September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗಣೇಶೋತ್ಸವಕ್ಕೆಂದು ಹೋದ ವ್ಯಕ್ತಿಯಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ವೇಣೂರು: ಆ. 27ರಂದು ವೇಣೂರು ಗಣೇಶೋತ್ಸವಕ್ಕೆ ಹೋಗಿದ್ದ ವ್ಯಕ್ತಿಯೋರ್ವರ ಶವ ಕರಿಮಣೇಲು ಖಂಡಿಗ ಎಂಬಲ್ಲಿ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಆ.30ರಂದು ವರದಿಯಾಗಿದೆ.

ಕರಿಮಣೇಲು ಮನೆ ನಿವಾಸಿ ಭಾಸ್ಕರ ಹೆಗ್ಗಡೆ (೫೦ವ) ಮೃತಪಟ್ಟವರಾಗಿದ್ದಾರೆ. ಭಾಸ್ಕರ ಹೆಗ್ಡೆ ಅವರು ಆ.27ರಂದು ಸಂಜೆ ಸಂಬಂಧಿ ಪ್ರಶಾಂತ್ ಶೆಟ್ಟಿಯವರೊಂದಿಗೆ ವೇಣೂರು ಗಣೇಶೋತ್ಸವಕ್ಕೆ ಹೋಗಿದ್ದರು. ರಾತ್ರಿಯಾದರೂ ಮನೆಗೆ ಬರಲಿಲ್ಲ. ಈ ಹಿಂದೆ ಕೂಡಾ ಹೇಳದೇ ಕೇಳದೇ ಸಂಬಂಧಿಕರ ಮನೆ ಗೆ ಹೋಗಿ 2-3 ದಿನಗಳ ಬಳಿಕ ಮನೆಗೆ ಬರುತ್ತಿದ್ದರು ಎಂದು ಮನೆಯವರು ಹುಡುಕಾಡಲಿಲ್ಲವೆನ್ನಲಾಗಿದೆ. ಆ.30ರಂದು ಪರಿಚಯದ ಸದಾನಂದ ಎಂಬವರು ಕರಿಮಣೇಲು ಗ್ರಾಮದ ಖಂಡಿಗ ಎಂಬಲ್ಲಿ ಚರಂಡಿ ನೀರಿನಲ್ಲಿ ಬಾಸ್ಕರ ಹೆಗ್ಡೆಯವರು ಬಿದ್ದು ಮೃತಪಟ್ಟಿರುವುದಾಗಿ ತಿಳಿಸಿದ್ದಂತೆ ಮನೆಯವರು ಸ್ಥಳಕ್ಕೆ ಬಂದು ನೋಡಿದಾಗ ಭಾಸ್ಕರ ಹೆಗ್ಡೆಯವರ ಶವ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತರು ಅಮಲು ಪದಾರ್ಥ ಸೇವಿಸಿಕೊಂಡು ಮನೆಯ ಕಡೆಗೆ ನಡೆದುಕೊಂಡು ಹೋಗುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ತೋಡಿನ ನೀರಿಗೆ ಬಿದ್ದು ಮೃತಪಟ್ಟಂತೆ ಕಂಡು ಬಂದಿದೆ ಎಂದು ಅಶೋಕ್ ಹೆಗ್ಡೆ ನೀಡಿದ ದೂರಿನಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಭಜನಾ ಪರಿಷತ್ತಿಗೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕೊಯ್ಯೂರು ಪಿ ಚಂದ್ರಶೇಖರ ಸಾಲ್ಯಾನ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮಕಲಶೋತ್ಸವಗಣಪತಿ ಹೋಮ, ಮಕರ ಲಗ್ನದಲ್ಲಿ ಶ್ರೀ ಉಳ್ಳಾಲ್ತಿ ದೇವಿಯ ಪ್ರತಿಷ್ಠೆ ಜಿವ ಕಲಶಾಭಿಷೇಕ,ಗ್ರಾಮ ಸುಭೀಕ್ಷೇಗಾಗಿ ಶ್ರೀಚಕ್ರ ಪೂಜೆ

Suddi Udaya

ರಾಜ್ಯಮಟ್ಟದ ನೆಟ್ ಬಾಲ್ ಚಾಂಪಿಯನ್ಶಿಪ್ : ಉಜಿರೆಯ ಎಸ್.ಡಿ.ಎಂ ಕಾಲೇಜಿಗೆ ಅವಳಿ ಪ್ರಶಸ್ತಿ

Suddi Udaya

ಸೇವಾಭಾರತಿಯಿಂದ ಬ್ಯಾಂಕ್ ನೋಟ್ ಪೇಪರ್ ಮಿಲ್ ಪ್ರೈವೇಟ್ ಲಿಮಿಟೆಡ್ ಗೆ ಭೇಟಿ

Suddi Udaya

ಗುರುವಾಯನಕೆರೆ: ಮುಸ್ತಾಕ್ ಅನುಮಾನಸ್ಪದ ಸಾವು ಪ್ರಕರಣ: ಜೊತೆಯಲ್ಲಿದ್ದ ಕಾಶಿಪಟ್ಣದ ಇಬ್ರಾಹಿಂ ಲತೀಫ್ ಬಂಧನ

Suddi Udaya

ಕೊಕ್ಕಡ ಗ್ರಾ.ಪಂ. ನ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

Suddi Udaya
error: Content is protected !!