37.9 C
ಪುತ್ತೂರು, ಬೆಳ್ತಂಗಡಿ
March 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮೋಟೋ ಕ್ರಾಸ್ ಡರ್ಟ್ ಬೈಕ್ ರೇಸ್‌ನಲ್ಲಿ ಹವಾ ಎಬ್ಬಿಸಿದ 6 ವರ್ಷದ ಬಾಲಕ ಸುರಾಗ್ ಎಸ್.ರೈ

ವರದಿ : ಮನೀಶ್ ವಿ.ಅಂಚನ್ ಪಾಲೇದು

ಬೆಳ್ತಂಗಡಿ: ಸಾಧಿಸುವ ಮನಸ್ಸಿದ್ದರೆ ವಯಸ್ಸು ಲೆಕ್ಕಕ್ಕೆ ಬರಲ್ಲ ಎಂಬ ಮಾತು ಮತ್ತೊಮ್ಮೆ ಸಾಭೀತಾಗಿದೆ. ಕೇವಲ ಆರು ವರ್ಷದ ಪೋರ ಇಡೀ ಕರಾವಳಿಯೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳೆಲ್ಲಾ ಮೊಬೈಲ್‌ನಲ್ಲಿ ಗೇಮ್ಸ್, ಟಿವಿಯಲ್ಲಿ ಕಾರ್ಟೂನ್ಸ್ ಅಂತ ತಮ್ಮ ಬಾಲ್ಯ ಕಳೆಯುತ್ತಿರುತ್ತಾರೆ. ಆದರೆ ಈತ ತುಂಬಾ ಡಿಫರೆಂಟ್. ಎಷ್ಟರ ಮಟ್ಟಿಗೆ ಅಂದರೆ ಸ್ವ ಇಚ್ಛೆಯಿಂದ “ಮೋಟೋ ಕ್ರಾಸ್ ಡರ್ಟ್ ಬೈಕ್ ರೇಸ್‌ನಲ್ಲಿ” ಭಾಗವಹಿಸಿರುವ ಸುರಾಗ್ ಎಸ್ ರೈ ಎಲ್ಲರ ಗಮನ ಸೆಳೆದಿದ್ದಾರೆ.

ಮಡಂತ್ಯಾರು, ಬಳ್ಳಮಂಜ ಮೊಸರು ಕುಡಿಕೆಯಲ್ಲಿ ಮೋಟೋ ಕ್ರಾಸ್ ಡರ್ಟ್ ಬೈಕ್ ರೇಸ್‌ನಲ್ಲಿ ಭಾಗವಹಿಸಿರುವ ಮಂಗಳೂರಿನ ಮರೋಳಿಯ ಲಾಲ್‌ಬಹದ್ದೂರ್ ಶಾಸ್ತ್ರಿ ಲೇಔಟ್ ಸುದರ್ಶನ್ ಬಿ.ರೈ ಹಾಗೂ ಸುಶ್ಮಿತಾ ಎಸ್. ರೈ ಅವರ ಪುತ್ರನಾಗಿರುವ ಸುರಾಗ್ ತಂದೆಯೊಂದಿಗೆ ಮೊಬೈಲ್‌ನಲ್ಲಿ ರೀಲ್ಸ್ ನೋಡಿ ಆಕರ್ಷಿತನಾಗಿ ತಾನೂ ಮೋಟೋ ಕ್ರಾಸ್ ಡರ್ಟ್ ಬೈಕ್ ರೇಸ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಆಕಾಂಕ್ಷೆ ಬೆಳೆಸಿಕೊಂಡ.

ಸುರಾಗ್‌ಗೆ 6ನೇ ವರ್ಷದ ಹುಟ್ಟುಹಬ್ಬಕ್ಕೆ ಪೋಷಕರು ಟಾಯ್ ಕಿಡ್ ಬೈಕ್ ಉಡುಗೊರೆಯಾಗಿ ನೀಡಿದರು. ಎರಡು ಮೂರು ದಿವಸಗಳಲ್ಲಿ ಬೈಕ್ ಸವಾರಿ ಕೌಶಲ್ಯ ಅರಿತುಕೊಂಡ ಸುರಾಗ್. ಇದಾದ ಬಳಿಕ ಸುರಾಗ್‌ಗೆ ತರಬೇತಿದಾರರನ್ನು ಹುಡುಕುತ್ತಿದ್ದ ತಂದೆಗೆ ರೀಲ್ಸ್ ಮೂಲಕ ಮಂಗಳೂರಿನ ಮೋಟೋ ರೇಸಿಂಗ್ ತಂಡದ ರೇಸರ್ ಕಿರಣ್ ಪೂಜಾರಿ ಪರಿಚಯವಾಗಿ ಸುರಾಗ್‌ಗನ್ನು ಟ್ರಾö್ಯಕ್‌ಗೆ ಕರೆಸಿ ಕೊಂಡು ತರಬೇತಿ ನೀಡಿದರು.

ಸಣ್ಣ ವಯಸಿನಿಂದಲೂ ಎರಡು ಚಕ್ರದ ಸೈಕಲ್‌ನ್ನು ಯಾರಿಗೂ ಸಾಟಿಯಿಲ್ಲವೆನ್ನುವಂತೆ ಸವಾರಿಸಿ, ವೀಲಿಂಗ್ ನಡೆಸುತ್ತಿದ್ದ. ಸುರಾಗ್‌ಗೆ ಎಕಾಗ್ರತೆ ಕಡಿಮೆ ಎನ್ನುತ್ತಾರೆ ತಂದೆ. ಅವನಲ್ಲಿ ಎಕಾಗ್ರತೆ ಮೈಗೂಡಬೇಕೆಂದು ಚೆಸ್, ಕರಾಟೆಗೆ ಸೇರಿಸಿದರು ಆದರೆ ಅದರಲ್ಲಿ ಆಸಕ್ತಿ ತೋರಲಿಲ್ಲ ಸುರಾಗ್. ಬೆಂಗಳೂರಿನ 7 ವರ್ಷದ ಹುಡುಗ ಬೈಕ್ ರೇಸ್ ರೈಡಿಂಗ್ ರೀಲ್ಸ್ನ್ನು ತಂದೆಯೊAದಿಗೆ ನೋಡಿ ನಾನು ಆ ರೀತಿ ಮಾಡಬೇಕು ಎಂದು ಆಸಕ್ತಿ ತೋರಿದ್ದ ಸುರಾಗ್.

ಸುಮಾರು ೮.೫.ಲಕ್ಷ ರೂ. ಮೌಲ್ಯದ ಕೆಟಿಎಂ50ಎಸ್‌ಎಕ್ಸ್ ಬೈಕ್ ಮತ್ತು ಕವಚಗಳನ್ನು ರೇಸ್‌ಗಾಗಿ ವಿದೇಶದಿಂದ ಖರೀದಿಸಲಾಗಿದೆ. ಸುಮಾರು 20 ದಿವಸಗಳ ತರಬೇತಿ ಪಡೆದ ಸುರಾಗ್ ನೇರವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ಬೈಕ್‌ನಲ್ಲಿ ಕೇವಲ ಹತ್ತು ದಿನದ ತರಬೇತಿ ಪಡೆದಿದ್ದರು. ಮಟ್ರಾö್ಯಕ್‌ನಲ್ಲಿ ಸವಾರಿಸಿದ ರೈಡರ್ ಸುರಾಗ್ ಯಾವುದೇ ತರಬೇತಿ ಇಲ್ಲದೇ ಜಪ್ಪಿಂಗ್ ಮಾಡಿರುವುದು ವಿಶೇಷ.

ಸುರಾಗ್‌ನ ರೈಡಿಂಗ್ ವಿಡೀಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆಚ್ಚಿನ ಮಂದಿಯ ವ್ಯಾಟ್ಸ್ಪ್ ಸ್ಟೇಟಸ್, ಇನ್‌ಸ್ಟಾಗ್ರಾಮ್‌ನಲ್ಲಿ ಸುರಾಗ್ ಎಸ್.ರೈ ನಾಮ ಸ್ಮರಣೆ ಕಂಡು ಬಂದವು. ಪ್ರಸ್ತುತ ಕರಾವಳಿಯಲ್ಲಿ ಸುರಾಗ್‌ನ್ನು ಅಭಿಮಾನಿಗಳು ಹಾರೈಸುತ್ತಿದ್ದು ಈ ಬಾಲ ಪ್ರತಿಭೆ ಸಾಧನೆ ಮಾಡಿ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ.

“ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿರುವ ಸುರಾಗ್ ಬಗ್ಗೆ ಯಾವ ರೀತಿ ತರಬೇತಿ ಪಡೆದುಕೊಂಡ ಎಂದು ಅನೇಕ ಮಂದಿ ಕೇಳುತ್ತಿದ್ದಾರೆ. ಹೆಚ್ಚಿನ ಮಕ್ಕಳು ಈ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಏರ್ಪಾಡು ಆಗಬೇಕು. ಒಬ್ಬನಿಗೆ ಸ್ಪರ್ಧೆ ಸರಿಯಲ್ಲ, ಹೆಚ್ಚಿನ ಮಂದಿ ಭಾಗವಹಿಸಿದರೆ ಪ್ರತಿಭೆಗಳು ಅನಾವರಣಗೊಂಡು ಉತ್ತಮ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಸುರಾಗ್ ತಂದೆ ಸುದರ್ಶನ್ ರೈ ಅಭಿಪ್ರಾಯಪಟ್ಟಿದ್ದಾರೆ”.

ತುಂಟತನದ ಸುರಾಗ್ ಶಕ್ತಿ ನಗರದ ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಒಂದನೇ ತರಗತಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ತಂಗಿ ಶ್ರೀನಿಕಾರೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಎರಡು ಕಡೆಯ ಸ್ಪರ್ಧೆ ಆಯೋಜಕರು ಸ್ಮರಣಿಕೆ ನೀಡಿ ಸುರಾಗ್ ಅವರನ್ನು ಗೌರವಿಸಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿರುವ ಸುರಾಗ್ ಜನಮನಸದಲ್ಲಿ ಪ್ರೀತಿ ಗಳಿಸುತ್ತಿದ್ದಾರೆ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಉತ್ಸಾಹ ಹೊಂದಿದ್ದಾನೆ. ಸುರಾಗ್‌ನೊಂದಿಗೆ ೧೧ವರ್ಷದ ಬಾಲಕ ಅಚಿಂತ್ಯಾ ಕೂಡ ರೈಡಿಂಗ್ ಮಾಡಿ ಗಮನಸೆಳೆದಿದ್ದಾರೆ.

ಸುರಾಗ್‌ಗೆ ಹರ್ಷೋದ್ಗಾರ; ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಂತೆ ದೊಡ್ಡವರ ಮಧ್ಯೆ ತಾನು ಕಡಿಮೆಯಿಲ್ಲ ಎಂದು ಮಡಂತ್ಯಾರು, ಬಳ್ಳಮಂಜ ಮೊಸರುಕುಡಿಕೆಯಲ್ಲಿ ಮೋಟೋ ಕ್ರಾಸ್ ಡರ್ಟ್ ಬೈಕ್ ರೇಸ್‌ನಲ್ಲಿ ಭಾಗವಹಿಸಿದ ಅದ್ಭುತ ಪ್ರದರ್ಶನ ನೀಡಿ ಪ್ರೇಕ್ಷಕರ ಪ್ರೀತಿ ಗಳಿಸಿದರು. ಮಡಂತ್ಯಾರಿನ ಬೈಕ್ ರೇಸ್‌ನಲ್ಲಿ ಎರಡು ಮೂರು ತಿರುವಿನಲ್ಲಿ ಬಿದ್ದರೂ ಛಲ ಬಿಡದೆ ರೇಸ್ ಪೂರ್ತಿಗೊಳಿಸಿದರು. ದೊಡ್ಡವರ ಸ್ಪರ್ಧೆಗೆ ಏರ್ಪಡಿಸಿದ್ದ ಬಹು ಕಠಿಣ ಟ್ರಾö್ಯಕ್ ಆಗಿದ್ದು ಸ್ಫರ್ಧಥಿಗಳಿಗೆ ಸವಲಾಗಿತ್ತು. ಒಂದೇಡೆ ಜಡಿ ಮಳೆ, ಕೆಸರು, ತಿರುವುಗಳ ನಡುವೆ ಎಡವಿದರೂ, ಜಪ್ಪಿಂಗ್ ಮಾಡಿ ಸೂಪರ್ ಪ್ರದರ್ಶನ ನೀಡಿದರು. ನೆರೆದಿದ್ದ ಪ್ರೇಕ್ಷಕರಲ್ಲಿ ಸುರಾಗ್ ನಾಮಸ್ಮರಣೆ ಮೊಳಗಿ, ಬಾಲಕನಿಗೆ ಮನದಾಳದ ಹರ್ಷೋದ್ಗಾರ ಕೂಗಿದರು. ಅಭಿಮಾನಿಗಳು ಸಾಲು ಸಾಲಾಗಿ ನಿಂತು ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸುರಾಗ್‌ನ್ನು ಕೊಂಡಾಡಿದರು.

ಮೊದಲ ರೇಸ್ :ಕಿರಣ್ ಪೂಜಾರಿ ತರಬೇತುದಾರ
20 ದಿನದ ತರಬೇತಿ ಪಡೆದು ಮೊದಲ ಬಾರಿಗೆ ರೇಸ್‌ನಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿರುವ ಅನುಭವ ಸುರಾಗ್‌ಗೆ. ಇನ್ನೂ ಕೂಡ ಉತ್ತಮ ಪ್ರದರ್ಶನ ನೀಡುವ ನೀರಿಕ್ಷೆಯಿದೆ.

ಹೆಮ್ಮೆನಿಸುತ್ತಿದೆ:-ಸುರಾಗ್ ಎಸ್ ರೈ ಪೋಷಕರು

ಮಗನ ಸಾಧನೆ ಹೆಮ್ಮೆನಿಸುತ್ತಿದೆ. ನಮ್ಮ ಜೀವನದಲ್ಲಿ ಇಂತಹ ಅವಕಾಶಗಳು ಸಿಕ್ಕಿರಲಿಲ್ಲ ಆದರೆ ಮಕ್ಕಳಿಗೆ ಸಿಕ್ಕಿರುವುದು ಸಂತಸ ತಂದಿದೆ. ಮಗನ ಸಾಧನೆಗೆ ಸದಾ ಪ್ರೋತ್ಸಹ ಇದೆ.

ಸೂಪರ್ ರೇಸ್:-ಸುರಾಗ್ ಎಸ್.ರೈ
ರೇಸ್ ಸೂಪರ್ ಆಗಿತ್ತು. ಎರಡು ಕಡೆಗಳಲ್ಲಿ ಟ್ರೋಫಿ, ಸಿಕ್ಕಿದೆ. ಕೆಸರು ಇತ್ತು ನನಗೆ ರೈಡ್ ಮಾಡಲು ಕಷ್ಟವಾಯಿತು ಬಿದ್ದಿದೆ ಆದರೆ ನನಗೆ ಭಾಗವಹಿಸಿರುವುದು ತುಂಬಾ ಖುಷಿ ಇದೆ.

Related posts

ಮಿನಿ ವಿಮಾನ ನಿಲ್ದಾಣ: ಧರ್ಮಸ್ಥಳ ನೀರಚಿಲುಮೆ ಬಳಿ ಜಾಗ ಪರಿಶೀಲನೆ ನಡೆಸಿದ ಅಧಿಕಾರಿಗಳು

Suddi Udaya

ಜಿಲ್ಲಾಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆ: ವೇಣೂರು ಸ. ಪ್ರೌಢ ಶಾಲಾ ವಿದ್ಯಾರ್ಥಿ ಅನ್ವಿತಾ ಎ ಪ್ರಥಮ ಸ್ಥಾನ

Suddi Udaya

8ನೇ ವರ್ಷದ ಮಂಗಳೂರು ಕಂಬಳಕ್ಕೆ ಅದ್ದೂರಿ ಚಾಲನೆ: ರಾಮ – ಲಕ್ಷ್ಮಣ ಜೋಡುಕರೆಯಲ್ಲಿ ಪಂದ್ಯಾಟ

Suddi Udaya

ಅಭಯ ಹಾಸ್ಪಿಟಲ್ ನಲ್ಲಿ ನೇತ್ರ ಚಿಕಿತ್ಸಾ ಸೇವೆ ಪ್ರಾರಂಭ

Suddi Udaya

ಧರ್ಮಸ್ಥಳ: ಜೋಡುಸ್ಥಾನ ನಿವಾಸಿ ಗೋವಿಂದ ಗೌಡರ ಪುತ್ರ ಪ್ರಥಮ್ ನಿಧನ

Suddi Udaya

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya
error: Content is protected !!