September 6, 2026
ವರದಿಶಿಕ್ಷಣ ಸಂಸ್ಥೆ

ಎಸ್‌ಡಿಎಂ ಪಾಲಿಟೆಕ್ನಿಕ್ ಉಜಿರೆಯಲ್ಲಿ ಕ್ಯಾಂಪಸ್ ನೇಮಕಾತಿ ಚಾಲನೆ

ಉಜಿರೆ: ಎಸ್‌ಡಿಎಂ ಪಾಲಿಟೆಕ್ನಿಕ್, ಉಜಿರೆ ಸಂಸ್ಥೆಯ ಪ್ಲೇಸ್ಮೆಂಟ್ ಸೆಲ್ ವತಿಯಿಂದ ಅಂತಿಮ ವರ್ಷದ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಖ್ಯಾತ ಎಸ್‌ಎಎ ಎಬಿ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯು ನೇಮಕಾತಿ ಪ್ರಕ್ರಿಯೆಯನ್ನು ನಡೆಸಿತು.

ಈ ಕಾರ್ಯಕ್ರಮದಲ್ಲಿ ಕಂಪನಿಯ ಪರವಾಗಿ ರಾಘವೇಂದ್ರ (ಕಾನೂನು ಸಲಹೆಗಾರ), ಪ್ರದೀಪ್ (ಮಾನವ ಸಂಪನ್ಮೂಲಧಿಕಾರಿ) ಮತ್ತು ಮನೋಹರ ಪಟ್ಟವರ್ಧನ್ ( ಮಾನವ ಸಂಪನ್ಮೂಲಧಿಕಾರಿ ಸಿ ಎಸ್ ಇ ಪವರ್ ) ಭಾಗವಹಿಸಿದರು. ಅಮರೇಶ್ ಹೆಬ್ಬಾರ್, ಪ್ಲೇಸ್ಮೆಂಟ್ ಅಧಿಕಾರಿ, ಅತಿಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಎಸ್‌ಡಿಎಂ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಸಂತೋಷ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗಿತು. ಬೋಧಕ ವರ್ಗದ ವರದರಾಜ್ ಬಾಲ್ಲಾಳ್, ಶಿವರಾಜ್ ಪಿ, ಸಾಯಿ ಚರಣ್ , ಅಶೋಕ್ ಮತ್ತು ವಿದ್ಯಾಲಕ್ಷ್ಮಿಅವರು ಸಹ ಹಾಜರಿದ್ದರು. ಮೆಕ್ಯಾನಿಕಲ್ ವಿಭಾಗದ ಒಟ್ಟು 45 ವಿದ್ಯಾರ್ಥಿಗಳು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಈ ನೇಮಕಾತಿ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಉದ್ಯಮ ತಜ್ಞರೊಂದಿಗೆ ಸಂವಾದ ನಡೆಸಲು ಹಾಗೂ ಎಂಜಿನಿಯರಿಂಗ್ ಕ್ಷೇತ್ರದ ಉದ್ಯೋಗಾವಕಾಶಗಳನ್ನು ಅರಿಯಲು ಮೌಲ್ಯಯುತ ವೇದಿಕೆಯನ್ನು ಒದಗಿಸಿತು.

Related posts

ಗೇರುಕಟ್ಟೆ: ಕಾರು-ಬೈಕ್ ಡಿಕ್ಕಿ, ಬೈಕ್ ಸವಾರನಿಗೆ ಗಾಯ

Suddi Udaya

ತ್ವರಿತವಾಗಲಿ ಬೆಳೆ ವಿಮೆ ಕಂತು ಪಾವತಿ: ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು

Suddi Udaya

ಮಡಂತ್ಯಾರು ಕೃತಿ ಪೂಜಾರಿಗೆ ರಾಜ್ಯ ಮಟ್ಟದ “ಗಾನ ಸಿರಿ” ಪ್ರಶಸ್ತಿ

Suddi Udaya

ನೆರಿಯ: ಗಂಡಿಬಾಗಿಲು ನಿವಾಸಿ ಜೋಸೆಫ್ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಬೆಳ್ತಂಗಡಿ: ಜಿಲ್ಲಾಮಟ್ಟದ ಯುವಜನ ಮೇಳ

Suddi Udaya

“ಕಾಶಿ ಸದನ’ ವಸತಿ ಯೋಜನೆಯ ಫಲಾನುಭವಿಗಳಿಗೆ ಧನಸಹಾಯದ ಚೆಕ್ ಹಸ್ತಾಂತರ

Suddi Udaya
error: Content is protected !!