25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವ

ಚಾರ್ಮಾಡಿ : ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿಯಲ್ಲಿ ಆ.15 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಬೆಳಿಗ್ಗೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಂಡು ಜಾರು ಕಂಬ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ನಡೆದು ಸಂಜೆ ಸಮಾರೋಪ ಸಮಾರಂಭ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ ಯುವಕರು ಸಂಘಟನಾತ್ಮಕವಾಗಿ ಬೆಳೆದಾಗ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದು ತಿಳಿಸಿದರು. ಧಾರ್ಮಿಕ ಭಾಷಣ ಮಾಡಿದ ಡಾ.ರವೀಶ್ ಪಡುಮಲೆ ಭಗವಾನ್ ಶ್ರೀ ಕೃಷ್ಣ ನೀಡಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸುಂದರ ಬದುಕು ಸಾಗಿಸಲು ಸಾಧ್ಯ ಮತ್ತು ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಶ್ರದ್ದಾ ಕೇಂದ್ರಗಳ ಮೇಲಿನ ದಾಳಿ ಹಿಂದೂ ಸಮಾಜ ಸದಾ ಖಂಡಿಸುತ್ತದೆ ಎಂಬ ಮಾತುಗಳನ್ನು ಹೇಳಿದರು.

ಧಾರ್ಮಿಕ ಸಭಾ ಕಾರ್ಯಕ್ರಮದ ಸಮಾರೋಪ ವೇದಿಕೆಯಲ್ಲಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಹೊಸಮಠ ಶ್ರೀ ಜನ್ಮಾಷ್ಠಮಿಯ ಅಧ್ಯಕ್ಷ ರಾಜೇಶ್ ಬಂಗ್ಲೆಗುಡ್ಡೆ ಉಪಸ್ಥಿತರಿದ್ದರು. ಗಣೇಶ್ ಕೋಟ್ಯಾನ್ ಸ್ವಾಗತಿಸಿ, ದಿವಿನೇಶ್ ಮೈಕಾನ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Related posts

ಚಿಬಿದ್ರೆ : ಪೆರಿಯಡ್ಕ ನಿವಾಸಿ ನಾಟಿ ವೈದ್ಯ ರಾಮಣ್ಣ ಗೌಡ ನಿಧನ

Suddi Udaya

ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಪ್ರಗತಿಪರ ಕೃಷಿಕ ಕಿರಣ್ ಕುಮಾರ್ ಮಂಜಿಲ ಆಯ್ಕೆ

Suddi Udaya

ಕು| ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಶಿಬಾಜೆ ಗ್ರಾಮ ಸಮಿತಿಯಿಂದ ಸಿಎಂ ಸಿದ್ಧರಾಮಯ್ಯರಿಗೆ ಮನವಿ

Suddi Udaya

ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿಗೆ ಶೇ.98 ಫಲಿತಾಂಶ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ಘಟಕದಿಂದ ಅನುಗ್ರಹ ವೃದ್ದಾಶ್ರಮದಲ್ಲಿ ಮಹಿಳಾ ದಿನಾಚರಣೆ

Suddi Udaya

ಬೆಳ್ತಂಗಡಿ ತಾಲೂಕಿನ 16 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಸರ್ಕಾರ ಆದೇಶ

Suddi Udaya
error: Content is protected !!