25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿಪ್ರಮುಖ ಸುದ್ದಿ

ಬೆಳಾಲು: ಸೊಸೈಟಿ ವಂಚನೆ ಪ್ರಕರಣ ಆರೋಪಿ ಸದಾಶಿವ ಬಂಧನ- ಕೋರ್ಟ್ ಗೆ ಹಾಜರು ಪಡಿಸಿದ ಪೊಲೀಸರು

ಬೆಳ್ತಂಗಡಿ: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಬ್ಯಾಂಕಿನ ಮಾಜಿ ಸಿಬ್ಬಂದಿ ಸದಾಶಿವ ಯಾನೆ ಸುಜಿತ್ ಬಂಧಿತ ಆರೋಪಿಯಾಗಿದ್ದಾರೆ.

ಮಂಗಳೂರಿನ ಪಡೀಲ್ ನಲ್ಲಿ ತಲೆ ಮರೆಸಿಕೊಂಡಿದ್ದ ಈತನನ್ನು ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಸೆ.5ರಂದು ವಶಕ್ಕೆ ಪಡೆದಿದ್ದರು. ಆರೋಪಿಯನ್ನು ಸೆ.6 ರಂದು ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

*ಏನಿದು ಪ್ರಕರಣ:* ಬೆಳಾಲು ಸೇವಾ ಸಹಕಾರಿ ಬ್ಯಾಂಕಿನಲ್ಲಿ ಬೆಳಾಲು ನಿವಾಸಿ ಪ್ರಕಾಶ್ ಎಂಬಾತ 10 ಲಕ್ಷ ರೂಪಾಯಿ ಹಣ ಮೂರು ವರ್ಷದ ಅವಧಿಗೆ ಸಂಘದಲ್ಲಿ ಠೇವಣಿ ಇರಿಸಿ ಆ ದಿನದಂದು ಠೇವಣಿ ಆಧಾರದಲ್ಲಿ ಮೂರು ಲಕ್ಷದ ಐವತ್ತು ಸಾವಿರ (3,50,000) ರೂಪಾಯಿ ಹಣ ಸಾಲವಾಗಿ ಪಡೆದುಕೊಂಡಿದ್ದ. 28-04-2025 ರಂದು ಒಂದು ಸುಳ್ಳು ಅರ್ಜಿ ಸಂಘಕ್ಕೆ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಪೂರ್ತಿ ಠೇವಣಿ 10 ಲಕ್ಷ ರೂಪಾಯಿ ಬಡ್ಡಿ ಸಹಿತ ನನಗೆ ಮರು ಪಾವತಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ. ನಿಜ ವಿಚಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿ ಹೇಳಿದರೂ ಪ್ರಕಾಶ ಕೇಳದೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿರುವುದಲ್ಲದೆ ನಂತರ ಪದೆ ಪದೆ ಸಂಘದ ಕಚೇರಿಗೆ ಬಂದು ಸಿಬ್ಬಂದಿಗಳಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕುತ್ತಿದ್ದ ಎಂದು ಸಂಘದ ಅಧ್ಯಕ್ಷರಾದ ಪದ್ಮಗೌಡ ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಮೇ.31 ರಂದು ಸದಾಶಿವ.ಓ@ಸುಜಿತ್, ಪ್ರಶಾಂತ.ಬಿ, ಪ್ರಕಾಶ್ ವಿರುದ್ಧ ಕಲಂ -314,316(4),318(3),336(3),306,352,351(2),R/W 3(5) BNS 2023 ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು. ಇಬ್ಬರು ಸಿಬ್ಬಂದಿ ಸದಾಶಿವ @ ಸುಜಿತ್‌ ಮತ್ತು ಪ್ರಶಾಂತ್ ನನ್ನು ಮೇ ತಿಂಗಳಲ್ಲಿ ಅಮಾನತು ಮಾಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಸದಾಶಿವ @ ಸುಜಿತ್ ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

Related posts

ಉಜಿರೆ: ನಾಪತ್ತೆಯಾಗಿದ್ದ ಕ್ರೀಡಾ ವಸತಿ ನಿಲಯದ ಪಿಯುಸಿ ವಿದ್ಯಾರ್ಥಿನಿ ಹೈದರಾಬಾದ್ ನಲ್ಲಿ ಪತ್ತೆ

Suddi Udaya

ಕಾಯರ್ತಡ್ಕ : ಯುವತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಅನಾರೋಗ್ಯದಿಂದ ಬಳಲುತ್ತಿದ್ದ ಮೂರು ವರ್ಷದ ಹೆಣ್ಣು ಮಗು ಸಾವು

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಇಫ್ತಾರ್ ಸ್ನೇಹ ಸಮ್ಮಿಲನ ಕಾರ್ಯಕ್ರಮ

Suddi Udaya

ವೇಣೂರು: ಫೆ.22 ರಿಂದ ಮಾರ್ಚ್ 1ರ ವರೆಗೆ ವೇಣೂರು ಬಾಹುಬಲಿಗೆ ಮಹಾಮಸ್ತಕಾಭಿಷೇಕ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಮಹಾಮಸ್ತಕಾಭಿಷೇಕದ ದಿನ ಘೋಷಣೆ

Suddi Udaya

ಪ್ರತಿಷ್ಠಿತ ಗಾಂಧಿಗ್ರಾಮ ಪ್ರಶಸ್ತಿಗೆ ಕಾಶಿಪಟ್ಣ ಗ್ರಾಮ ಪಂಚಾಯತ್ ಆಯ್ಕೆ

Suddi Udaya
error: Content is protected !!