September 6, 2026
ಅಪರಾಧ ಸುದ್ದಿಪ್ರಮುಖ ಸುದ್ದಿ

ಯೂಟ್ಯೂಬರ್ ಸಮೀರ್ ಎಮ್.ಡಿ ಎರಡು ಮನೆಗೆ ಪೊಲೀಸ್ ಎಂಟ್ರಿ

ಬೆಳ್ತಂಗಡಿ: ಯೂಟ್ಯೂಬರ್ ಸಮೀರ್ ಎಮ್.ಡಿಗೆ ಮಂಗಳೂರು ಕೋರ್ಟ್ ನಿಂದ ಜಾಮೀನು ಲಭಿಸಿದರೂ ಧರ್ಮಸ್ಥಳ ಪೊಲೀಸರ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸರು ಸಮೀರ್ ಎಮ್.ಡಿ ಕೋರ್ಟ್ ಗೆ ನೀಡಿದ ವಿಳಾಸಗಳಾದ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಂಡಿಹಟ್ಟಿ ನಿವಾಸಕ್ಕೆ ಆ.22 ರಂದು ನೋಟಿಸ್ ನೀಡಲು ತೆರಳಿದಾಗ ಮನೆ ಬಾಗಿಲಿಗೆ ಬೀಗ ಹಾಕಿದ್ದು ನಂತರ ನೋಟಿಸ್ ಮನೆಯ ಗೋಡೆಗೆ ಅಂಟಿಸಿದ್ದಾರೆ.

ಧರ್ಮಸ್ಥಳ ಪೊಲೀಸರ ಮತ್ತೊಂದು ತಂಡ ಬೆಂಗಳೂರು ಜಿಗಣಿಯಲ್ಲಿರುವ ಹುಲ್ಲಹಳ್ಳಿಯಲ್ಲಿರುವ ಬಾಡಿಗೆ ಮನೆಗೆ ಹೋದಾಗ ಕೂಡ ಮನೆ ಬಾಗಿಲಿಗೆ ಬೀಗ ಹಾಕಲಾಗಿತ್ತು ಬಳಿಕ ಪೊಲೀಸರು ಗೋಡೆಗೆ ನೋಟಿಸ್ ಅಂಟಿಸಿದ್ದಾರೆ. ಧರ್ಮಸ್ಥಳ ಪೊಲೀಸರು ಇ-ಮೇಲ್ ಹಾಗೂ ಮೊಬೈಲ್ ನಂಬರ್ ಗೆ ಸಂಪರ್ಕ ಮಾಡಿದ್ರೂ ಯಾವುದೇ ಉತ್ತರ ಬರುತ್ತಿಲ್ಲ. ನೋಟಿಸ್ ನಲ್ಲಿ ಆ.24 ರಂದು ಭಾನುವಾರ ಧರ್ಮಸ್ಥಳ ಪೊಲೀಸ್ ಠಾಣೆ ಅಥವಾ ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ಕಚೇರಿಗೆ ತನಿಖೆಗೆ ಬರಲು ಸೂಚನೆ ನೀಡಿದ್ದಾರೆ. ಧರ್ಮಸ್ಥಳ ಪೊಲೀಸರು ಕೋರ್ಟ್ ಗೆ ದಾಖಲೆ ಸಲ್ಲಿಸಿ ನಿರೀಕ್ಷಣಾ ಜಾಮೀನು ರದ್ದು ಮಾಡಿ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Related posts

5 ವರ್ಷಗಳ ಹಿಂದೆ ಆ. 9ರಂದು ಪ್ರವಾಹದಿಂದ ಚಾಮಾ೯ಡಿ‌ ಕೊಳಂಬೆ ಪರಿಸರದಲ್ಲಿ ಅವಾಂತರ ಸೃಷ್ಟಿ: ಚಾಮಾ೯ಡಿಯಲ್ಲಿ ಮೃತ್ಯುಂಜಯ ನದಿಗೆ ಹಾಲೆರೆಯುವ ಹಾಗೂ ವಯನಾಡು ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ರೂ. 65ಲಕ್ಷ ಲಾಭ, ಶೇ.15 ಡಿವಿಡೆಂಟ್

Suddi Udaya

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಭಾರತೀಯ ಸೈನ್ಯದ ಅಭ್ಯುದಯಕ್ಕಾಗಿ ಸೀಯಾಳಭಿಷೇಕದ ಮೂಲಕ ವಿಶೇಷ ಪ್ರಾರ್ಥನೆ

Suddi Udaya

ಬೆಳ್ತಂಗಡಿ ಸಮಾಜ ಮಂದಿರದಲ್ಲಿ ಭಗವದ್ಗೀತ ಪ್ರವಚನ ಸಪ್ತಾಹಕ್ಕೆ ಚಾಲನೆ:

Suddi Udaya

ರುಡ್ ಸೆಟ್ ಸಂಸ್ಥೆಯ ಶಿಬಿರಾರ್ಥಿಗಳಿಂದ ಸ್ವಚ್ಛತಾ ಹಿ ಸೇವಾ ಅಭಿಯಾನ

Suddi Udaya

ಜು.8ರಿಂದ ಗಡಾಯಿಕಲ್ಲು ಚಾರಣಕ್ಕೆ ನಿರ್ಬಂಧ

Suddi Udaya
error: Content is protected !!