March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ. 7 ಡಿವಿಡೆಂಟ್

ನಿಡ್ಲೆ: ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.29 ರಂದು ಬರೆಂಗಾಯ ಕಲ್ಕುಡಗುಡ್ಡೆ ನಾಗವೇಣಿ ಅಮ್ಮ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಂದರ ಗೌಡ ಕಜೆ ವಹಿಸಿ ಮಾತನಾಡಿ ಸದಸ್ಯರಿಗೆ ಶೇ. 7ಡಿವಿಡೆಂಟ್ ಹಾಗೂ ಶೇ. 65 ರಷ್ಟು ಬೋನಸ್ ನೀಡುವುದಾಗಿ ತಿಳಿಸಿದರು.

ದ.ಕ. ಹಾಲು ಒಕ್ಕೂಟ ಪಶು ವೈದ್ಯಾಧಿಕಾರಿ ಡಾ। ಗಣಪತಿ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಉಪ ವ್ಯವಸ್ಥಾಪಕ ಡಾ| ಸತೀಶ್ ರಾವ್ , ದ.ಕ. ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸಂದೀಪ್ ಜೈನ್ ಉಪಸ್ಥಿತರಿದ್ದರು.

ಈ ವೇಳೆ ಸ್ಥಳ ದಾನಿಗಳಾದ ಹೊನ್ನಪ್ಪ ಗೌಡ ಮೆರ್ಲ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಿರ್ದೇಶಕರಾದ ನಿರಂಜನ್, ಚೆನ್ನಪ್ಪ ದೇವಾಡಿಗ , ಮುಕುಂದ ದೇವದಾರ್ , ಶಿವಪ್ರಸಾದ್ , ಹೇಮಂತ ಗೌಡ , ಅಣ್ಣು ಗೌಡ , ಶ್ರೀಮತಿ ಶಶಿಕಲಾ , ಶ್ರೀಮತಿ ಗೀತಾ ಎಂ.ಕೆ, ಶ್ರೀಮತಿ ಸುಮನ, ಹಾಲು ಪರೀಕ್ಷಕ ಶೇಖರ ಗೌಡ, ಸಹಾಯಕಿ ಪರಮೇಶ್ವರಿ , ಕೃ.ಗ ಕಾರ್ಯಕರ್ತೆ ಶಶಿಕಲಾ ಉಪಸ್ಥಿತರಿದ್ದರು.

ಉಪಾಧ್ಯಕ್ಷೆ ಗಾಯತ್ರಿ ಹೆಚ್. ಗೌಡ ಪ್ರಾರ್ಥಿಸಿ, ನಿರ್ದೇಶಕ ರುಕ್ಮಯ್ಯ ಪೂಜಾರಿ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶಾಜಿ ತೋಮಸ್ ವರದಿ ವಾಚಿಸಿ, ವಂದಿಸಿದರು.

Related posts

ಎಸ್ ಎಸ್ ಎಲ್ ಸಿ ಫಲಿತಾಂಶ: ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 20ನೇ‌ ಧರ್ಮಸ್ಥಳ ಶಾಖೆಯ ಉದ್ಘಾಟನಾ ಸಮಾರಂಭ

Suddi Udaya

ಶಿರಸಿಯ ನಾರಾಯಣ ಆರ್ ಕೋಮಾರ್ ರವರಿಂದ ಸೇವಾಧಾಮಕ್ಕೆ ಧನ ಸಹಾಯ

Suddi Udaya

ಎಸ್.ಡಿ.ಎಮ್. ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಧನೆಗೈದ ಕುಮಾರ್‌ ನಿಹಾರ್‌ ಎಸ್‌ ಆರ್‌ ಇವರೊಂದಿಗೆ ವಿಶೇಷ ಸಂವಾದ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನ ಐಟಿ ಕ್ಲಬ್ ನ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ನೆರಿಯ: ಕೋಲೋಡಿ ತೋಡಿಗೆ ಪೈಪ್ ಮೋರಿ ಅಳವಡಿಕೆ: ಭರವಸೆ ಈಡೇರಿಸಿದ ರಕ್ಷಿತ್ ಶಿವರಾಂ

Suddi Udaya
error: Content is protected !!