September 6, 2026
ಅಪರಾಧ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಅಕ್ರಮ ಮರಳು ಸಾಗಾಟ: ವಾಹನ ಚಾಲಕನಿಗೆ ನ್ಯಾಯಾಂಗ ಬಂಧನ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ವೇಣೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಆರೋಪಿ ಟಿಪ್ಪರ್ ಚಾಲಕ ಧನಕೀರ್ತಿ ಎಂಬಾತನಿಗೆ ನ್ಯಾಯಾಂಗ ಬಂಧನದ ವಿಧಿಸಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.2 ರಂದು ನಡೆದಿದೆ.

ವೇಣೂರು ಠಾಣಾ ವ್ಯಾಪ್ತಿಯ ವೇಣೂರು ನಾರಾವಿ ರಸ್ತೆಯ ಕೊಕ್ರಾಡಿ ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸುಲ್ಕೇರಿ ನದಿಯಿಂದ ಮರಳನ್ನು ತುಂಬಿಸಿ ವೇಣೂರು ಕಡೆಗೆ ಸಾಗಾಟ ನಡೆಸುತ್ತಿದ್ದ ವೇಳೆ ಪೊಲೀಸರು ಮಿನಿ ಟಿಪ್ಪರ್ ವಾಹನ ನಿಲ್ಲಿಸಿ ಚಾಲಕನನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದು, ಸದ್ರಿ ವಾಹನವನ್ನು ಪರಿಶಿಲಿಸಲಾಗಿ ಇದರಲ್ಲಿ ಸುಮಾರು ಒಂದೂವರೆ ಯೂನಿಟ್ ಮರಳು ಇದ್ದು ಅದರ ಅಂದಾಜು ಮೌಲ್ಯ ರೂ 6,000/- ಗಳಾಗಿದ್ದು, ಸಾಗಾಟಕ್ಕೆ ಬಳಸಿದ ವಾಹನದ ಅಂದಾಜು ಮೌಲ್ಯ ರೂ 2 ಲಕ್ಷ ರೂ. ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸ್ ಸಿಬ್ಬಂದಿಗಳಾದ ಕೃಷ್ಣ ಹೆಚ್ ಸಿ ಮತ್ತು ಸಂತೋಷ್ ಪಾಲ್ಗೊಂಡಿದ್ದರು.

Related posts

ಕಾಸರಗೋಡು ಬೆಳ್ಳೂರ್ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಉಜಿರೆ ಶ್ರೀ ಲಕ್ಷ್ಮೀ ಮಹಿಳಾ ಭಜನಾ ಸಂಘದ ಸದಸ್ಯರಿಂದ ಭಜನಾ ಸೇವೆ

Suddi Udaya

ಗೇರುಕಟ್ಟೆ : ಕಾಂಗ್ರೆಸ್ ಪಕ್ಷದ ಕಳಿಯ ಪಂಚಾಯತ್ ಸಮಿತಿ ಅಧ್ಯಕ್ಷರಾಗಿ ಸತೀಶ್ ನಾಯ್ಕ್ ನಾಳ ಆಯ್ಕೆ. ವೀಕ್ಷಕರಾಗಿ ಪ್ರಮೋದ್ ಕುಮಾರ್ ಮಚ್ಚಿನ ಭಾಗಿ

Suddi Udaya

ಮದ್ದಡ್ಕ: ಬಾವುಟಗುಡ್ಡೆ ನಿವಾಸಿ ಸುನೀತ ಶೆಣೈ ನಿಧನ

Suddi Udaya

ಸವಣಾಲು, ಶಿರ್ಲಾಲು-ಕರಂಬಾರು ಗ್ರಾಮಗಳ ಪ.ಜಾತಿ ಕಾಲೋನಿಗಳಲ್ಲಿ ಸಾಮರಸ್ಯದ ಸಂಕ್ರಾತಿ ಹಬ್ಬ ಆಚರಣೆ

Suddi Udaya

ಉಜಿರೆ ನೀಲಿಯರ ಮನೆಯ ಜೋಮ ಕುರಿಯನ್ ನಿಧನ

Suddi Udaya

ಅಳದಂಗಡಿ ಪೇಟೆಯಲ್ಲಿ ಶಾಸಕ ಹರೀಶ್ ಪೂಂಜರವರಿಂದ ಮತಯಾಚನೆ

Suddi Udaya
error: Content is protected !!