25.7 C
ಪುತ್ತೂರು, ಬೆಳ್ತಂಗಡಿ
March 7, 2026
ವರದಿ

ಬಡಗಕಾರಂದೂರು: ನಿವೃತ್ತ ಶಿಕ್ಷಕಿ ಗೆ ಬೀಳ್ಕೊಡುಗೆ ಸಮಾರಂಭ

ಬಡಗಕಾರಂದೂರು: ಸ.ಉ.ಪ್ರಾ. ಶಾಲೆ ಬಡಗಕಾರಂದೂರು ಇಲ್ಲಿಯ ನಿವೃತ್ತ ಶಿಕ್ಷಕಿ ಶ್ರೀಮತಿ ಸರೋಜ ಇವರಿಗೆ ಬೀಳ್ಕೊಡುಗೆ ಸಮಾರಂಭ ಶಾಲಾ ಸಭಾಂಗಣದಲ್ಲಿ ನೆರವೇರಿತು. ಶಾಲಾ ದತ್ತು ಸ್ವೀಕರಿಸಿದ ಶ್ರೀ ಸತ್ಯ ದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ ಅಜಿಲರು, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶಶಿಕಾಂತ ನಾಯಕ್ ರವರು ಮತ್ತು ಆಗಮಿಸಿದ ಅತಿಥಿಗಳು ನಿವೃತ್ತ ಶಿಕ್ಷಕಿ ಯವರನ್ನು ಸನ್ಮಾನಿಸಿ, ಅವರ ಸೇವೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಗ್ರಾ ಪಂ ಸದಸ್ಯರುಗಳಾದ ಹರೀಶ್ ಆಚಾರ್ಯ ಮತ್ತು ಕೃಷ್ಣಪ್ಪ ಪೂಜಾರಿ ಬಿಕ್ಕಿರ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾ, ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಎನ್, ಶ್ರೀ ಧ. ಗ್ರಾ ಯೋ. ಅಳದಂಗಡಿ ವಲಯ ಮೇಲ್ವೀಚಾರಕರಾದ ಶ್ರೀಮತಿ ಯಶೋಧ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸಾದ್ ಪೂಜಾರಿ, ಎಸ್ ಡಿ ಎಂ ಸಿ ಸದಸ್ಯರು, ಹೆತ್ತವರು, ಹಳೆ ವಿದ್ಯಾರ್ಥಿಗಳು, ಮಕ್ಕಳು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ಸಹ ಶಿಕ್ಷಕಿ ಶ್ರೀಮತಿ ಮಂಗಳಾ ಕೆ ನಿವೃತ್ತ ಶಿಕ್ಷಕಿಯ ಪರಿಚಯ -ಅನಿಸಿಕೆಯನ್ನು ಹೇಳಿದರು. ವಿದ್ಯಾರ್ಥಿನಿಯರಾದ ಕು. ಆಫಿಯಾ ಹಾಗೂ ಕು. ಸಿಂಚನಾ ಅನಿಸಿಕೆ ವ್ಯಕ್ತ ಪಡಿಸಿದರು. ಶಿಕ್ಷಕಿ ಶ್ರೀಮತಿ ಶ್ವೇತಾ ಎಚ್ ಎನ್ ಸನ್ಮಾನ ಪತ್ರ ವಾಚಿಸಿದರು. ಮುಖ್ಯ ಶಿಕ್ಷಕರಾದ ಸುರೇಶ್ ಎನ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ದಿವ್ಯಾ ಕುಮಾರಿ ಧನ್ಯವಾದವನ್ನಿತ್ತರು. ಸಹ ಶಿಕ್ಷಕಿ ಶ್ರೀಮತಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.

Related posts

ಮಂಗಳೂರು ಕಾವೂರು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅರಸಿನಮಕ್ಕಿ ಶಾಖೆಯ ಉದ್ಘಾಟನೆ

Suddi Udaya

ಕು. ಸೌಜನ್ಯಳ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗಾಗಿ ಪುದುವೆಟ್ಟು ವಿ. ಹಿಂ. ಪ. ಭಜರಂಗದಳ ವತಿಯಿಂದ ಶ್ರೀ ವನದುರ್ಗ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

Suddi Udaya

ಗೇರುಕಟ್ಟೆ: ಹಲೇಜಿ -ಕಲಾಯಿ ಸಂಪರ್ಕ ರಸ್ತೆಯ ಚೆಕ್ ಡ್ಯಾಮ್ ನಲ್ಲಿ ತುಂಬಿಕೊಂಡ ಮರದ ದಿಮ್ಮಿಗಳ ತೆರವು

Suddi Udaya

ಜಮೀಯ್ಯತುಲ್ ಪಲಾಹ್ ಬೆಳ್ತಂಗಡಿ ವತಿಯಿಂದ ಪ್ರತಿಭಾ ಪುರಸ್ಕಾರ, ರೂ. 3 ಲಕ್ಷ‌ ವಿದ್ಯಾರ್ಥಿವೇತನ ವಿತರಣೆ

Suddi Udaya

ಅಳದಂಗಡಿ: ಜನಮಂಗಳ ಕಾರ್ಯಕ್ರಮದಡಿ ವಿಲ್ ಚೇರ್ ವಿತರಣೆ

Suddi Udaya

ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

Suddi Udaya
error: Content is protected !!