ಬೆಳ್ತಂಗಡಿ: “ನಮ್ಮೂರು ನಮ್ಮ ಕೆರೆ” ಕೆರೆಗಳಿಗೆ ಕಾಯಕಲ್ಪ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 1000 ಕೆರೆಗಳನ್ನು ಜೀರ್ಣೋದ್ಧಾರಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ “ವಿಜಯವಾಣಿ ವಿಜಯರತ್ನ ಅಂತರಾಷ್ಟ್ರೀಯ ಪ್ರಶಸ್ತಿ” ಗೌರವಕ್ಕೆ ಪಾತ್ರರಾಗಿದ್ದಾರೆ. ಆಗಸ್ಟ್ 20 ರಂದು ಮಲೇಷ್ಯಾದಲ್ಲಿ ನಡೆದ ಸಮಾರಂಭದಲ್ಲಿ ಹೆಗ್ಗಡೆ ಅವರ ಸಹೋದರ ಸುರೇಂದ್ರ ಪ್ರಶಸ್ತಿ ಸ್ವೀಕರಿಸಿದರು.
2016 ರಲ್ಲಿ ಊರಿಗೆ ನೀರುಣಿಸುತ್ತಿದ್ದ ಕೆರೆಗಳು ಕಣ್ಮರೆಯಾಗುತ್ತಿದ್ದನ್ನು ಕಂಡ ಡಾ. ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು “ನಮ್ಮೂರು ನಮ್ಮ ಕೆರೆ” ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮ ಜಾರಿಗೆ ತಂದರು. ರೈತರು ಮಹಿಳೆಯರನ್ನು ಒಳಗೊಂಡ ಕೆರೆ ಸಮಿತಿಗಳನ್ನು ರಚಿಸಿ ಜನರ ಸಹಭಾಗಿತ್ವವನ್ನು ಪಡೆದು ಜೊತೆಗೆ ಸಂಸ್ಥೆಯ 160 ನೋಡೆಲ್ ಅಧಿಕಾರಿಗಳು 07 ಜನ ನುರಿತ ಇಂಜಿನಿಯರ್‌ಗಳ ತಂಡವನ್ನು ರಚಿಸಿ ಈ ಕೆರೆಗಳ ಪುನಶ್ಚೇತನ ಮಾಡಲಾಗುತ್ತಿದೆ. ಕುಡಿಯುವ ನೀರು ಅಲ್ಲದೆ ಪ್ರಾಣಿ ಸಂಕುಲಗಳಿಗೂ, ಜಾನುವಾರುಗಳಿಗೂ ನೀರು ಯೆತೇಚ್ಛವಾಗಿ ಸಿಗಬೇಕೆಂದು ಶಿವಮೊಗ್ಗದ ತಾವರೆಕೆರೆ ಹುಲಿ ಮತ್ತು ಸಿಂಹಧಾಮದಲ್ಲಿ 10 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು ಯೆತೇಚ್ಛನೀರು ಬರುತ್ತಿದ್ದು ಸುಮಾರು 400 ವನ್ಯ ಜೀವಿಗಳಿಗೆ ನೀರು ಆಶ್ರಯವಾಗಿದೆ.
ಈ ಕಾರ್ಯಕ್ರಮಕ್ಕೆ ಶಾಸಕರುಗಳು, ಸಂಸದರುಗಳು, ಸ್ವಾಮೀಜಿಗಳು, ಸರಕಾರ ಮಟ್ಟದ ಅಧಿಕಾರಿಗಳು ಜೊತೆಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದು ಇದುವರೆಗೆ 914 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು ಸುಮಾರು 332.30 ಲಕ್ಷ ಕ್ಯು.ಮೀ. ಹೂಳನ್ನು ತೆಗೆಯಲಾಗಿದೆ. ಸುಮಾರು 877.84 ಕೋಟಿ ಗ್ಯಾಲನ್ ನೀರಿನ ಸಂಗ್ರಹಣ ಸಾಮರ್ಥ್ಯ ಹೆಚ್ಚಳಗೊಂಡಿದೆ ಇದರಿಂದ 2,65,962 ಎಕ್ರೆ ಕೃಷಿ ಭೂಮಿಗೆ ಪ್ರಯೋಜನವಾಗಿದ್ದು 4,18,174 ಕುಟುಂಬಗಳು ಪ್ರಯೋಜನ ಪಡೆದಿದ್ದು 402.62 ಎಕ್ರೆ ಪ್ರದೇಶ ಒತ್ತುವರಿ ತೆರವುಗೊಳಿಸಲಾಗಿದೆ. ಇದಕ್ಕೆ ಯೋಜನೆಯಿಂದ 72.37 ಕೋಟಿ ಅನುದಾನವನ್ನು ಬಳಸಲಾಗಿದೆ.
ಇವರ ಅಧ್ಯಕ್ಷತೆಯಲ್ಲಿ ನಡೆಯುವ ರಾಜ್ಯಾದ್ಯಂತ ಇರುವ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಒಟ್ಟು 6,21,401 ಸ್ವ ಸಹಾಯ ಸಂಘಗಳಿದ್ದು 52,42,421 ಸದಸ್ಯರಿದ್ದಾರೆ. ಗ್ರಾಮಾಬಿವ್ರುದ್ದಿ ಯೋಜನೆಯು ಬ್ಯಾಂಕ್ ಗಳ ಬಿ.ಸಿ ಯಾಗಿ ( business correspondence) ಸ್ವ ಸಹಾಯ ಸಂಘಗಳನ್ನು ರಚಿಸಿ ಬ್ಯಾಂಕ್ ಗಳಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರಕಿಸಿಕೊಡುತ್ತದೆ. ಇಂದು ರಾಜ್ಯಾದ್ಯಂತ ಲಕ್ಷಾಂತರ ಮಹಿಳೆಯರು, ರೈತರು, ಯುವಕರು ಆರ್ಥಿಕ ಚಟುವಟಿಕೆ, ಕ್ರುಷಿ, ಸ್ವ ಉದ್ಯೋಗ ಮುಂತಾದಿವುದಳನ್ನು ಕೈಗೊಂಡು ಸ್ವಾವಲಂಬಿ ಬದುಕನ್ನು ನಡೆಸುತ್ತಿದ್ದಾರೆ. ಸದಸ್ಯರ ಆರೋಗ್ಯ ರಕ್ಷಣೆಗೆ ಸಂಪೂರ್ಣ ಸುರಕ್ಷಾ, ಆರೋಗ್ಯ ರಕ್ಷಾ ವಿಮೆ ಇದ್ದು, ಸಾಲದ ಬದ್ರತೆಗೆ ಮೈಕ್ರೋ ಬಜತ್, ಬಿಮಾ ಜ್ಯೋತಿ ಸೂಕ್ಷ್ಮ ವಿಮೆ ಇದ್ದು, ಪ್ರಗತಿ ರಕ್ಷಾ ಕವಚ, ಪ್ರಗತಿ ವಿಮೆಯ ಸೌಲಭ್ಯವನ್ನು ಸದಸ್ಯರು ಪಡೆಯುತ್ತಾರೆ.
ಯೋಜನೆಯಲ್ಲಿ ಒಟ್ಟು 42,121 ಕಾರ್ಯಕರ್ತರಿದ್ದಾರೆ. ಕುಡಿತದ ಛಟಕ್ಕೆ ಕುಟುಂಬಗಳು ಬಲಿಯಾಗುತ್ತಿದ್ದನ್ನು ಮನಗಂಡ ಹೆಗ್ಗಡೆಯವರು 1992 ರಲ್ಲಿ ಜನಜಾಗೃತಿ ವೇದಿಕೆಯನ್ನು ಪ್ರಾರಂಬಿಸಿ ಆ ಮೂಲಕ ಮಧ್ಯವರ್ಜನ ಶಿಬಿರ ನಡೆಸಿ ಇದುವರೆಗೆ 1969 ಶಿಬಿರಗಳನ್ನು ಮಾಡಿದ್ದು ಇದುವರೆಗೆ 1,32,327 ಮಂದು ದುಶ್ಚಟ ಮುಕ್ತರಾಗಿ ಸುಖಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಬೇಕು ಎಂದು ಸಿರಿ ಸಂಸ್ಥೆಯನ್ನು ಪ್ರಾರಂಭಿಸಿದ್ದು ಇದರಲ್ಲಿ ಸಾವಿರಾರು ಮಹಿಳೆಯರು ಉದ್ಯೋಗ ಪಡೆದು ಜೀವನ ನಡಸುತ್ತಿದ್ದಾರೆ.











