37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಬೆಳ್ತಂಗಡಿ : ರಸ್ತೆಯಲ್ಲಿ ಧೂಳೋ ಧೂಳ್ ಪ್ರಯಾಣಿಕರಿಗೆ ಸಂಕಟ

ಬೆಳ್ತಂಗಡಿ: ಕಳೆದ ಕೆಲ ದಿನಗಳಿನಿಂದ ಬೆಳ್ತಂಗಡಿ ಪಟ್ಟಣದ ರಸ್ತೆಯಲ್ಲಿ ಧೂಳಿನ ಸಾಮ್ರಾಜ್ಯವೇ ತೆರೆದುಕೊಂಡಿದೆ. ಮಳೆಗಾಲದಲ್ಲಿ ಹೊಂಡಗಳನ್ನು ಮುಚ್ಚಲು ಹಾಕಿದ್ದ ಜಲ್ಲಿ ಹುಡಿ ಇಂದು ಸವಾರಿಗೆ ಧೂಳಿನ ಮಜ್ಜನ ಮಾಡುತ್ತಿದೆ.

ಸಣ್ಣ ವಾಹನ ಚಲಿಸಿದರೂ ಮೇಲೇಳುವ ಧೂಳಿನಿಂದ ಜನರು ರೋಸಿ ಹೋಗಿದ್ದಾರೆ. ತಾಲೂಕು ಕೇಂದ್ರವನ್ನು ಸಂಪರ್ಕಿಸುವ ಗುರುವಾಯನಕೆರೆ, ಸಂತೆಕಟ್ಟೆ, ಬೆಳ್ತಂಗಡಿ, ಲಾಯಿಲ, ಉಜಿರೆ ಸೇರಿದ್ದಂತೆ ನಾನಾ ರಸ್ತೆಗಳು ಧೂಳುಮಯಗೊಂಡಿದೆ.

ಒಂದೇಡೆ ಮಂಗಳೂರು-ವಿಲ್ಲಂಪುರಂ ರಾ.ಹೆ.ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಬಾರಿಯ ವೀಪರಿತ ಮಳೆಯಿಂದ ರಸ್ತೆಗಳಲ್ಲಿ ಹೊಂಡ ಸೃಷ್ಟಿಯಾಗಿತ್ತು. ಇದನ್ನು ಮುಚ್ಚುವ ಸಾಲುವಾಗಿ ತಾತ್ಕಲಿಕವಾಗಿ ಜಲ್ಲು ಹುಡಿಗಳನ್ನು ಹಾಕಿ ಗುಂಡಿ ಮುಚ್ಚುವ ಕಾರ್ಯ ನಡೆದಿತ್ತು. ಆದರೆ ಇದೀಗ ಕೆಲ ದಿನಗಳಿಂದ ಬಿಸಿಲಿನ ವಾತವರಣವಿದ್ದು ರಸ್ತೆಗಳಲ್ಲಿ ವಾಹನ ವೇಗವಾಗಿ ಸಂಚರಿಸುತ್ತಿದ್ದಂತೆಯೇ ಧೂಳು ಮೇಲೇಳುತ್ತಿದೆ. ಇದರಿಂದಾಗಿ ವಾಹನ ಸವಾರರಷ್ಟೆ? ಅಲ್ಲ ರಸ್ತೆಯ ಇಕ್ಕೆಲಗಳ ವರ್ತಕರು, ನಿವಾಸಿಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸಮಸ್ಯೆ:
ರಸ್ತೆ ಬದಿಯ ವಾಣಿಜ್ಯ ಮಳಿಗೆಗಳ ವರ್ತಕರು ಧೂಳಿನಿಂದಾಗಿ ವಹಿವಾಟಿನಲ್ಲಿ ತೊಂದರೆಗೆ ಸಿಲುಕಿದ್ದರೆ, ರಸ್ತೆ ಬದಿಯ ಮನೆಯಲ್ಲಿ ವಾಸವಾಗಿರುವವರು ಧೂಳಿನಿಂದಾಗಿ ಬೇಸತ್ತು ದಿನವಿಡೀ ಮನೆಗಳ ಬಾಗಿಲು ಮುಚ್ಚಿಕೂಡುವಂತಾಗಿತ್ತು. ಅಷ್ಟೆ? ಅಲ್ಲ ರಸ್ತೆಯಲ್ಲಿ ಸಂಚರಿಸುವವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಮಾಸ್ಕ್ ಧರಿಸಿ ಹೋಗುವಂಥ ಸ್ಥಿತಿಯಿತ್ತು. ಅನೇಕರು ಧೂಳಿನಿಂದಾಗಿ ಆರೋಗ್ಯ ಹದಗೆಡುತ್ತಿದೆ ಎಂದಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ರಸ್ತೆಗೆ ನೀರು ಹಾಕು ಕಾರ್ಯ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-ಮನೀಷ್ ವಿ. ಅಂಚನ್ ಪಾಲೇದು

Related posts

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಹೆಚ್ಚಳ

Suddi Udaya

ಬೆಳ್ತಂಗಡಿ ಪಟ್ಟಣದಲ್ಲಿ ನಿಲ್ಲದ ಚಿರತೆ ಹಾವಳಿ: ದಾಳಿಗೆ ಸುದೆಮುಗೇರುವಿನಲ್ಲಿ ನಾಯಿ ಬಲಿ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ‌ ವಿದ್ಯಾರ್ಥಿಗಳಿಂದ ಅದ್ವಿತೀಯ ಸಾಧನೆ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 23.47 ಲಕ್ಷ ನಿವ್ವಳ ಲಾಭ, ಶೇ.9 ಡಿವಿಡೆಂಟ್ ಘೋಷಣೆ

Suddi Udaya

ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರಾಗಿ ಹೇಮಾವತಿ, ಉಪಾಧ್ಯಕ್ಷರಾಗಿ ಪ್ರಿಯಾ ಆಯ್ಕೆ

Suddi Udaya

ಜ.11ರಂದು ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯಕ್ಕೆ ಹಾಜರಾಗಲು ಕೋರ್ಟ್ ಆದೇಶ

Suddi Udaya
error: Content is protected !!