September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆದ್ರಬೆಟ್ಟು ಮರಿಯಾಂಬಿಕಾ ಆಂ.ಮಾ. ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಬೆದ್ರಬೆಟ್ಟು : ಬೆಳ್ತಂಗಡಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟವು ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆ ಬೆದ್ರಬೆಟ್ಟು ಇಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರ್ಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಇವರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.

ವೇದಿಕೆಯಲ್ಲಿ ಮರಿಯಾಂಬಿಕ ಶಾಲಾ ಪ್ರಾಂಶುಪಾಲರಾದ ವಂ| ಫಾದರ್ ಮ್ಯಾತ್ಯು ವಹಿಸಿದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಸುಜಯ ನೆರವೇರಿಸಿ ಶುಭ ಹಾರೈಸಿದರು..

ಅತಿಥಿಗಳಾಗಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಕೊಯ್ಯೂರು, ವಲಯದ ಕ್ರೀಡಾ ಮೇಲ್ವಿಚಾರಕ ಗುಣಪಾಲ್, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಜೋಸ್ ಉಪಸ್ಥಿತರಿದ್ದು, ಕ್ರೀಡಾಳುಗಳಿಗೆ ಶುಭ ಹಾರೈಸಿದರು.

ಶಾಲಾ ಸಂಚಾಲಕರು ಮತ್ತು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು ವಾಲಿಬಾಲ್ ಅಂಕಣದಲ್ಲಿ ಸರ್ವಿಸ್ ಮಾಡುವುದರ ಮುಖೇನ ಪಂದ್ಯಾಟಕ್ಕೆ ಚಾಲನೆ ನೀಡಿದರು. ಪಂದ್ಯಾಟದಲ್ಲಿ ತಾಲೂಕಿನ ಬಾಲಕರ ವಿಭಾಗದಿಂದ 8 ತಂಡ, ಬಾಲಕಿಯರ ವಿಭಾಗದಿಂದ 6 ತಂಡಗಳು ಭಾಗವಹಿಸಿದವು. ಶಾಲಾ ಸಂಚಾಲಕ ವಂದನೀಯ ಫಾ| ಸೆಬಾಸ್ಟಿಯನ್ ಇವರ ರೂವಾರಿಯಲ್ಲಿ, ಶಾಲಾ ಭೋಧಕ, ಭೋಧಕೇತರ ಸಿಬ್ಬಂದಿಗಳ, ಇಲಾಖೆಯ ಸಿಬ್ಬಂದಿಗಳ, ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರುಗಳ ಹಾಗೂ ಶಾಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ಪಂದ್ಯಾಟವು ಯಶಸ್ವಿಯಾಗಿ ನಡೆಯಿತು. ಶಾಲಾ ಶಿಕ್ಷಕ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಜ್ವಲ್ ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಧನ್ಯವಾದವಿತ್ತರು.

Related posts

ಉಜಿರೆ: ಎಸ್.ಡಿ.ಎಂ. ಕಾಲೇಜಿನಲ್ಲಿ ಸಮಾಜಕಾರ್ಯ ಪದವೀಧರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಸಿನರ್ಜಿ ಎಚ್‌ಆರ್‌ಡಿ ಸರಣಿ ಕಾರ್ಯಕ್ರಮ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಎಲ್ ಐ ಸಿ ಉಡುಪಿ ವಿಭಾಗದಿಂದ ಬ್ಯಾರಿಕೇಡ್ ಹಾಗೂ ಗಡಿಯಾರ ಕೊಡುಗೆ

Suddi Udaya

ಕಾಡಾನೆ ಹಾವಳಿ ಕುರಿತು ಧರ್ಮಸ್ಥಳದಲ್ಲಿ ಅರಣ್ಯಾಧಿಕಾರಿಗಳಿಗೆ ಮನವಿ

Suddi Udaya

“ನಮ್ಮೂರು ನಮ್ಮ ಕೆರೆ” ವಿಶಿಷ್ಟ ಸೇವೆಗಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ವಿಜಯವಾಣಿ ವಿಜಯರತ್ನ ಅಂತರಾಷ್ಟ್ರೀಯ ಪ್ರಶಸ್ತಿ

Suddi Udaya

ಬೆಳ್ತಂಗಡಿ ದಿ ಆರ್ಟ್ ಆಫ್ ಲಿವಿಂಗ್ ಆನಂದೋತ್ಸವ ಶಿಬಿರದ ಸಮಾರೋಪ

Suddi Udaya

ಉಜಿರೆಯಲ್ಲಿ ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ

Suddi Udaya
error: Content is protected !!