ಬೆಳ್ತಂಗಡಿ: ನಡ ಸರಕಾರಿ ಪ್ರೌಢಶಾಲೆಯಲ್ಲಿ ಬಂಗಾಡಿ ಮತ್ತು ಬೆಳ್ತಂಗಡಿ ವಲಯ ಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ- ಬಾಲಕಿಯರ ಖೋ-ಖೋ ಪಂದ್ಯಾಟಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ಗೌಡ ವಹಿಸಿದ್ದರು.
ನಡ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಂಜುಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಣಾಧಿಕಾರಿ ಶ್ರೀಮತಿ ಸುಜಯ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ತರಬೇತುದಾರರಾದ ಪಂಚಾಕ್ಷರಪ್ಪ, ಸಂದೀಪ್, ಗುಣಪಾಲ್, ಅಜಿತ್ ತೀರ್ಪುಗಾರರಾಗಿ ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಬಾಲಕಿಯರ ವಿಭಾಗದಲ್ಲಿ ನಡ ಪ್ರೌಢಶಾಲೆ ಪ್ರಥಮ, ನಾವೂರು ಪ್ರೌಢಶಾಲೆ ದ್ವಿತೀಯ , ಬಾಲಕರ ವಿಭಾಗದಲ್ಲಿ ನಾವೂರು ಪ್ರೌಢಶಾಲೆ ಪ್ರಥಮ, ಮುಂಡಾಜೆ ವಿವೇಕಾನಂದ ಪ್ರೌಢಶಾಲೆ ದ್ವಿತೀಯ ವಿಜೇತ ತಂಡವಾಗಿ ಟ್ರೋಫಿ ತನ್ನದಾಗಿಸಿಕೊಂಡಿತು.











