಹಳ್ಳ ಮೂಲಕ ಉಳಿಯಮಲೆ ಖಾಸಗಿ ಎಸ್ಟೇಟ್ ನವರು ಸರಕಾರದ ಅನುಮತಿ ಪಡೆದು ಇದೇ ಗಾಡಿ ರಸ್ತೆಯಲೇ ತಮ್ಮ ಜೀಪು ಮತ್ತು ಲಾರಿ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಿರುತ್ತಾರೆ. ಮತ್ತು ಬೈರಾಪುರ ಕಡೆಯಿಂದಲೂ ತಮ್ಮ ಎಸ್ಟೇಟ್ ಗೆ ರಸ್ತೆ ನಿರ್ಮಿಸಿ ತಮ್ಮ ಎಸ್ಟೇಟ್ ನಿಂದ ಟಿಂಬರ್ ಗಳನ್ನು ಮಂಗಳೂರಿಗೆ ಸಾಗಿಸುತ್ತಿದ್ದರು. ಸುಮಾರು ೧೯೮೬ರ ತನಕ ಈ ರಸ್ತೆಯ ಮೂಲಕ ದಿನಂ ಪ್ರತಿ ಏಳೆಂಟು ಲಾರಿಗಳು ಸಂಚಾರ ನಡೆಸಿದ ಈ ರಸ್ತೆ ಇಂದು ಕೂಡ ಅಸ್ತಿತ್ವದಲ್ಲಿದೆ. ಇಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯುವ ಅವಶ್ಯಕತೆ ಇರುವುದಿಲ್ಲ ಅಲ್ಲದೆ ಹೆಚ್ಚು ಕಡಿದಾದ ತಿರುವುಗಳಿಲ್ಲದ ರಸ್ತೆಯಾಗಿರುತ್ತದೆ. ಇದು ರಾಷ್ಟಿçÃಯ ಉದ್ಯಾನವನ, ಹುಲಿ ಸಂರಕ್ಷಿತ ಪ್ರದೇಶ ಈ ವಾಪ್ತಿಗೆ ಒಳಪಟ್ಟಿರುವುದಿಲ್ಲ. ರಸ್ತೆಯ ಹೆಚ್ಚಿನ ಭಾಗವು ಸರಕಾರಿ ಜಮೀನು, ಡೀಮ್ಸ್ ಫಾರೆಸ್ಟ್ ಹಾಗೂ ಖಾಸಗಿ ಜಮೀನಿನ ಮೂಲಕ ಸಾಗುತ್ತದೆ ಎಂದು ನರಸಿಂಹ ಗೌಡ ವಿವರಿಸಿದರು.


ಪರಿಸರಕ್ಕೆ ಹಾನಿಯಾಗದಂತೆ ರಸ್ತೆ ನಿರ್ಮಾಣ:
ಹೋರಾಟ ಸಮಿತಿಯ ಕಾರ್ಯದರ್ಶಿ ಧರ್ಮರಾಜ್ ಅಡ್ಕಾಡಿ ಅವರು ಮಾತನಾಡಿ, ಹಕ್ಕೊತ್ತಾಯ ಸಮಾವೇಶದಲ್ಲಿ ಪಕ್ಷಾತೀತಾವಾಗಿ ನಡೆಯಲಿದೆ. ಎಲ್ಲಾ ಪಕ್ಷಗಳ ನಾಯಕರುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷದವರು, ಧಾರ್ಮಿಕ ಮುಖಂಡರು ಹಾಗೂ ಶಿಶಿಲ ,ಶಿಬಾಜಿ, ಅರಸಿನಮಕ್ಕಿ, ಹತ್ಯಡ್ಕ, ರೆಖ್ಯ, ಕಳೆಂಜ, ಕೊಕ್ಕಡ ಹಾಗೂ ಬೈರಾಪುರ ಊರುಬಗೆ, ಸತ್ತಿಗನಹಳ್ಳಿ ಮುಂತಾದ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ. ಎಲ್ಲಾ ಗ್ರಾಮಗಳಲ್ಲಿ ಮನೆ ಸಂಪರ್ಕ ಕಾರ್ಯ ನಡೆಯುತ್ತಿದೆ. ಹಲವಾರು ಸಂಘಟನೆಗಳು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಹಕ್ಕೊತ್ತಾಯ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿಶಿಲ-ಬೈರಾಪುರ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ರಸ್ತೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಸದಸ್ಯರಾದ ಸುಂದರ ಕೆ., ಗೌರೀಶ್ ಅಮ್ಮಡಂಗೆ, ಪದ್ಮನಾಭ ಕೆ, ಪದ್ಮಪ್ಪ ಪೂಜಾರಿ, ರಾಧಕೃಷ್ಣ ಗುತ್ತು ಭಾಗವಹಿಸಿದ್ದರು. ಕರುಣಾಕರ ಗೌಡ ಸ್ವಾಗತಿಸಿ, ಧನ್ಯವಾದವಿತ್ತರು.


Related posts

ಮೃತ ಬಾಲಕ ಸುಮಂತ್ ಮನೆಗೆ ವಿಹಿಂಪ ಪ್ರಮುಖರ ಭೇಟಿ

Suddi Udaya

ಸುಲ್ಕೇರಿ ಗ್ರಾ.ಪಂ. ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಜೆ ಡಿ ಎಸ್ ಅಭ್ಯರ್ಥಿಯಿಂದ ತಾಲೂಕಿನಲ್ಲಿ ಮತಯಾಚನೆ   

Suddi Udaya

ಕುವೆಟ್ಟು ಸ.ಉ.ಪ್ರಾ.ಶಾಲೆಯಲ್ಲಿ ಸಂಭ್ರಮ ಶನಿವಾರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಏಪ೯ಡಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನದ ಉದ್ಘಾಟನೆ

Suddi Udaya

ಹಾಪ್ ಕಾಮ್ಸ್ ನಿರ್ದೇಶಕರಾಗಿ  ರತ್ನರಾಜ್ ಪೇರಂದಬೈಲ್ ಆಯ್ಕೆ        

Suddi Udaya
error: Content is protected !!