ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪ್ರಕರಣಗಳಿಗೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಗೆ ಬೆಳ್ತಂಗಡಿ ಠಾಣೆಗೆ ಆ.23ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.
ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಬಗ್ಗೆ ದೂರುದಾರನ ಮಾಹಿತಿ ರಿವಿಲ್ ಮಾಡಿದ್ದು, ಕಾಲ್ಪನಿಕ ಮಾಹಿತಿಗಳನ್ನು ಮಾಡಿಟ್ಟು ದೂತ ಎಂಬ ಯೂಟ್ಯೂಬ್ ನಲ್ಲಿ ಸಮೀರ್ ಎಮ್.ಡಿ ವಿಡಿಯೋ ಪ್ರಸಾರ ಮಾಡಿದ ಬಗ್ಗೆ ಜು.12 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಧರ್ಮಸ್ಥಳ ಪೊಲೀಸರು ಮೂರು ಭಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದೆ ಇರುವ ಕಾರಣ ಆ.21 ರಂದು ಧರ್ಮಸ್ಥಳ ಪೊಲೀಸರು ಬೆಂಗಳೂರು ಬಾಡಿಗೆ ಮನೆಯಿಂದ ಬಂಧಿಸಲು ಹೋಗಿದ್ದು, ಈ ವೇಳೆಗೆ ಅದೇ ದಿನ ಸಂಜೆ ಮಂಗಳೂರು ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ನಿರೀಕ್ಷಣಾ ಜಾಮೀನು ನೀಡುವ ವೇಳೆ ಕೋರ್ಟ್ ಹಲವು ಷರತ್ತು ವಿಧಿಸಿದ್ದ. ಪೊಲೀಸರ ವಿಚಾರಣೆಗೆ ಹಾಜರಾಗಬೇಕು, ಸಾಕ್ಷಿ ನಾಶ ಮಾಡಬಾರದೆಂದು ಕೋರ್ಟ್ ಷರತ್ತು ವಿಧಿಸಿತ್ತು. ಅದರಂತೆ ಧರ್ಮಸ್ಥಳ ಪೊಲೀಸರ ವಿಚಾರಣೆ ಬಾಕಿ ಇರುವ ಕಾರಣದಿಂದ ಆ.22 ರಂದು ಮತ್ತೆ ಸಮೀರ್ ಎಮ್.ಡಿ ಗೆ ವಿಚಾರಣೆಗೆ ಆ.23 ರಂದು 10 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣೆ ಅಥವಾ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಕಚೇರಿಗೆ ಖುದ್ದು ಹಾಜರಾಗಿ ವಿಚಾರಣೆ ಎದುರಿಸಲು ನೋಟಿಸ್ ಜಾರಿ ಮಾಡಿದ್ದಾರೆ.











